goglobalwithtwitterbanner

ಸುಧಾರಿತ ಸದ್ದಡಗಿಸುವ ಆಯ್ಕೆಗಳನ್ನು ಬಳಸುವ ಬಗೆ

ಶಬ್ದಗಳು ಮತ್ತು ಹ್ಯಾಶ್‌ಟ್ಯಾಗ್‌ಗಳಿಗೆ ಸದ್ದಡಗಿಸುವ ಆಯ್ಕೆಗಳು

 

ನೀವು ದೂರವಿಡಲು ಬಯಸುವ ಟ್ವೀಟ್‌ಗಳಲ್ಲಿನ ವಿಷಯವನ್ನು ನೀವು ನೋಡಬಹುದು. ನಿರ್ದಿಷ್ಟ ಪದಗಳು, ನುಡಿಗಟ್ಟುಗಳು, ಬಳಕೆದಾರರ ಹೆಸರುಗಳು, ಎಮೋಜಿಗಳು ಅಥವಾ ಹ್ಯಾಶ್ ಟ್ಯಾಗ್‌ಗಳನ್ನು ಒಳಗೊಂಡಿರುವ ಟ್ವೀಟ್‌ಗಳನ್ನು ಸದ್ದಡಗಿಸುವ ಆಯ್ಕೆಯನ್ನು ನಾವು ನಿಮಗೆ ಕೊಡುತ್ತೇವೆ. ಸದ್ದಡಗಿಸುವುದರಿಂದ ಈ ಟ್ವೀಟ್‌ಗಳನ್ನು ನಿಮ್ಮ ಸೂಚನೆಗಳ ಟ್ಯಾಬ್‌, ಪುಶ್ ಸೂಚನೆಗಳು, ಎಸ್ಎಮ್ಎಸ್, ಇಮೇಲ್ ಸೂಚನೆಗಳು, ಹೋಮ್‌ ಟೈಮ್‌ಲೈನ್‌ ಮತ್ತು ಪ್ರತಿಕ್ರಿಯೆಗಳಿಂದ ಟ್ವೀಟ್‌ಗಳವರೆಗೆ ಅಳಿಸಲಾಗುತ್ತದೆ.

ಗಮನಿಸಿ: ಶಬ್ದಗಳು ಮತ್ತು ಹ್ಯಾಶ್‌ಟ್ಯಾಗ್‌ಗಳ ಸದ್ದಡಗಿಸುವಿಕೆಯು ನಿಮ್ಮ ಸೂಚನೆಗಳು ಮತ್ತು ಹೋಮ್ ಟೈಮ್‌ಲೈನ್‌ಗೆ ಅನ್ವಯವಾಗುತ್ತದೆ. ಆದರೂ ನೀವು ಹುಡುಕಾಟದ ಮೂಲಕ ಈ ಟ್ವೀಟ್‌ಗಳು ನಿಮಗೆ ಕಾಣಿಸುತ್ತವೆ. ಸದ್ದಡಗಿಸಿದ ಶಬ್ದಗಳು ಮತ್ತು ಹ್ಯಾಶ್‌ಟ್ಯಾಗ್‌ಗಳಿಗೆ ಸೂಚನೆಗಳನ್ನು ಪ್ರತಿಕ್ರಿಯೆಗಳು ಮತ್ತು ನಮೂದುಗಳಿಗೆ ಅನ್ವಯಿಸಲಾಗುತ್ತದೆ ಮತ್ತು ಆ ಪ್ರತಿಕ್ರಿಯೆಗಳು ಮತ್ತು ನಮೂದುಗಳಿಗೆ ಮಾಡಲಾಗುವ ಎಲ್ಲ ಸಂವಹನಗಳಿಗೂ ಅಂದರೆ, ಇಷ್ಟಗಳು, ಮರುಟ್ವೀಟ್‌ಗಳು, ಹೆಚ್ಚುವರಿ ಪ್ರತಿಕ್ರಿಯೆಗಳು ಮತ್ತು ಕಾಮೆಂಟ್ ಸಹಿತ ಮರುಟ್ವೀಟ್‌ಗಳಿಗೂ ಅನ್ವಯಿಸಲಾಗುತ್ತದೆ. 

