#ಹಾಸ್ಯ

ದೇವರ ಪೂಜೆ

0

(ಮನೆಯ ಯಜಮಾನರಿಗೆ ದೇವರಲ್ಲಿ ತುಂಬಾ ಶ್ರದ್ಧೆ. ಸ್ವತಃ ಪೂಜೆ ಮಾಡಿ ನೈವೇದ್ಯ ತೋರಿಸದಿದ್ದರೆ ಮನಸ್ಸಿಗೆ ಹೇಗೊ ಹೇಗೊ ಎನಿಸುವದೆಂದು ಯಾವಾಗಲೂ ಅವರು ಹೇಳುವರು. ಇಂದು ಸ್ನಾನಮಾಡಿ ದಿನದಂತೆಯೇ ಯಜಮಾನರು ದೇವರ ಕಟ್ಟೆಯ ಮೇಲೆ ಪೂಜೆಗೆ ಕುಳಿತಿರುವರು. ದೇವರ ಕಟ್ಟೆಯ ಎಡಪಕ್ಕದಲ್ಲಿಯೇ ಅಡಿಗೆಯ ತಗ್ಗಿನಕಟ್ಟೆ. ಹೆಣ್ಣು ಮಗಳೊಬ್ಬಳು ಅಡಿಗೆ ಮಾಡುತ್ತಿರುವಳು. ರಾಯರ ಪೂಜೆಗೆ ಆರಂಭವಾಗುವದು.) “ಓಂ ಕೇಶವಾಯನಮಃ […]

#ಹಾಸ್ಯ

ಜೀವಂತ ಜ್ವಾಲಾಮುಖಿ ಅಥವಾ ಹಳ್ಳಿಯ ಸೊಸ್ತ್ಯಾರು

0

“ಅಯ್ಯ ಶಿವನಽಽ….,’ ಸೊಸ್ತ್ಯಾರು ಮಕ್ಕಳು ನೂಲತಿದ್ದರ ನನ್ನ ಗತಿ ಹಿಂಗ್ಯಾಂಕ ಆಗತಿತ್ತೊ ಯಪ್ಪಾ!…….. ಇವರೆಲ್ಯಾರೇ ದಗದಾ ಮಾಡವರಽ ದಗದಾ? ಹತ್ತಿ ಅರೀಲಾಕ ಕಲ್ಲ ಇಡ್ರೇ ಅಂದರ ನಡಾ ನೂಸತೈತಿ. ಪಿಂಡ್ರಿ ನೂಸತಾವು…. ಅಂತಾರು! ಒಂದಽ ಒಂದ ಧಡೆ ಕಾಳು ಆರೂದ್ರಾಗಽ ಚರೀನ ಕಟ್ತಾರ ಮ್ಯಾಗಿಂದ ತೆಳತನಕಾ! ಇದರಾ ಬದರಾ ಕಟ್ಟೀ ಮ್ಯಾಗ ಕುಂತು ಚಕ್ಕಂದ ಆಡಲಾಕ […]

#ಹಾಸ್ಯ

ಆತಿಥ್ಯ

0

(ಹಳ್ಳಿ ಯೂರ ಸಭ್ಯಗೃಹಸ್ಥರೊಬ್ಬರ ಮನೆ; ಅತಿಥಿಗಳೊಬ್ಬರು ಮನೆಗೆ ಬರುವರು ಮನೆಯ ಯಜಮಾನನು ಗಡಬಡಿಸಿ ಎದ್ದು ನುಡಿಯುವನು) “ಆಲಲ ರಾಯರ ಬರೋಣಾಯ್ತೇನು?…. ಬರಬೇಕ…. ಬರಬೇಕು. ಇದೇನಿದು ಬಡವರ ಮನೀಗೆ ಭಾಗೀರಥಿ ಬಂದಹಾಂಗ?…. ಇಲ್ಲೆ ,ಇಲ್ಲೆ ಮ್ಯಾಲೆ ಕೂಡ್ರಿ ರಾಯರಽ! ಎಲೋ… ಯಾರಾವರು….? ದಿಂಬೆಲ್ಲಿ ಅದನೋ….? ತಾ; ತಾ, ಲಗೂನಽ ತಾ! ಏನಪಾ… ಈ ಹುಡಗೋರು….! ಇಟ್ಟದ್ದು ಇಟ್ಟಲ್ಲಿ […]

