CM of Karnatakaحساب تایید شده

@CMofKarnataka

Official Page of the Chief Minister's Office, Karnataka

Bengaluru, Karnataka
در ۱۳۹۳ مرداد پیوسته است

رسانه تصویری

  1. ۸ ساعت پیش

    ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ ಆಯೋಜಿಸಿದ್ದ ಶ್ರೀಮದ್ ರಂಭಾಪುರಿ ಜಗದ್ಗುರುಗಳ 29ನೇ ವರ್ಷದ ಸಾಂಪ್ರದಾಯಿಕ, ಸರಳ ಶರನ್ನವರಾತ್ರಿ ದಸರಾ ಆಚರಣೆಯನ್ನು ಮುಖ್ಯಮಂತ್ರಿ ರವರು ವರ್ಚುಯಲ್ ಮಾಧ್ಯಮದ ಮೂಲಕ ಇಂದು ಉದ್ಘಾಟಿಸಿದರು.

  2. ۹ ساعت پیش

    ಮುಖ್ಯಮಂತ್ರಿ ರವರು ಇಂದು ಗೃಹ ಕಛೇರಿ 'ಕೃಷ್ಣಾ'ದಿಂದ ದಸರಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ವರ್ಚುಯಲ್ ಮಾಧ್ಯಮದ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ವಿದ್ವಾನ್ ವಿನಾಯಕ್ ತೊರವಿ ಅವರಿಗೆ ಮೈಸೂರಿನಲ್ಲಿ ಪ್ರದಾನ ಮಾಡಲಾಯಿತು.

  3. ۱۹ ساعت پیش

    ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಸಿ.ಪರಿಮಳ ಶ್ಯಾಮ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮೇಯರ್ ತಸ್ನಿಂ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಆರು ಕೊರೋನಾ ಯೋಧರನ್ನು ಸನ್ಮಾನಿಸಲಾಯಿತು. (3/3)

    نمایش این رشته‌توییت
  4. ۱۹ ساعت پیش

    ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ , ಕೃಷಿ ಸಚಿವ , ಸಂಸದ , ಶಾಸಕರುಗಳಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಅಡಗೂರು ಎಚ್.ವಿಶ್ವನಾಥ್, ನಿರಂಜನಕುಮಾರ್, ಎಲ್.ನಾಗೇಂದ್ರ, ಎನ್. ಮಹೇಶ್, ಹರ್ಷವರ್ಧನ್, ಕೆ.ಟಿ.ಶ್ರೀಕಂಠೇಗೌಡ (2/3)

    نمایش این رشته‌توییت
  5. ۱۹ ساعت پیش

    ಮುಖ್ಯಮಂತ್ರಿ ರವರು ಇಂದು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ಅಗ್ರಪೂಜೆ ಸಲ್ಲಿಸಿ, ವಿಧ್ಯುಕ್ತ ಚಾಲನೆ ನೀಡಿದರು. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ|| ಸಿ.ಎನ್.ಮಂಜುನಾಥ್ ದಸರಾ ಉದ್ಘಾಟನೆಯನ್ನು ನೆರವೇರಿಸಿದರು. (1/3)

    نمایش این رشته‌توییت
  6. ۱۹ ساعت پیش

    'ನಾಡಿನ ಸಮಸ್ತ ಜನತೆಗೆ ದಸರಾ ನಾಡಹಬ್ಬದ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಸುಖ, ನೆಮ್ಮದಿ, ಆರೋಗ್ಯಗಳನ್ನು ಕರುಣಿಸಲಿ, ಕೊರೋನಾ, ನೆರೆಸಂಕಷ್ಟಗಳು ಕಳೆದು ನಾಡು ಸಮೃದ್ಧವಾಗಿರುವಂತೆ ತಾಯಿ ಅನುಗ್ರಹಿಸಲಿ. ಸುರಕ್ಷಿತವಾಗಿ ಹಬ್ಬವನ್ನು ಆಚರಿಸೋಣ, ನಾಡಿನ ಒಳಿತಿಗಾಗಿ ಪ್ರಾರ್ಥಿಸೋಣ'- ಮುಖ್ಯಮಂತ್ರಿ .

