Category: ಬಾಲ ಚಿಲುಮೆ

ಮೋಡ

ಅಮ್ಮಾ ಅಮ್ಮಾ ಮೋಡವ ಮುಟ್ಟಿ ನೋಡಲು ಹೇಗಿರತೆ? ಬೆಣ್ಣೆಯ ಹಾಗೆ ಮಿದುವಾಗಿರತೇ-ನಿನ್ನ ಕೆನ್ನೆಯ ಹಾಗೆ ನುಣುಪಾಗಿರತೇ? ಹಾಸಿಗೆಯಂತೆ ಮೆತ್ತಗಿರತ್ತೇ–ಬಿದ್ದು ಹೊರಳಾಡಬಹುದೇ ಉರುಳಾಡಬಹುದೇ? ಇರುಳೆಲ್ಲಾ ನಾವದರಲಿ ಮಲಗಿರಬಹುದೇ ಚದ್ದರ ಬಿಟ್ಪು ಕನಸುಗಳನೇ ಹೊದ್ದು? ಚಿಕ್ಕದು ಮಾಡಿ ಜೇಬಲಿ ಇಟ್ಟು ಬೇಕಾದಲ್ಲಿಗೆ ಕೊಂಡೊಯ್ಯಬಹುದೇ? ಅಥವಾ ಅವನೇ ಗದ್ದುಗೆ ಮಾಡಿ ದೇಶವಿದೇಶಕೆ...

ಬೇಗಡೆ

ಬೇಗಡೆ ಬೇಗಡೆ! ಯಾವಾಗ ಬರುವಿ ನಮ್ ಕಡೆ? ರಾಮನ ಮಕುಟದ ಬೇಗಡೆ ಕೃಷ್ಣನ ಕಿರೀಟದ ಬೇಗಡೆ ಬೆಳ್ಳಂಬೆಳಗೇ ಬೆಳ್ಳಿಯ ಹಾಗೆ ಬೆಳಗುವ ಬಿಳಿಯ ಬೇಗಡೆ ಸೂರ್ಯೋದಯಕೆ ಚಿನ್ನದ ಹಾಗೆ ಮಿರುಗುವ ಕೆಂಪಿನ ಬೇಗಡೆ ಸೀತೆಯ ಮನಸನು ಆಕರ್ಷಿಸಿದ ಮಾಯಾಜಿಂಕೆಯ ಬೇಗಡೆ ದ್ರೌಪದಿ ಸೀರೆಯ ಅಕ್ಷಯದಂಚಿನ ಜರಿಯಂತಿರುವ ಬೇಗಡೆ...

ತುಂತುರು ಮಳೆ

ಕುಂತರೂ ನಿಂತರೂ ಸಂತರೂ ಮಹಾಂತರೂ ಶಾಂತರೂ ದಿಗ್ಭ್ರಾಂತರೂ ಯಾರು ಏನೇ ಅಂತರೂ ತುಂತುರು ಮಳೆ ನಿಲ್ಲದು ಅಲ್ಲಿಯು ತುಂತುರು ಇಲ್ಲಿಯು ತುಂತುರು ಆಚೆ ತುಂತುರು ಈಚೆ ತುಂತುರು ಮೇಲೆ ತುಂತುರು ಕೆಳಗೆ ತುಂತುರು ಎಲ್ಲೆಲ್ಲಿಯು ತುಂತುರು ಅಂತೂ ಇಂತೂ ತುಂತುರು ನಿಂತಿತೆಂದರೆ ಶುರು! *****

ಚಂದ ಚಂದದ ಮಕ್ಕಳು

ಚಂದ ಚಂದದ ಮಕ್ಕಳು ಅಂಗಳಕೆ ಬಂದರು ತಿಂಗಳ ಬೆಳಕ ನೋಡಿ ನಲಿದು ನಾಳೆ ಬರುವೆವೆಂದರು ಚಂದ ಚಂದದ ಮಕ್ಕಳು ಹೂದೋಟಕೆ ಹೋದರು ಒಂದೊಂದು ಹೂವಿಗೂ ಪರಿಮಳವ ತಂದರು ಚಂದ ಚಂದದ ಮಕ್ಕಳು ಪಾಠಶಾಲೆಗೆ ತೆರಳಿದರು ಪಾಠ ಕಲಿತು ಓಟಕಿತ್ತು ಊಟಕೆ ಮನೆಗೆ ಬಂದರು ಮಕ್ಕಳು ಬಂದಾರೆ ಊಟ...