ನೀವು ಹಿಂಬಾಲಿಸುವ ಖಾತೆಯು ಟ್ವೀಟ್‌ ಮಾಡಿದಾಗ ಮೊಬೈಲ್ ಸೂಚನೆಗಳನ್ನು ಪಡೆಯಲು ನೀವು ಆಯ್ಕೆ ಮಾಡಿಕೊಂಡಿರಬಹುದು. ಹಾಗೆ ಮಾಡಿಕೊಂಡಿದ್ದರೆ, ಸದ್ದಡಗಿಸಿದ ಶಬ್ದಗಳು ಮತ್ತು ಹ್ಯಾಶ್‌ಟ್ಯಾಗ್‌ಗಳು ಈ ಸೂಚನೆಗಳಿಗೆ ಅನ್ವಯಿಸುವುದಿಲ್ಲ. ನೀವು ಸದ್ದಡಗಿಸಿದ ಒಂದು ಶಬ್ದ ಅಥವಾ ಹ್ಯಾಶ್‌ಟ್ಯಾಗ್‌ ಅನ್ನು ಅವರ ಟ್ವೀಟ್‌(ಗಳು) ಒಳಗೊಂಡಿದ್ದರೂ ಈ ಖಾತೆಗಳಿಂದ ಮೊಬೈಲ್ ಸೂಚನೆಗಳನ್ನು ನೀವು ಸ್ವೀಕರಿಸುತ್ತಿರುತ್ತೀರಿ.

ಸದ್ದಡಗಿಸಿದ ಶಬ್ದಗಳು, ಪದಗುಚ್ಛಗಳು, ಬಳಕೆದಾರರ ಹೆಸರು, ಎಮೋಜಿಗಳು ಮತ್ತು ಹ್ಯಾಶ್‌ಟ್ಯಾಗ್‌ಗಳ ಮುನ್ನೋಟ‌:

