ಹೊಸ ಬಗೆಯಲಿ ಬರಲಿ
ಹೊಸ ಬಗೆಯಲಿ ಬರಲಿ
ಸುಖ ಸಾವಿರ ತರಲಿ
ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ
ಮನ್ನಿಸಿ ನಡೆಸಲಿ ಶುಭ ಸಂಕ್ರಾಂತಿ
ತುಳಿದು ಆಳಲಾಗದಂಥ ಬಾಳಿಗೆ
ಹೊನ್ನಿನ ತೋರಣವ ಬಿಗಿದ ನಾಳೆಗೆ
ಹೊಂಬಿಸಿಲಿನ ಹಾದಿಗೆ
ಕೇದಗೆ ಹೂ ಬೀದಿಗೆ
ಮಾತೆಲ್ಲವು ಕೃತಿಯಾಗುವ ಜಾಡಿಗೆ
ಕಣ್ಣೆರಡೂ ಉರಿವ ದೀಪಸ್ತಂಭ
ಮೇಲೆತ್ತಿದ ತೋಳುಗಳೇ ಕಂಬ!
ದೇಹವೆ ಗುಡಿಯಾಗಿ
ನಾಡೇ ಇಡಿಯಾಗಿ
ಸ್ವಾಗತಿಸಿದೆ ಸಂಕ್ರಾಂತಿಯ ಕೂಗಿ
*****
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)
- ಹೊಸ ಬಗೆಯಲಿ ಬರಲಿ - April 24, 2019
- ದೀಪದ ಕುಡಿಗಳು ಎಲ್ಲೆಲ್ಲೂ - April 17, 2019
- ಬಗೆ ಬಗೆ ದೀಪಾವಳಿ ಬೆಳಗುತ್ತಿದೆ - April 10, 2019