  7. مهر ۲۵

    ನಾಡಹಬ್ಬ ಮೈಸೂರು ದಸರಾ ಹಾಗೂ ಮೈಸೂರು ಜಿಲ್ಲೆಯ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ರವರು ಉನ್ನತ ಅಧಿಕಾರಿಗಳೊಂದಿಗೆ ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಇಂದು ನಡೆಸಿದ ಸಭೆಯ ಮುಖ್ಯಾಂಶಗಳು;

  8. مهر ۲۵

    ಮುಖ್ಯಮಂತ್ರಿ ರವರು 'ಮೈಸೂರು ದಸರಾ' ಉದ್ಘಾಟನೆಗಾಗಿ ಇಂದು ಮೈಸೂರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ , ಮೇಯರ್ ತಸ್ನಿಂ, ಸಂಸದರಾದ‌ , ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೈಸೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

  9. مهر ۲۵

    ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ|| ಆರ್.ಜಿ.ಆನಂದ್ ರವರು ಮುಖ್ಯಮಂತ್ರಿ ರವರನ್ನು ಇಂದು ಸೌಹಾರ್ದಯುತವಾಗಿ ಭೇಟಿ ಮಾಡಿದರು.

  10. مهر ۲۵

    ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಒಗಳೊಂದಿಗೆ ಮುಖ್ಯಮಂತ್ರಿ ರವರು ಇಂದು ವೀಡಿಯೋ ಸಂವಾದ ನಡೆಸಿದರು. (1/2)

  11. مهر ۲۴

    ರಾಜ್ಯದ ಕೆಲವಡೆ ಹೆಚ್ಚಿನ ಮಳೆಯಾಗುತ್ತಿದ್ದು, ಈಗಾಗಲೇ ಜಿಲ್ಲಾಡಳಿತಗಳು ಮುಂಜಾಗ್ರತಾ ಕ್ರಮವಾಗಿ ಅಪಾಯದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಂಡಿರುತ್ತಾರೆ. ಕೇಂದ್ರ ಸರ್ಕಾರದ ವತಿಯಿಂದ ಕಲಬುರಗಿಯಲ್ಲಿ-2, ಯಾದಗಿರಿಯಲ್ಲಿ-2 ಮತ್ತು ರಾಯಚೂರಿನಲ್ಲಿ-1 NDRF ತಂಡಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. (1/2)

    نمایش این رشته‌توییت
  12. مهر ۲۴

    ಮಾಜಿ ರಾಷ್ಟ್ರಪತಿ ಡಾ ಎ.ಪಿ.ಜೆ ಅಬ್ದುಲ್ ಕಲಾಂ ಜನ್ಮದಿನದ ಅಂಗವಾಗಿ ಯುವ ಬ್ರಿಗೇಡ್ ಆಯೋಜಿಸಿದ್ದ, ದ್ವಿಚಕ್ರ ವಾಹನಗಳಲ್ಲಿ ವಿಜ್ಞಾನದ ಉಪಕರಣಗಳೊಂದಿಗೆ ಸ್ಥಳದಲ್ಲಿಯೇ ಪ್ರಯೋಗಗಳನ್ನು ಮಾಡಿ, ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸುವ 'ಸ್ಪಾರ್ಕ್' ಯೋಜನೆಗೆ ಮುಖ್ಯಮಂತ್ರಿ ರವರು ಇಂದು ಚಾಲನೆ ನೀಡಿದರು. ಉಪಸ್ಥಿತರಿದ್ದರು

  13. مهر ۲۴

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯುಂಟಾಗಿರುವುದರಿಂದ ಸೂಕ್ತ ಪರಿಹಾರ ಒದಗಿಸಲು ಕೋರಿ ಮುಜರಾಯಿ ಹಾಗೂ ಮೀನುಗಾರಿಕೆ ಸಚಿವ ಅವರ ನೇತೃತ್ವದ ನಿಯೋಗವು ಇಂದು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. (1/2)

    نمایش این رشته‌توییت
  14. مهر ۲۴

    ಇಂದು 'ಜಾಗತಿಕ ಕೈತೊಳೆಯುವ ದಿನ'ವನ್ನಾಗಿ ಆಚರಿಸಲಾಗುತ್ತಿದೆ. ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಪ್ರಾಮುಖ್ಯತೆ ಎಲ್ಲರಿಗೂ ಅರ್ಥವಾಗುತ್ತಿದೆ. ನಮ್ಮ ಕೈಗಳನ್ನು ಚೆನ್ನಾಗಿ ತೊಳೆದು ನೈರ್ಮಲ್ಯ ಕಾಪಾಡಿಕೊಳ್ಳೋಣ, ವೈರಾಣು ಹರಡದಂತೆ ತಡೆಯೋಣ.

