ಪ್ರತ್ಯಾಕರ್ಷಣದ ಮೂಲಗಳು

ಕೃತಿಸ್ವಾಮ್ಯ ಉಲ್ಲಂಘನೆಯ ಅಧಿಸೂಚನೆಯನ್ನು ಸಲ್ಲಿಸಿದ ಬಳಿಕ, ಕೃತಿಸ್ವಾಮ್ಯ ಮಾಲೀಕರಿಗೆ ತಾವು ವಿಷಯವನ್ನು ತಪ್ಪಾಗಿ ಗುರುತಿಸಿರುವುದು ಮನವರಿಕೆಯಾಗಬಹುದು ಅಥವಾ ದೂರಿನ ಕುರಿತು ತಮ್ಮ ಮನಸ್ಸನ್ನು ಬದಲಾಯಿಸಬಹುದು. ಹೀಗಾದಾಗ, ಮೊದಲು ಕೃತಿಸ್ವಾಮ್ಯ ಆರೋಪವನ್ನು ಮೂಲತಃ ಸಲ್ಲಿಸಿದ ವ್ಯಕ್ತಿಯಿಂದ ಕೃತಿಸ್ವಾಮ್ಯದ ಆರೋಪಗಳ ಪ್ರತ್ಯಾಕರ್ಷಣಗಳನ್ನು ಗೌರವಿಸಲು YouTube ಸಂತೋಷ ಪಡುತ್ತದೆ.

ನೀವು ವೀಡಿಯೊವನ್ನು ತೆಗೆದು ಹಾಕಿದರೆ:

ನೀವು ವಿಷಯದ ಮಾಲೀಕರಾಗಿದ್ದರೆ ಹಾಗೂ ಕೃತಿಸ್ವಾಮ್ಯ ಉಲ್ಲಂಘನೆಯ ಅಧಿಸೂಚನೆಯನ್ನು ನಿರಾಕರಿಸಲು ನೀವು ಬಯಸುವುದಾದರೆ, ದಯವಿಟ್ಟು ಕೆಳಗಿನ ಮಾಹಿತಿಯನ್ನು ನಮಗೆ ಕಳುಹಿಸುವುದನ್ನು ಖಚಿತಪಡಿಸಿ:

  1. ಪ್ರತ್ಯಾಕರ್ಷಣದ ಹೇಳಿಕೆ ("ಈ ಮೂಲಕ ನನ್ನ ಕೃತಿಸ್ವಾಮ್ಯ ಉಲ್ಲಂಘನೆಯ ಹಕ್ಕು ಸ್ಥಾಪನೆಯನ್ನು ನಾನು ನಿರಾಕರಿಸುತ್ತಿದ್ದೇನೆ" ಎಂಬಂತಹ)
  2. ಪ್ರಶ್ನಾರ್ಹವಾಗಿರುವ ವೀಡಿಯೊದ ಸಂಪೂರ್ಣ ಹಾಗೂ ನಿರ್ದಿಷ್ಟ URL (ಇದರಂತಹ: www.youtube.com/watch?v=xxxxxxxxx)
  3. ಎಲೆಕ್ಟ್ರಾನಿಕ್ ಸಹಿ (ನಿಮ್ಮ ಪೂರ್ಣ ಕಾನೂನುಬದ್ಧ ಹೆಸರನ್ನು ಟೈಪ್ ಮಾಡುವುದು ಸಾಕಾಗುತ್ತದೆ)

ದಯವಿಟ್ಟು ನಿಮ್ಮ ಮೂಲ ಹಕ್ಕು ಸ್ಥಾಪನೆ ಉಲ್ಲಂಘನೆಯ ಸಲ್ಲಿಸುವಿಕೆಗೆ ಬಳಸಲಾದ ಇಮೇಲ್ ವಿಳಾಸದಿಂದಲೇ copyright@youtube.com ಗೆ ನಿಮ್ಮ ಪ್ರತ್ಯಾಕರ್ಷಣಗಳನ್ನು ಸಲ್ಲಿಸಿ. ಇಮೇಲ್ ವಿಳಾಸವು ವಿಭಿನ್ನವಾಗಿದ್ದರೆ, ನಿಮ್ಮ ಪ್ರತ್ಯಾಕರ್ಷಣವನ್ನು ಪ್ರಕ್ರಿಯೆಗೊಳಿಸಲು ನಮಗೆ ಸಾಧ್ಯವಾಗದಿರಬಹುದು.

ನಿಮ್ಮ ವೀಡಿಯೊವನ್ನು ತೆಗೆದು ಹಾಕಲಾಗಿದ್ದರೆ:

ನೀವು ಕೃತಿಸ್ವಾಮ್ಯ ಹಕ್ಕು ಸ್ಥಾಪನೆಯಿಂದ ಪರಿಣಾಮಕ್ಕೊಳಗಾದ ಬಳಕೆದಾರರಾಗಿದ್ದರೆ, ಪ್ರತ್ಯಾಕರ್ಷಣದ ಹುಡುಕಾಟದಲ್ಲಿ ನೀವು ನೇರವಾಗಿ ಕೃತಿಸ್ವಾಮ್ಯ ಮಾಲೀಕರನ್ನು ತಲುಪಬಹುದು.

YouTube ಖಾತೆಯನ್ನು ಹಕ್ಕುದಾರರು ಹೊಂದಿದ್ದರೆ, YouTube ನ ಖಾಸಗಿ ಸಂದೇಶ ಮಾಡುವಿಕೆಯ ವೈಶಿಷ್ಟ್ಯದ ಮೂಲಕ ಅವರನ್ನು ಸುಲಭವಾಗಿ ಸಂಪರ್ಕಿಸಬಹುದು. ಮೇಲೆ ಪಟ್ಟಿ ಮಾಡಲಾಗಿರುವ ಎಲ್ಲಾ ಐಟಂಗಳೊಂದಿಗೆ copyright@youtube.com ನಲ್ಲಿ ನಮ್ಮನ್ನು ನೇರವಾಗಿ ಸಂಪರ್ಕಿಸಲು ನೀವು ಹಕ್ಕುದಾರರನ್ನು ಕೇಳಬಹುದು.


ದಯವಿಟ್ಟು ಕೃತಿಸ್ವಾಮ್ಯ ಉಲ್ಲಂಘನೆಯ ಮೂಲ ಹಕ್ಕು ಸ್ಥಾಪನೆಯನ್ನು ಸಲ್ಲಿಸಲಾಗಿರುವ ಅದೇ ಇಮೇಲ್ ವಿಳಾಸ ಅಥವಾ ಡೊಮೇನ್‌ನಿಂದ ಮಾತ್ರ ನಾವು ಪ್ರತ್ಯಾಕರ್ಷಣಗಳನ್ನು ಪ್ರಕ್ರಿಯೆಗೊಳಿಸುತ್ತೇವೆ ಎಂಬುದನ್ನು ಗಮನಿಸಿ.