CM of KarnatakaVerified account

@CMofKarnataka

Official Page of the Chief Minister's Office, Karnataka

Bengaluru, Karnataka
Joined August 2014

Tweets

You blocked @CMofKarnataka

Are you sure you want to view these Tweets? Viewing Tweets won't unblock @CMofKarnataka

  1. Mar 25

    ಈ ಅಪರೂಪದ ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ ಅಂಚೆ ಇಲಾಖೆ ವತಿಯಿಂದ ಹೊರತರಲಾದ 5 ರೂ.ಗಳ ಅಂಚೆ ಲಕೋಟೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

    Show this thread
    Undo
  2. Mar 25

    ಅಮೃತಶಿಲೆಯಲ್ಲಿ ಡಾ. ಅಂಬೇಡ್ಕರ್ ಅವರ ಪ್ರತಿಮೆ ಇಡಿ ದೇಶದಲ್ಲೇ ಇದು ಮೊದಲು. ರಾಜ್ಯ ಸರ್ಕಾರ ರೂ.5.85 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಿದ್ದು, ಗೋಪುರ ಮತ್ತು ಪ್ರತಿಮೆ ಎರಡಕ್ಕೂ ಅಮೃತಶಿಲೆ ಬಳಸಲಾಗಿದೆ ಹಾಗೂ ಗೋಪುರದ ಕಳಸಕ್ಕೆ ಚಿನ್ನದ ಲೇಪ ಅಳವಡಿಸಲಾಗಿದೆ.

    Show this thread
    Undo
  3. Mar 25

    ಭಾರತದಲ್ಲೇ ಅಪರೂಪ ಎನ್ನಲಾದ ಅಮೃತಶಿಲೆಯಲ್ಲಿ ನಿರ್ಮಿಸಲಾದ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಹಾಗೂ ಗೋಪುರವನ್ನು ಮಾನ್ಯ ಮುಖ್ಯಮಂತ್ರಿ ಅವರು ಅನಾವರಣಗೊಳಿಸಿದರು.

    Show this thread
    Undo
  4. Mar 23

    ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಸಂಬಂಧ ರಚನೆಯಾಗಿರುವ ತಜ್ಞರ ಸಮಿತಿ ಮಾನ್ಯ ಮುಖ್ಯಮಂತ್ರಿ ಅವರಿಗೆ ವರದಿ ಸಲ್ಲಿಸಿತು. ಸಮಿತಿ ಅಧ್ಯಕ್ಷರಾದ ವಿ.ಎಸ್. ಉಗ್ರಪ್ಪ ಅವರು ಆರು ಸಾವಿರ ಪುಟಗಳ ವರದಿಯನ್ನು ಹಸ್ತಾಂತರಿಸಿದರು.

    Undo
  5. Mar 23

    ಮಾನ್ಯ ಮುಖ್ಯಮಂತ್ರಿ ಅವರು ಗದಗ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ ಉದ್ಘಾಟನೆ ಮತ್ತು 343 ಗ್ರಾಮೀಣ ಜನವಸತಿಗಳಿಗೆ ನದಿ ಮೂಲದಿಂದ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿ ಲೋಕಾರ್ಪಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಿನ್ನೆ ಚಾಲನೆ ನೀಡಿದರು.

    Undo
  6. Mar 22

    ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ಚಿಂತಕ, ದೀನ ದಲಿತರ ದನಿ ಹಾಗೂ ಚಳವಳಿಗಳನ್ನೇ ಬದುಕನ್ನಾಗಿಸಿಕೊಂಡಿದ್ದ ಧೀಮಂತ ಚೇತನ ರಾಮ ಮನೋಹರ ಲೋಹಿಯಾ ಅವರ ಜನ್ಮದಿನದ ಸಂದರ್ಭದಲ್ಲಿ ನಾಡು ಅವರ ತ್ಯಾಗ ಬಲಿದಾನವನ್ನು ಗೌರವದಿಂದ ಸ್ಮರಿಸುತ್ತದೆ.

    Undo
  7. Mar 22

    ಮಾನ್ಯ ಮುಖ್ಯಮಂತ್ರಿ ಅವರು ಕಾವೇರಿ ಜಲ ವಿವಾದ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕುರಿತು ಚರ್ಚಿಸಲು ಕರೆದಿದ್ದ ಸಂಸದರ ಸಭೆಯಲ್ಲಿ ಭಾಗವಹಿಸಿದರು.

    Undo
  8. Retweeted
    Mar 21

    An ode to the cultural richness, progressive spirit & dynamic ethos of Namma Karnataka. "ನಮ್ಮ ನಾಡು, ಕನ್ನಡ ನಾಡು; ಬೆಳಗುತಿದೆ, ಮುಂದೆ ಸಾಗುತಿದೆ." Download the song from: 

    Undo
  9. Mar 21

    "ನೀರಿನ ಪ್ರತಿ ಹನಿಯೂ ಅಮೂಲ್ಯ" ಮಿತವಾಗಿ ಮತ್ತು ಜವಾಬ್ದಾರಿಯಿಂದ ಸದ್ಬಳಕೆ ಮಾಡಿಕೊಂಡು, ಸಂರಕ್ಷಿಸಬೇಕಾದ ಹೊಣೆ ನಮ್ಮ ಮೇಲಿದೆ. ಎಲ್ಲರೂ ಒಂದಾಗಿ ಪರಿಸರ ವ್ಯವಸ್ಥೆಯ ಮೂಲಾಧಾರವಾದ ನೀರಿನ ಹಿತ-ಮಿತ ಬಳಕೆಯತ್ತ ಜಾಗೃತಿ ಮೂಡಿಸೋಣ.

