ನಿನಗೆ ನಾ ಪಂಚಾಮೃತಂ

ಮೂಲವತನದ ಮೌನ ಲೋಲನೆ ನಿನಗೆ ನಾ ಪಂಚಾಮೃತಂ ಮುಕ್ತಿಧಾಮದ ಮುಗ್ಧಲೀಲನೆ ಕೊಳ್ಳುಕೋ ದಿವ್ಯಾಮೃತಂ ಬಾಯಿ ಗಿಂಡಿಯು ದೇಹ ಹಂಡೆಯು ಆತ್ಮ ಕೆಂಡವ ಹಾಕಿದೆ ಮಾಯ ಕುಳ್ಳಿಗೆ ಮೋಹ ಕಳ್ಳಿಗೆ ಯೋಗ ಕೊಳ್ಳಿಯ ಹಚ್ಚಿದೆ ಕಣ್ಣ ಸುಟ್ಟು ಕೈಯ ಸುಟ್ಟು ನನ್ನ ಸುಟ್ಟು ಬೇಸಿದೆ ಹಮ್ಮು ಬಿಮ್ಮು ಸೊಮ್ಮು...

ಕಸ

ಎಲ್ಲ ಮನೆಗಳ ಬೇಡದ ವಸ್ತುಗಳೂ ಬಂದು ಬೀಳುತ್ತವೆ ಕಸದ ತೊಟ್ಟಿಗೆ; ಬಾಳಲು ಒಟ್ಟಿಗೆ! *****

ತಂತ್ರಜ್ಞಾನದ ಭದ್ರತೆಯ ಭವನಗಳು

ಭಯೋತ್ಪಾದಕರ, ಕಳ್ಳಕಾಕರ ಭಯದಿಂದಾಗಿ ಮನೆಗಳನ್ನು ಎಷ್ಟೇ ಭದ್ರವಾಗಿ ಕಟ್ಟಿದರೂ ಒಂದೊಂದು ಸಲ ಮೋಸವಾಗಿ ಬಿಡುತ್ತದೆ. ಎಂತಹ ಭದ್ರತೆ ಇದ್ದರೂ ಕಳ್ಳತನ ಅಥವಾ ಕೊಲೆ ಜರುಗೇ ಇರುತ್ತದೆ. ಇಂಥದ್ದನ್ನೆಲ್ಲ ಹೋಗಲಾಡಿಸಿ ಭದ್ರತೆಯ ಭವನಗಳನ್ನು ಕಟ್ಟಬೇಕೆಂಬ ಆಲೋಚನೆಯಿಂದ ವಿಜ್ಞಾನಿಗಳು ಸಹಾಸಪಟ್ಟರು ಇವರ ಸಾಹಸದ ಪ್ರತಿಫಲವಾಗಿ ಅತ್ಯಾಧುನಿಕ ತಂತ್ರಜ್ಞಾನದ ಭದ್ರತೆಯ ಭವನಗಳು...

ಹೊಸ ಬಗೆಯಲಿ ಬರಲಿ

ಹೊಸ ಬಗೆಯಲಿ ಬರಲಿ ಸುಖ ಸಾವಿರ ತರಲಿ ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ ಮನ್ನಿಸಿ ನಡೆಸಲಿ ಶುಭ ಸಂಕ್ರಾಂತಿ ತುಳಿದು ಆಳಲಾಗದಂಥ ಬಾಳಿಗೆ ಹೊನ್ನಿನ ತೋರಣವ ಬಿಗಿದ ನಾಳೆಗೆ ಹೊಂಬಿಸಿಲಿನ ಹಾದಿಗೆ ಕೇದಗೆ ಹೂ ಬೀದಿಗೆ ಮಾತೆಲ್ಲವು ಕೃತಿಯಾಗುವ ಜಾಡಿಗೆ ಕಣ್ಣೆರಡೂ ಉರಿವ ದೀಪಸ್ತಂಭ ಮೇಲೆತ್ತಿದ...