  15. مهر ۲۴

    'ಧೀಮಂತ ಸಾಧಕ, ಭಾರತರತ್ನ ಡಾ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜಯಂತಿಯಂದು ಅವರಿಗೆ ಅನಂತ ಪ್ರಣಾಮಗಳು. ದೇಶಕಾಗಿ ಸದಾ ತುಡಿಯುತ್ತಿದ್ದ ಕಲಾಂ, ಭೇಟಿಯಾದಾಗಲೆಲ್ಲಾ ಅಭಿವೃದ್ಧಿ ಬಗ್ಗೆಯೇ ಮಾತನಾಡುತ್ತಿದ್ದರು. ಅವರ ವ್ಯಕ್ತಿತ್ವ, ಸಾಧನೆ, ಪರಿಕಲ್ಪನೆಗಳು ಆದರ್ಶಪ್ರಾಯ' - ಮುಖ್ಯಮಂತ್ರಿ .

  16. مهر ۲۳

    ಶಾಸಕ ಅರಗ ಜ್ಞಾನೇಂದ್ರ ಅವರ ನೇತೃತ್ವದ ಅಡಿಕೆ ಕಾರ್ಯಪಡೆ ಹಾಗೂ ನಿಯೋಗವು ಇಂದು ಮುಖ್ಯಮಂತ್ರಿ ರವರನ್ನು ಭೇಟಿ ಮಾಡಿ ಚರ್ಚಿಸಿತು. ಇದೇ ಸಂದರ್ಭದಲ್ಲಿ ನಿಯೋಗವು ಮನವಿಯನ್ನು ಸಲ್ಲಿಸಿತು. ಅಡಿಕೆ‌ ಬೆಳೆಗಾರರು‌ ಆತಂಕಪಡಬೇಕಾಗಿಲ್ಲ, ಟಾಸ್ಕ್ ಫೋರ್ಸ್ ಗೆ ತಕ್ಷಣವೇ ಮೂಲಸೌಕರ್ಯ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

  17. مهر ۲۳

    ಮುಖ್ಯಮಂತ್ರಿ ರವರ ಅಧ್ಯಕ್ಷತೆಯಲ್ಲಿ, ಬೆಂಗಳೂರಿನಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಇಂದು ವಿಡಿಯೋ ಸಂವಾದದ ಮೂಲಕ ಪರಿಶೀಲನಾ ಸಭೆ ಜರುಗಿತು. ಉನ್ನತ ಶಿಕ್ಷಣ ಸಚಿವ , ಆರೋಗ್ಯ ಸಚಿವ , ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ (1/2)

    نمایش این رشته‌توییت
  18. مهر ۲۳

    ಟಿ.ವಿ-9 ಕನ್ನಡ ಸುದ್ದಿವಾಹಿನಿ ಆಯೋಜಿಸಿದ್ದ ಮಾದಕ ವಸ್ತುಗಳ ಸೇವನೆ ವಿರುದ್ಧದ ಜಾಗೃತಿ ಅಭಿಯಾನ "ಡ್ರಗ್ಸ್ ಬೇಡ ಕರ್ನಾಟಕ"ದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ರವರು ಪಾಲ್ಗೊಂಡು ಮಾತನಾಡಿದರು. ಗೃಹ ಸಚಿವ , ಪ್ರಧಾನ ಸಂಪಾದಕ ಶ್ರೀಧರ್ ಉಪಸ್ಥಿತರಿದ್ದರು.

  19. مهر ۲۳

    ಮುಖ್ಯಮಂತ್ರಿ ರವರು ಇಂದು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಆರ್ಥಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಡಾ ಇ.ವಿ.ರಮಣರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  20. مهر ۲۳

    ಬೆಂಗಳೂರಿನ ಭಾರತೀಯ ವಾಯುಸೇನೆಯ ತರಬೇತಿ ಕೇಂದ್ರದ ನೂತನ ಮುಖ್ಯಸ್ಥರಾದ ಏರ್‌ ಮಾರ್ಷಲ್‌ ಆರ್.ಡಿ.ಮಾಥುರ್ ಅವರು ಇಂದು ಮುಖ್ಯಮಂತ್ರಿ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.

به‌نظر می‌رسد بارگزاری صفحه طول کشیده است.

ممکن است ظرفیت توییتر پر باشد یا موقتاً دچار مشکلی شده باشد. دوباره امتحان کنید یا برای اطلاعات بیشتر از وضعیت توییتر بازدید کنید.

    ممکن است این را هم بپسندید

    ·