  • ಸದ್ದಡಗಿಸುವಿಕೆಯು ಕೇಸ್ ಸೆನ್ಸಿಟಿವ್ ಆಗಿಲ್ಲ. ಉದಾಹರಣೆಗೆ:
    • ನಿಮ್ಮ ಸದ್ದಡಗಿಸುವ ಪಟ್ಟಿಯಲ್ಲಿ ನೀವು “CATS” ಸೇರಿಸಿದ್ದರೆ, ಎಲ್ಲಾದರೂ “cats” ಅನ್ನು ನಮೂದಿಸಿದರೂ ನಿಮ್ಮ ಸೂಚನೆಗಳಲ್ಲಿ ಅದನ್ನುನ ಸದ್ದಡಗಿಸಲಾಗಿರುತ್ತದೆ.
  • ಸದ್ದಡಗಿಸುವಾಗ ಶಬ್ದ ಅಥವಾ ಪದಗುಚ್ಛದೊಳಗೆ ವಿರಾಮ ಚಿಹ್ನೆಯನ್ನೂ ನೀವು ಸೇರಿಸಬಹುದು. ಶಬ್ದ ಅಥವಾ ಪದಗುಚ್ಛದ ಕೊನೆಯಲ್ಲಿ ವಿರಾಮ ಚಿಹ್ನೆ ಅಗತ್ಯವಿಲ್ಲ.
  • ಒಂದು ಶಬ್ದವನ್ನು ಸದ್ದಡಗಿಸಿದರೆ ಆ ಶಕ್ತ ಮತ್ತು ಅದರ ಹ್ಯಾಶ್‌ಟ್ಯಾಗ್‌ ಅನ್ನೂ ಸದ್ದಡಗಿಸಲಾಗುತ್ತದೆ. ಉದಾಹರಣೆಗೆ:
    • ನೀವು “ಯೂನಿಕಾರ್ನ್‌” ಅನ್ನು ಸದ್ದಡಗಿಸಿದರೆ "ಯೂನಿಕಾರ್ನ್‌" ಮತ್ತು "#ಯೂನಿಕಾರ್ನ್‌" ಎಂಬ ಎರಡನ್ನೂ ನಿಮ್ಮ ಸೂಚನೆಗಳಿಂದ ಸದ್ದಡಗಿಸಲಾಗುತ್ತದೆ.
  • ಹೋಮ್‌ ಟೈಮ್‌ಲೈನ್‌ನಲ್ಲಿ ಟ್ವೀಟ್‌ಗಳು ಅಥವಾ ನಿರ್ದಿಷ್ಟ ಖಾತೆ ನಮೂದಿಸುವ ಟ್ವೀಟ್‌ಗಳಿಗೆ ಪ್ರತಿಕ್ರಿಯೆಗಳಿಂದ ಟ್ವೀಟ್‌ ಸೂಚನೆಗಳನ್ನು ಸದ್ದಡಗಿಸಲು ನೀವು ಹೆಸರಿನ ಹಿಂದೆ @ ಚಿಹ್ನೆಯನ್ನು ಸೇರಿಸಬೇಕು. ಹೀಗೆ ಮಾಡುವುದರಿಂದ, ಆ ಖಾತೆಯನ್ನು ನಮೂದಿಸಿದ ಟ್ವೀಟ್ ಸೂಚನೆಗಳನ್ನು ಸದ್ದಡಗಿಸಲಾಗುತ್ತದೆ, ಆದರೆ ಆ ಖಾತೆಯನ್ನೇ ಸದ್ದಡಗಿಸಲಾಗುವುದಿಲ್ಲ
  • ಗರಿಷ್ಠ ಅಕ್ಷರವನ್ನು ಹೊಂದಿರುವ ಶಬ್ದಗಳು, ಪದಗುಚ್ಛಗಳು, ಬಳಕೆದಾರರ ಹೆಸರು, ಎಮೋಜಿಗಳು ಮತ್ತು ಹ್ಯಾಶ್‌ಟ್ಯಾಗ್‌ಗಳನ್ನು ಸದ್ದಡಗಿಸಲಾಗುತ್ತದೆ.
  • Twitter ಬೆಂಬಲಿಸುವ ಎಲ್ಲ ಭಾಷೆಗಳಲ್ಲಿ ಸದ್ದಡಗಿಸುವಿಕೆ ಸಾಧ್ಯವಿದೆ.
  • ಸದ್ದಡಗಿಸುವಿಕೆಯ ಡೀಫಾಲ್ಟ್‌ ಕಾಲಾವಧಿಯು ಎಂದಿಗೂ ಎಂದು ನಿಗದಿಸಲಾಗಿರುತ್ತದೆ. ಸದ್ದಡಗಿಸುವಿಕೆ ಕಾಲಾವಧಿಯನ್ನು ಹೇಗೆ ಹೊಂದಿಸುವುದು ಎಂಬ ಬೆಂಬಲಿತ ಸಾಧನಗಳಿಗಾಗಿ ಸೂಚನೆಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
  • ನಿಮ್ಮ ಸೆಟ್ಟಿಂಗ್ಸ್‌ನಲ್ಲಿ ನಿಮ್ಮ ಸದ್ದಡಗಿಸಿದ ಶಬ್ದಗಳ ಪಟ್ಟಿಯನ್ನು ನೀವು ನೋಡಬಹುದು (ಮತ್ತು ಅವುಗಳ ಸದ್ದಡಗಿಸುವಿಕೆ ರದ್ದು ಮಾಡಬಹುದು).
  • ಇಮೇಲ್ ಅಥವಾ Twitter ಮೂಲಕ ನಿಮಗೆ ತಲುಪಿಸಿದ ಶಿಫಾರಸುಗಳು ನಿಮ್ಮ ಸದ್ದಡಗಿಸಿದ ಶಬ್ದಗಳು ಮತ್ತು ಹ್ಯಾಶ್‌ಟ್ಯಾಗ್‌ಗಳ ಕಂಟೆಂಟ್‌ ಸಲಹೆಯನ್ನು ಒಳಗೊಂಡಿರುವುದಿಲ್ಲ.