#ಹಾಸ್ಯ

ಮಾಸ್ತರ್‌ಗಿಟ್ಟ ಮುಳ್ಳು, ಹೆಗಲಿಗೆ ಬಿತ್ತು ಡೊಳ್ಳು

0

ಗುರು ಬ್ರಹ್ಮಃ ಗುರು ವಿಷ್ಣುಃ!! ಗುರು ದೇವೋ ಮಹೇಶ್ವರಃ| ಗುರು ಸಾಕ್ಷಾತ್ ಪರಬ್ರಹ್ಮಃ| ತಸ್ಮೈ ಶ್ರೀ ಗುರವೇ ನಮಃ| – ಎಂದು ಗುರುವಿಗೆ ವಂದಿಸುತ್ತಾ, ಗುರುವಿನ ಮಹತ್ವವನ್ನು ತಿಳಿಸುವ ಪ್ರಾರ್ಥನೆಯನ್ನು ಮಾಡುತ್ತೇವೆ. ಇಂಥಹ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎಂದು ಹೇಳುವ ನಾವು ಗುರು ಬ್ರಹ್ಮಾಂಡದಲ್ಲಿ ಅಡಗಿದ ವಿಶ್ವಜ್ಞಾನವನ್ನು ಸದಾಕಾಲ ಸ್ಮರಿಸಿಕೊಳ್ಳುತ್ತೇವೆ. ಇಂಥಹ ಗುರುವಿನ […]

#ಹಾಸ್ಯ

ಕಲಿಯುಗದ ಹರಿಶ್ಚಂದ್ರ ಅರ್ಥಾತ್ ಸಾಕ್ಷೀದಾರ

0

(ವಿಜಾಪುರ ಡೋಣಿಸಾಲಿನ ಭಾಷೆಯಲ್ಲಿದೆ) ರಾಮಣ್ಣ- ನಟ್ಟ ಕಡದಾದ್ರೂ ಖರೇತನದಿಂದ ಹೊಟ್ಟೀ ತುಂಬಿಕೋ ಬೇಕಂತ ಶಾಸ್ತ್ರಾ ಹೇಳ್ಳಾಕ ಬಂದಾರು ಶಾಸ್ತ್ರಾನ ಏ. ಯಾರು ಕೇಳಿದ್ರ ನನ್ನ, ನಟ್ಟು ಕಡೂಮುಂದಽ. ಎಷ್ಟ ನಶಿಕ್ಲೆ ಹೋದ್ರೂ ತಡಾಯಾಕಂತ ಕೇಳವ್ರಽ ಮತ್ತ ನಟ್ಟ ಕಡದ ಮ್ಯಾಲ ಹೆಂಟಿ ಉಳಿದೂವು ಪಳಿ ಉಳಿದೂವು ಗುದ್ಲಿ ನೆಟ್ಗ ಇಳಿಸಿಲ್ಲಾಽ ಬಿಸಲ್ನೆತ್ತಿಮ್ಯಾಗ ಬಂದಿಲ್ಲಾಽ ಇನ್ನೂ ಆರತಾಸ […]

#ಹಾಸ್ಯ

ಕಾಶೀಬಾಯಿಯವರ ಯಾತ್ರಾಪ್ರಯಾಣ

0

ಕಾಶೀಬಾಯಿ- “ಟಾಂಗಾ ಬಂತು! ಎಂಥಾ ಲಗೂನ ಗಾಡೀ ಹೊತ್ತಾತಿದೂ. ಮುಂಜಾನಿಂದ ಗಡಿಬಿಡಿ ಗಡಿಬಿಡಿ ಇನ್ನೂ ಕೆಲಸ ಮುಗಿದಽ ಇಲ್ಲ. ಆಯ್ತು. ಕೈಕಾಲ ಘಟ್ಟಿ ಇರೂದ್ರೊಳಗಽ ಉಡುಪಿ ಕೃಷ್ಣನ್ನಽ ನೋಡೆರ ಬರೂಣ. ಗಂಟ ಕಟ್ಟಿದ್ದಽ ಅದ. ವೈದು ಟಾಂಗಾದಾಗ ಇಡಪಾ. ನೀ ಬ್ಯಾಡ ಮಲ್ಯಾ. ಈಗಽ ಮೈಲಿಗಿ ಮಾಡಬ್ಯಾಡ, ಗೋವಿಂದಾ ನೀ ಒಯ್ದು ಇಡ ಬಾಳಾ. ಹಿಂದಿನ […]

#ಹಾಸ್ಯ

ಒಕ್ಕಲಗಿತ್ತಿಯರ ಒಲವಿನ ಹಬ್ಬ ಯುಗಾದಿ !

0

ಬೆಂಗ್ಳೂರಿನ ಡಾಲರ್‍ಸ ಕಾಲನಿಯಲ್ಲಿಯ ನನ್ನ ಅಗದೀ ಪೆಟ್ ಲಂಗೋಟಿ ದೋಸ್ತ “ಹುಬ್ಬಳ್ಳಿ ಸಾವ್ಕಾರ”ನ ಮನೆಗೆ ಹೋದಾಗ ಒಂದು ಬಲಂಡ ಭಾರೀ ವಿಚಿತ್ರ ಕಂಡು ದಂಗುದಕ್ಕಾದೆ. ಏನೆಂದರೆ ಅವರ ಬಿಲ್ಡಿಂಗಿನ ಮೇಲಿನ ಸಾವಿರ ಲೀಟರ ನೀರಿನ ಸಿಂಟ್ಯಾಕ್ಸಿಗೆ ಯಾವುದೋ ತಪ್ಲಾ ಹಾಕಿದ್ದರು. ನಾನು ವಕಾವಕಾ ಬಾಯ್ಬಿಟ್ಟು…..”ಇದೇನೋ ದೋಸ್ತಾ ?” ಅಂತ ಕೇಳಿದೆ. ಆತ ಖುಶಿಯಿಂದ ಹೇಳಿದ- “ಮಾರಾಯಾ….ನಾಳೆ […]

#ಹಾಸ್ಯ

ನನಗಿರಲಿ ಬೆಂಗ್ಳೂರ ಬಾಲಿ!