ಅತ್ತ ದರಿ ಇತ್ತ ಪುಲಿ

ಅತ್ತ ದರಿ ಇತ್ತ ಪುಲಿ ಹೋಗೋದಾದ್ರೂ ಹೇಗೆ? ದರಿ ಅಂದಿತು: ಇಳಿದು ಬಾ ಸುಖವಾಗಿರುವಿ ಕೆಳಗೆ! ಹುಲಿ ಅಂದಿತು: ಬಳಿಗೆ ಬಾ ಸುಖವಾಗಿರುವಿ ಒಳಗೆ! *****

ಪುಚ್ಚೆ

ಪುಚ್ಚೆ ಪುಚ್ಚೆ! ಏನಿದು ಹುಚ್ಚೆ! ತಿಂಡಿ ತಿಂದಿ ಹಾಲು ಕುಡಿದಿ ಆಮೇಲನ್ನುವಿ ಮಿಯಾಂ ಸಂಜೆವರೆಗೆ ನಿದ್ದೆ ಮಾಡಿದಿ ಕತ್ಲೆಗೆದ್ದು ವಾಕಿಂಗ್ ಹೋದಿ ಆಮೇಲನ್ನುವಿ ಮಿಯಾಂ ಪುಚ್ಚೆ ಪುಚ್ಚೆ! ಏನಿದು ಮಚ್ಚೆ! ಜಾಗ್ರತೆ ಸ್ವಲ್ಪ! ಗುಂಡಿಲಿ ಬಿದ್ದೀ! ಆಮೇಲನ್ನುವಿ ಮಿಯಾಂ *****

ಚಿಂತೆ

ಒಬ್ಬೊಬ್ಬರಿಗೆ ಒಂದೊಂದ್ ಚಿಂತೆ ಗುಳ್ಳೆ ನರಿಗೆ ಬಾಲದ ಚಿಂತೆ ಕಂಠಪುಚ್ಚೆಗೆ ಮೀಸೆಯ ಚಿಂತೆ ಕಾಮನ ಬಿಲ್ಲಿಗೆ ಬಣ್ಣದ ಚಿಂತೆ ನವಿಲಿಗೆ ಸಾವಿರ ಕಣ್ಣಿನ ಚಿಂತೆ ನಿನಗೇತರ ಚಿಂತೆಯೊ ಪುಟ್ಟಾ ಎಂದರೆ ಸಂತೆಯ ಚಿಂತೆ ಅಂತಾನೆ ತುಂಟ! *****

ಮೂನ್‌ಮೂನಣ್ಣ

ಕಾಸಿದ ಹಸುವಿನ ಹಾಲಿನ ಬಣ್ಣ ಜಿಂಕೆಯ ಎರಡೂ ಕೊಂಬಿನ ಕಣ್ಣ ಕಿಟಕಿಯ ಹತ್ತಿರ ಇಣುಕುತ ನಿಂತ ತಾಳೆಯ ಮರದಿಂದ ದೊಪ್ಪಂತ ಬಿದ್ದ ಎದ್ದೊರೆಸಿಕೊಂಡು ಎಲ್ಲೋದ್ನಣ್ಣ ನಮ್ಮಯ ಮುದ್ದಿನ ಮೂನ್‌ಮೂನಣ್ಣ ಹಾಲಲ್ಲಿಲ್ಲ ನೀರಲ್ಲಿಲ್ಲ ಹುಡುಕಿ ನೋಡಿದರೆ ಎಲ್ಲೂ ಇಲ್ಲ ಅಮಾವಾಸ್ಯೆ! *****

ಮಲ್ಲಿಗೆ

ಗುಂಡ್ರು ಮಲ್ಲಿಗೆ ದುಂಡು ಮಲ್ಲಿಗೆ ಬಳ್ಳಿ ತುಂಬ ಕುಂಡ್ರು ಮಲ್ಲಿಗೆ ಯಾರು ನಿನ್ನ ಕಂಡ್ರು ಮಲ್ಲಿಗೆ ಮುಗಿಬಿದ್ದು ತಗೊಂಡ್ರು ಮಲ್ಲಿಗೆ ಸಂತೆಯಲಿ ಸೇವಂತಿ ಮಲ್ಲಿಗೆ ಅರಮನೆಯಲಿ ಎರವಂತಿ ಮಲ್ಲಿಗೆ ಮುಗುಳು ಮಲ್ಲಿಗೆ ಹೊಗಳು ಮಲ್ಲಿಗೆ ನಾಳೆ ನೀನು ಅರಳು ಮಲ್ಲಿಗೆ ಜಡೆ ಜಡೆಯಲಿ ಹೊರಳು ಮಲ್ಲಿಗೆ *****

ಮೊಸಳೆ ಕಣ್ಣೀರು

ಮೊಸಳೆ ಮೊಸಳೆ ಯಾತಕೆ ಇಂತು ಕಣ್ಣೀರಿಡತೀಯಾ? ಅಯ್ಯೋ ಪುಟ್ಟಾ ನನಗೇನಿಲ್ಲ ನಿನಗೇ ಎಲ್ಲಾ ಕಷ್ಟ ಮುಂಜಾನೆದ್ದು ಶಾಲೆಗೆ ಹೋಗುತಿ ಸಂಜೆಗೆ ಬಂದು ಮತ್ತೂ ಓದುತಿ ಜೀವನವೆಲ್ಲಾ ನಷ್ಟಾಂತಪ್ಟ ಅಯ್ಯೋ ಪಾಪ ಅನಿಸದೆ ಇರುತಾ ನಿನ್ನ ಕಂಡರದೇಕೋ ಪುಟ್ಟ ಹೀಗಂತದು ಗೋಳೋ ಅ೦ದು ಕಂಬನಿಗರೆಯಿತು ಧಾರಾಕಾರ ಹಳ್ಳ ತು೦ಬಿತು...