ಗಮನಿಸಿ: ನೀವು ಮೊದಲೇ ನಿಮ್ಮ ಸದ್ದಡಗಿಸುವ ಪಟ್ಟಿಗೆ ಶಬ್ದಗಳನ್ನು ಸೇರಿಸಿದ್ದು, ಸೂಚನೆಗಳಿಗೆ ಮಾತ್ರ ವೈಶಿಷ್ಟ್ಯವನ್ನು ಅನ್ವಯಿಸಿದರೆ, ಈ ಮುಂದಿನ ಸದ್ದಡಗಿಸುವ ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸಲಾಗುತ್ತದೆ: ಸೂಚನೆಗಳು ಮಾತ್ರ; ಯಾರಿಂದಲಾದರೂ; ಎಂದಿಗೂ. ಯಾವುದೇ ಸಮಯದಲ್ಲಿ ಪ್ರಸ್ತುತ ಸದ್ದಡಗಿಸುವಿಕೆ ಸೆಟ್ಟಿಂಗ್‌ಗಳನ್ನು ನೀವು ಎಡಿಟ್ ಮಾಡಬಹುದು, ಸೂಚನೆಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಇದಕ್ಕಾಗಿ ಸೂಚನೆಗಳನ್ನು ವೀಕ್ಷಿಸಿ:

ಶಬ್ದಗಳು ಮತ್ತು ಹ್ಯಾಶ್‌ಟ್ಯಾಗ್‌ಗಳನ್ನು ಸದ್ದಡಗಿಸುವ ಬಗೆ

  1. ನಿಮ್ಮ ಸೂಚನೆಗಳು ಟ್ಯಾಬ್‌ಗೆ  ಹೋಗಿ
  2. ಗೇರ್ ಐಕಾನ್ ಅನ್ನು  ತಟ್ಟಿ
  3. ಸದ್ದಡಗಿಸಲಾಗಿದೆ ತಟ್ಟಿ, ನಂತರ ಸದ್ದಡಗಿಸಿದ ಶಬ್ದಗಳು ತಟ್ಟಿ.
  4. ಸೇರಿಸಿ ತಟ್ಟಿ.
  5. ನೀವು ಸದ್ದಡಗಿಸಲು ಬಯಸುವ ಶಬ್ದ ಅಥವಾ ಹ್ಯಾಶ್‌ಟ್ಯಾಗ್ ಅನ್ನು ಟೈಪ್ ಮಾಡಿ. ನಮೂದುಗಳನ್ನು ಒಂದು ಬಾರಿ ಮಾತ್ರ ಸೇರಿಸಬಹುದು.
  6. ಇದನ್ನು ಹೋಮ್‌ ಟೈಮ್‌ಲೈನ್‌ನಲ್ಲಿ ಅಥವಾ ಸೂಚನೆಗಳಲ್ಲಿ ಅಥವಾ ಎರಡರಲ್ಲೂ ಸಕ್ರಿಯಗೊಳಿಸಬೇಕೆ ಎಂದು ಆಯ್ಕೆ ಮಾಡಿ.
  7. ಯಾರಿಂದಲಾದರೂ ಅಥವಾ ನೀವು ಹಿಂಬಾಲಿಸದ ಜನರಿಂದ (ಸಕ್ರಿಯಗೊಳಿಸಿದ ಸೂಚನೆಗಳಿಗೆ ಮಾತ್ರ) ಎಂಬುದನ್ನು ಆಯ್ಕೆ ಮಾಡಿ.
  8. ಎಷ್ಟು ಸಮಯ? ಎಂಬುದನ್ನು ತಟ್ಟಿ ಮತ್ತು ಎಂದಿಗೂ, 24 ಗಂಟೆಗಳು, 7 ದಿನಗಳು, ಅಥವಾ 30 ದಿನಗಳು ಎಂಬುದರಲ್ಲಿ ಒಂದನ್ನು ಆಯ್ಕೆ ಮಾಡಿ.
  9. ಉಳಿಸಿ ತಟ್ಟಿ.
  10. ನಮೂದಿಸಿದ ಪ್ರತಿ ಶಬ್ದ ಅಥವಾ ಹ್ಯಾಶ್‌ಟ್ಯಾಗ್‌ ಪಕ್ಕದಲ್ಲಿ ಸೂಚಿಸಿದ ಸದ್ದಡಗಿಸುವಿಕೆ ಕಾಲಾವಧಿ ನಿಮಗೆ ಕಾಣಿಸುತ್ತದೆ.
  11. ತೊರೆಯಲು ಮುಗಿದಿದೆ ತಟ್ಟಿ.

