ಯುನೈಟೆಡ್ ಸ್ಟೇಟ್ಸ್ನಲ್ಲಿ, ನ್ಯಾಯಾಧೀಶರು ನ್ಯಾಯಯುತ ಬಳಕೆಯನ್ನು ನಿರ್ಧರಿಸುತ್ತಾರೆ, ಅವರು ಈ ನಾಲ್ಕು ಪ್ರತಿ ಅಂಶಗಳು ನಿರ್ದಿಷ್ಟ ಸಂಗತಿಗೆ ಹೇಗೆ ಅನ್ವಯಿಸುತ್ತದೆ ಎಂಬುದನ್ನು ವಿಶ್ಲೇಷಿಸುತ್ತಾರೆ.
1. ಅಂತಹ ಬಳಕೆಯು ವಾಣಿಜ್ಯ ಗುಣವನ್ನು ಹೊಂದಿದೆಯೇ ಅಥವಾ ಲಾಭರಹಿತ ಶೈಕ್ಷಣಿಕ ಉದ್ದೇಶಗಳಿಗಾಗಿಯೇ ಎಂಬುದನ್ನು ಸೇರಿದಂತೆ ಬಳಕೆಯ ಉದ್ದೇಶ ಮತ್ತು ವಿಧಾನ
ಬಳಕೆಯು “ಪರಿವರ್ತಕ” ಆಗಿದೆಯೇ ಎಂಬುದರ ಮೇಲೆ ನ್ಯಾಯಾಲಯಗಳು ಗಮನ ಕೇಂದ್ರೀಕರಿಸುತ್ತವೆ. ಅಂದರೆ, ಮೂಲಕ್ಕೆ ಹೊಸ ಅಭಿವ್ಯಕ್ತವನ್ನು ಅಥವಾ ಅರ್ಥವನ್ನು ಅದು ಸೇರಿಸುತ್ತದೆಯೇ, ಅಥವಾ ಮೂಲದಿಂದ ಮಾತ್ರ ನಕಲಿಸುತ್ತದೆಯೇ ಎಂಬುದಾಗಿದೆ. ವೀಡಿಯೊವನ್ನು ಹಣ ಗಳಿಕೆ ಮಾಡುವುದು ಮತ್ತು ನ್ಯಾಯಯುತ ಬಳಕೆಯ ರಕ್ಷಣೆಯ ಲಾಭ ತೆಗೆದುಕೊಳ್ಳಲು ಸಾಧ್ಯವಿದ್ದರೂ, ವಾಣಿಜ್ಯಕ ಬಳಕೆಗಳನ್ನು ನ್ಯಾಯಯುತವೆಂದು ಪರಿಗಣಿಸುವ ಸಾಧ್ಯತೆ ತೀರಾ ಕಡಿಮೆ.
2. ಕೃತಿಸ್ವಾಮ್ಯ ಹೊಂದಿರುವ ಕೃತಿಯ ಸ್ವರೂಪ
ಸಂಪೂರ್ಣವಾಗಿ ಕಾಲ್ಪನಿಕ ಕೃತಿಗಳನ್ನು ಬಳಸುವುದಕ್ಕಿಂತ ಪ್ರಾಥಮಿಕವಾಗಿ ವಾಸ್ತವ ಕೃತಿಗಳ ವಿಷಯವನ್ನು ಬಳಸುವುದು ಹೆಚ್ಚು ನ್ಯಾಯಯುತವಾದುದು ಎಂದು ತೋರುತ್ತದೆ.
3. ಒಟ್ಟಾರೆಯಾಗಿ ಕೃತಿಸ್ವಾಮ್ಯ ಹೊಂದಿರುವ ಕೃತಿಯಿಂದ ಬಳಸಿಕೊಳ್ಳಲ್ಪಟ್ಟ ಭಾಗದ ಪ್ರಮಾಣ ಮತ್ತು ಅದರ ಗಂಭೀರತೆ.
ಮೂಲ ಕೃತಿಯಿಂದ ಹೆಚ್ಚಿನ ಅಂಶಗಳನ್ನು ತೆಗೆದುಕೊಳ್ಳುವುದಕ್ಕಿಂತ ಅದರ ಚಿಕ್ಕ-ಪುಟ್ಟ ಅಂಶಗಳನ್ನು ಪಡೆದುಕೊಳ್ಳುವುದು ಹೆಚ್ಚು ಸೂಕ್ತ ಹಾಗೂ ನ್ಯಾಯಯುತವಾಗಿದ್ದು ಎಂದು ಪರಿಗಣಿಸಲಾಗುತ್ತದೆ. ಅದಾಗ್ಯೂ, ಕೆಲವೊಂದು ಸಂದರ್ಭಗಳಲ್ಲಿ ಕೃತಿಯಿಂದ ತೆಗೆದುಕೊಳ್ಳಲಾ ಒಂದು ಚಿಕ್ಕ ಅಂಶವೇ "ಬಹುಮುಖ್ಯ" ಅಂಶವಾಗಿದ್ದರೆ ಅದು ಕೂಡ ನ್ಯಾಯಯುತ ಬಳಕೆಯ ಉಲ್ಲಂಘನೆಯಾಗಬಹುದು.
4. ಕೃತಿಸ್ವಾಮ್ಯದ ವಿಷಯದ ಮೌಲ್ಯ ಅಥವಾ ಮಾರುಕಟ್ಟೆಯ ಮೇಲೆ ಬಳಕೆಯ ಪರಿಣಾಮ.
ಕೃತಿಸ್ವಾಮ್ಯ ಮಾಲೀಕರಿಗೆ ಅವರ ಮೂಲ ಕೃತಿಯಿಂದಾಗುವ ಲಾಭಕ್ಕೆ ಧಕ್ಕೆ ತರುತ್ತದೆ ಎನ್ನಬಹುದಾದ ಬಳಕೆಯು ನ್ಯಾಯಯುತ ಬಳಕೆ ಎಂದು ಪರಿಗಣಿಸಲಾಗುವ ಸಾಧ್ಯತೆ ಕಡಿಮೆ. ಇದರಡಿಯಲ್ಲಿ ಕೆಲವೊಮ್ಮೆ ನ್ಯಾಯಾಲಯಗಳು ವಿಡಂಬನ ಬರಹಗಳಿಗೆ ಸಂಬಂಧಿಸಿದಂತೆ ಕೊಂಚ ವಿನಾಯಿತಿ ನೀಡಿರುವುದು ಉಂಟು.