    Undo
  10. Mar 21

    ಮಾನ್ಯ ಮುಖ್ಯಮಂತ್ರಿ ಅವರು ಪ್ಲಾಂಟರ್ಸ್ ಅಸೋಸಿಯೇಷನ್, ಪ್ಲಾಂಟೇಷನ್ ಕಾರ್ಮಿಕ ಸಂಘಟನೆ ಪದಾಧಿಕಾರಿಗಳು ಹಾಗೂ ರೈತ ಮುಖಂಡರ ಜೊತೆ ಚಿಕ್ಕಮಗಳೂರಿನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿಯವರೊಂದಿಗೆ ಭಾಗವಹಿಸಿದರು.

    Undo
  11. Mar 20

    "ಅರಣ್ಯ ನಾಶ, ಜೀವ ವೈವಿಧ್ಯದ ವಿನಾಶ" ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿ, ಮುಂಬರುವ ಪೀಳಿಗೆಗೂ ಸಮತೋಲಿತ ಜೀವ ಪರಿಸರವನ್ನು ಒದಗಿಸಬೇಕಾದುದ್ದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಬಹುಮುಖ್ಯ ಪಾತ್ರವಹಿಸುವ ಅರಣ್ಯವನ್ನು ಉಳಿಸಿ ಬೆಳೆಸುವತ್ತ ಕಾರ್ಯಪ್ರವೃತ್ತರಾಗೋಣ.

    Undo
  12. Retweeted
    Mar 20

    Our government's milestone project, The Solar Park at Pavagada has got international media coverage from

    Undo
  13. Mar 18

    ಮಾನ್ಯ ಮುಖ್ಯಮಂತ್ರಿ ಅವರನ್ನು ವಿವಿಧ ಮಠಾಧೀಶರ ನಿಯೋಗವು ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಸಂದರ್ಭ.

    Undo
  14. Retweeted
    Mar 17

    ಬೇವು-ಬೆಲ್ಲದಂತೆ ಹಳೆಯ ಕಹಿ ನೆನಪುಗಳನ್ನು ಮರೆತು, ಹೊಸ ಭರವಸೆಯೊಂದಿಗೆ ಮುನ್ನಡೆಯಬೇಕು ಎಂಬ ಸಂದೇಶ ಸಾರುವ ಯುಗಾದಿ ಹಬ್ಬದ ಸಂದರ್ಭದಲ್ಲಿ ನಮ್ಮೊಳಗಿನ ವೈವಿಧ್ಯತೆಯನ್ನು ಗೌರವಿಸುತ್ತಾ, ನವ ಕರ್ನಾಟಕ ನಿರ್ಮಾಣದತ್ತ ಒಂದಾಗಿ ಸಾಗೋಣ.

    Undo
  15. Mar 17

    ನಾಡಿನ ಸಮಸ್ತ ಜನರ ಬಾಳಲ್ಲಿ ಬೇವಿನಂತಹ ಕಹಿ ಕಷ್ಟಗಳು ಕಡಿಮೆಯಾಗಿ, ಬೆಲ್ಲದಂತಹ ಸವಿ ಸುಖಗಳು ಹೆಚ್ಚಲಿ ಎಂದು ಹಾರೈಸುತ್ತೇನೆ. ಹೊಸ ವರ್ಷದ ಯುಗಾದಿಯನ್ನು ಹೊಸತನದೊಂದಿಗೆ ಬರಮಾಡಿಕೊಳ್ಳೋಣ, ನಾವೆಲ್ಲರೂ ಒಂದಾಗಿ ಸಮೃದ್ಧ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ಕರ್ನಾಟಕ ನಿರ್ಮಾಣದತ್ತ ಶ್ರಮಿಸೋಣ.

    Undo
  16. Mar 17

    “ಇರುವುದೆಲ್ಲವ ನೆನೆದು ಬಾರೆನೆಂಬುದನ್ನು ಬಿಡು ಹರುಷಕ್ಕಿದೆ ದಾರಿ” ತಮ್ಮ ಕಗ್ಗದ ಮೂಲಕ ಜೀವನ, ಕೌಶಲ್ಯ ಅಭಿವೃದ್ಧಿ, ವ್ಯಕ್ತಿತ್ವ ವಿಕಸನ, ಒತ್ತಡದ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಅತ್ಯಂತ ಸರಳವಾಗಿ ವಿವರಿಸಿ, ಕನ್ನಡ ಸಾಹಿತ್ಯ ಲೋಕದಲ್ಲಿ ಅಮರರಾಗಿರುವ ಡಿ.ವಿ. ಗುಂಡಪ್ಪನವರನ್ನು ನಾಡು ಗೌರವದಿಂದ ಸ್ಮರಿಸುತ್ತದೆ.

    Undo
  17. Mar 16

    Rashtra Kavi Kuvempu hailed Karnataka as the daughter of India (ಭಾರತ ಜನನಿಯ ತನುಜಾತೆ). A confident nation is proud of the individuality of all her daughters. CM on Regional Identity & Federalism:

    Undo
  18. Mar 16
    Undo
  19. Retweeted
    Mar 16

    My identity as a proud Kannadiga is not inconsistent with my identity as a proud Indian. My thoughts on Regional Identity & Federalism:

    Undo
  20. Mar 15

    ಮಾನ್ಯ ಮುಖ್ಯಮಂತ್ರಿ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ನೆರವೇರಿಸಿದರು.

    Undo

Loading seems to be taking a while.

Twitter may be over capacity or experiencing a momentary hiccup. Try again or visit Twitter Status for more information.

    You may also like

    ·