ಶಬ್ದಗಳು ಮತ್ತು ಹ್ಯಾಶ್‌ಟ್ಯಾಗ್‌ಗಳನ್ನು ಸದ್ದಡಗಿಸುವ ಬಗೆ

  1. ನಿಮ್ಮ ಸೂಚನೆಗಳು ಟ್ಯಾಬ್‌ಗೆ  ಹೋಗಿ
  2. ಗೇರ್ ಐಕಾನ್ ಅನ್ನು    ತಟ್ಟಿ
  3. ಸದ್ದಡಗಿಸಿದ ಖಾತೆಗಳು ಅನ್ನು ತಟ್ಟಿ.
  4. ಅಧಿಕ ಐಕಾನ್  ತಟ್ಟಿ
  5. ನೀವು ಸದ್ದಡಗಿಸಲು ಬಯಸುವ ಶಬ್ದ ಅಥವಾ ಹ್ಯಾಶ್‌ಟ್ಯಾಗ್ ಅನ್ನು ಟೈಪ್ ಮಾಡಿ. ನಮೂದುಗಳನ್ನು ಒಂದು ಬಾರಿ ಮಾತ್ರ ಸೇರಿಸಬಹುದು.
  6. ಇದನ್ನು ಹೋಮ್‌ ಟೈಮ್‌ಲೈನ್‌ನಲ್ಲಿ ಅಥವಾ ಸೂಚನೆಗಳಲ್ಲಿ ಅಥವಾ ಎರಡರಲ್ಲೂ ಸಕ್ರಿಯಗೊಳಿಸಬೇಕೆ ಎಂದು ಆಯ್ಕೆ ಮಾಡಿ.
  7. ಯಾರಿಂದಲಾದರೂ ಅಥವಾ ನೀವು ಹಿಂಬಾಲಿಸದ ಜನರಿಂದ (ಸಕ್ರಿಯಗೊಳಿಸಿದ ಸೂಚನೆಗಳಿಗೆ ಮಾತ್ರ ಹೊಂದಿಸಲು ಸೂಚನೆಗಳು ಅನ್ನು ತಟ್ಟಿ) ಎಂಬುದನ್ನು ಆಯ್ಕೆ ಮಾಡಿ.
  8. ಎಷ್ಟು ಸಮಯ? ಎಂಬುದನ್ನು ತಟ್ಟಿ ಮತ್ತು ಎಂದಿಗೂ, ಈಗಿನಿಂದ 24 ಗಂಟೆಗಳು, ಈಗಿನಿಂದ 7 ದಿನಗಳು ಅಥವಾ ಈಗಿನಿಂದ 30 ದಿನಗಳು ಎಂಬುದರಲ್ಲಿ ಒಂದನ್ನು ಆಯ್ಕೆ ಮಾಡಿ.)
  9. ಉಳಿಸಿ ತಟ್ಟಿ.
  10. ನಮೂದಿಸಿದ ಪ್ರತಿ ಶಬ್ದ ಅಥವಾ ಹ್ಯಾಶ್‌ಟ್ಯಾಗ್‌ ಪಕ್ಕದಲ್ಲಿ ಸದ್ದಡಗಿಸಿದ ಐಕಾನ್  ಮತ್ತು ಸೂಚಿಸಿದ ಸದ್ದಡಗಿಸುವಿಕೆ ಕಾಲಾವಧಿ ನಿಮಗೆ ಕಾಣಿಸುತ್ತದೆ.