ಗಳಿಗೆಬಟ್ಟಲ ತಿರುವುಗಳಲ್ಲಿ – ೧೩

ಹಸಿಹಿಟ್ಟು ತಟ್ಟಿತಟ್ಟಿ ಒಂದೇ ಪದರದ ರೊಟ್ಟಿ ಹಾಳೆ. ಕಾವಲಿಯ ಮೇಲೆ ಬೇಯಲಿಕ್ಕಿದ್ದೇ ಉಬ್ಬಿದೆರಡು ಪದರ. ರೊಟ್ಟಿ ಒಂದೇ ಪದರವೆರಡು. ಆಂತರ್ಯ ನಿರ್ವಾತ ಬಹಿರ್ಮುಖ ಸಾಂಗತ್ಯ ಹಸಿವೆಗೆ ಅನೂಹ್ಯ.

ಸೂರ್ಯದ್ವೀಪ

ಕಿರಣ ಕಡಲಲ್ಲಿ ನೀನೊಂದು ಸೂರ್ಯದ್ವೀಪ ಬೆಳಗಿರುವೆ ಜಗತ್ತನ್ನು ಹಿಡದೊಂದು ದಿವ್ಯದೀಪ! *****

ಬೀದಿ

ಈ ಬೀದಿಯಲಿ ಎಷ್ಟೊಂದು ಗೂಡಂಗಡಿಗಳು ಹೊಟ್ಟೆ ಉಬ್ಬಿದ ಬಸುರಿಯಂತೆ ತುಂಬ ತುಂಬಿಕೊಂಡಿವೆ ಗಿಜ ಗಿಜ ಸಾಮಾನುಗಳು ಸಂಜೆ ಸೂರ್ಯ ಸುಮ್ಮನೆ ಇಣುಕಿದ್ದಾನೆ. ಜನರ ಪಾದದ ಗುರುತುಗಳು ಒಂದರ ಮೇಲೊಂದು ಹೊಂದಿಕೊಂಡಿವೆ ಗೆರೆಯಂತೆ ಕಾಣುವ ರಸ್ತೆಯಲಿ ಮಕ್ಕಳ ಕೈ ಹಿಡಿದು ನಡೆದಿದ್ದಾಳೆ ಬೇರೆ ಬೇರೆ ಬಣ್ಣಗಳು ಅಲ್ಲಲಿ ಚೆಲ್ಲಿವೆ....

ಕಣ್ಣೀರಿನ ಕಡಲಿನ ಮೇಲೆ!

ಕಣ್ಣೀರಿನ ಕಡಲಿನ ಮೇಲೆ ಮಿಂಚಿದೆ ನನ್ನೀ ಬಾಳಿನ ಒಲವಿನಲೆ! ದೂರ ತೋರಿದಾ ನೀಲ ಬೆಟ್ಟಗಳ ನೀಲ ಮುಗಿಲಿನಲ್ಲಿ ಮುಳುಗು ಸೂರ್ಯನಾ ಕೆಂಪು ಕಾಡಿಗೆಯ ಬಣ್ಣ ಮಡಿಲಿನಲ್ಲಿ ತಾರೆ ಓರೆಯಲಿ ನಿಂತು ನೋಡುತಿರೆ, ಅಲೆಯು ಮೇಲೆ ಹೊಮ್ಮಿ ಚಿಣ್ಣ ಚಿಣ್ಣನೇ ದುಗುಡ ಹನಿಗಳಲಿ ಹಾರುತಿಹುದು ಚಿಮ್ಮಿ! ನಾವು ಪಡೆದುದಿದು;...

ಕರಿ ನಾಗರಗಳು

ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ ಕೂದಲನ್ನು ಕೊಡವುತ್ತಲೇ ಅಮ್ಮೀ…… ಅಮ್ಮೀ ಎಂದು ಕಿರುಚಿದಳು, ಒಣ ಬಂಗಡೆಯನ್ನು ಕೆಂಡದ ಮೇಲಿಟ್ಟು ಹದವಾಗಿ ಸುಡುತ್ತಿದ್ದ ರಫಿಯು ಉತ್ತರಿಸಲಿಲ್ಲ. ತರನ್ನುಮ್ ಓಡುತ್ತಲೇ ಬಂದು...

ಬರ್ಬರ

ಪ್ರೀತಿ ಮಮಕಾರ ಆದಾಗ ದೂರ ಮನಸ್ಸು ಕಠೋರ ಹೃದಯ ಭಾರ ಬದುಕು ಬರ್ಬರ *****