0

“ಸಿಲಿಕಾನ್ ಸುಂದರಿ ಬೆಂಗಳೂರು”… “ಗಾರ್ಡನ್ ಸಿಟಿ ಬೆಂಗಳೂರು”… “ಐಟಿ ಕಿಂಗ್ಡಂ ಬೆಂಗಳೂರು”.. ಅಂತ ಸನಾದಿ ಊದಿದ್ದೇ ಊದಿದ್ದು! ಉತ್ತರ ಕರ್ನಾಟಕದ ದಡ್ಡನಾದ ನನಗೆ ಇತ್ತೀಚೆಗೆ ಗೊತ್ತಾದ ಬೆಂಗಳೂರಿನ ಮಹಾ ಮಹಿಮೆ ಎಂದರೆ… “ಸಕ್ಕರೆ ರೋಗದ ಅಕ್ಕರೆಯ ರಾಜಧಾನಿ ಬೆಂಗಳೂರು…” “ಬ್ಲಡ್ ಪ್ರೆಶರಿನ ಫ್ಲಡ್ಡು ಬೆಂಗಳೂರು…” ಇತ್ಯಾದಿ… ಇತ್ಯಾದಿ! ಅಸಲಿ ಬೆಂಗಳೂರಿನವರ ಬಗ್ಗೆ… “ಬೆಲ್ಲದಂಗ ಸೀ ಮಾತಾಡಿ […]

#ಹಾಸ್ಯ

ಅಂತೂ ಸಾಹಿತಿಯಾಗಿಬಿಟ್ರಲ್ಲಾ……!

0

ಇದೊಂದು ರೀತಿಯ ನೆನಪಿನ ಬುತ್ತಿಯನ್ನು ಉಣಬಡಿಸುವ ಪ್ರಯತ್ನ ನನ್ನದು. ಇದರಲ್ಲಿ ಖುಷಿ, ಮಜಾ ಮತ್ತು ತಿಳಿದುಕೊಳ್ಳುವಂತದ್ದು ಏನಾದರೂ ಇದ್ದರೆ, ಓದ್ರಿ, ನಾನು ೫ ನೇ ಕ್ಲಾಸ್‌ನಲ್ಲಿದ್ದಾಗ ನಮ್ಮಮ್ಮನ ತವರ್‍ಮನೆ ಕೆ.ಬೂದಿಹಾಳದಲ್ಲಿ ಓದುತ್ತಿದ್ದೆ. ಶಾಲೆಯಲ್ಲಿ ನಾನೇ ದೊಡ್ಡ ವಿದ್ಯಾರ್ಥಿಯಾದ್ದರಿಂದ ವಾರ್ಷಿಕ ದಿನಾಚರಣೆ ಮತ್ತು ವಿಶೇಷ ದಿನಗಳಲ್ಲಿ ಏಕಾಂಕ ನಾಟಕಗಳನ್ನು ಅಲ್ಲಿಯ ಮಾಸ್ತರು ನನ್ನಿಂದ ಮಾಡಸ್ತಿದ್ರು. ಎಲ್ರಗಿಂತ ನಾನೇ […]

#ಹಾಸ್ಯ

ಮರೆಯಲಾಗದ ಮೊದಲ ರಾತ್ರಿ

0

ಏನ್‌ ಗ್ರಾಚಾರ ಸಾ…….ಅ ಅರೆ ಮಂಪರಿನಲ್ಲಿದ್ದ ನಾನು ಆ ದನಿಗೆ ಕಣ್ಣು ತೆರೆದೆ. ಸುಗುಣ ಡಾಕ್ಟರರು. ಅವರ ಜತೆಯಲ್ಲಿ ಹತ್ತೋ, ಹನ್ನೆರಡೋ ಮುಖಗಳು. ನಾನಿದ್ದದ್ದು ಕುರುಂಜಿ ವೆಂಕಟ್ರಮಣ ಗೌಡ ಮೆಡಿಕಲ್‌ ಕಾಲೇಜು ಹಾಸ್ಪಿಟಲ್ಲಿನ ಕ್ಯಾಜುವಲ್ಟಿಯಲ್ಲಿ. ನನ್ನ ರಕ್ಷಣೆಗಿದ್ದವನು ಕಾಂತಮಂಗಲದ ಬಣ್ಣದ ಸುಧಾಕರ. ಪಕ್ಕದ ಮನೆಯ ಹುಡುಗ ಸುಧಾಕರನಿಗೆ ಯಕ್ಷಗಾನದ ಮೊದಲ ಪಾಠಗಳನ್ನು ಹೇಳಿಕೊಟ್ಟವನು ನಾನು. ಈಗವನು […]