 

ಶಬ್ದಗಳು ಮತ್ತು ಹ್ಯಾಶ್‌ಟ್ಯಾಗ್‌ಗಳನ್ನು ಸದ್ದಡಗಿಸುವ ಬಗೆ

  1. ನಿಮ್ಮ ಪ್ರೊಫೈಲ್‌ ಚಿತ್ರ ಡ್ರಾಪ್‌ ಡೌನ್‌ನಿಂದ ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ ಅನ್ನು ಕ್ಲಿಕ್‌ ಮಾಡಿ.
  2. ಸದ್ದಡಗಿಸಿದ ಖಾತೆಗಳು ಅನ್ನು ಕ್ಲಿಕ್ ಮಾಡಿ.
  3. ಸೇರಿಸಿ ಕ್ಲಿಕ್ ಮಾಡಿ. 
  4. ನೀವು ಸದ್ದಡಗಿಸಲು ಬಯಸುವ ಶಬ್ದ ಅಥವಾ ಹ್ಯಾಶ್‌ಟ್ಯಾಗ್ ಅನ್ನು ನಮೂದಿಸಿ. ನಮೂದುಗಳನ್ನು ಒಂದು ಬಾರಿ ಮಾತ್ರ ಸೇರಿಸಬಹುದು.
  5. ನೀವು ಶಬ್ದ ಅಥವಾ ಪದಗುಚ್ಛವನ್ನು ನಿಮ್ಮ ಹೋಮ್ ಟೈಮ್‌ಲೈನ್‌ನಿಂದ ಸದ್ದಡಗಿಸಲು ಬಯಸಿದರೆ ಹೋಮ್ ಟೈಮ್‌ಲೈನ್ ಆಯ್ಕೆ ಮಾಡಿ.
  6. ನೀವು ಶಬ್ದ ಅಥವಾ ಪದಗುಚ್ಛವನ್ನು ನಿಮ್ಮ ಸೂಚನೆಗಳಿಂದ ಸದ್ದಡಗಿಸಲು ಬಯಸಿದರೆ ಸೂಚನೆಗಳು ಆಯ್ಕೆ ಮಾಡಿ.
  7. ಯಾರಿಂದಲಾದರೂ ಅಥವಾ ನಾನು ಹಿಂಬಾಲಿಸದ ಜನರಿಂದ ಮಾತ್ರ ಎಂಬುದನ್ನು ನಿರ್ದಿಷ್ಟಪಡಿಸಿ.
  8. ಎಷ್ಟು ಸಮಯ? ಎಂಬುದರಲ್ಲಿ ಎಂದಿಗೂ, ಈಗಿನಿಂದ 24 ಗಂಟೆಗಳು, ಈಗಿನಿಂದ 7 ದಿನಗಳು ಅಥವಾ ಈಗಿನಿಂದ 30 ದಿನಗಳು ಪೈಕಿ ಒಂದನ್ನು ಆಯ್ಕೆ ಮಾಡಿ.)
  9. ಸೇರಿಸಿ ಕ್ಲಿಕ್ ಮಾಡಿ.
  10. ನಮೂದಿಸಿದ ಪ್ರತಿ ಶಬ್ದ ಅಥವಾ ಹ್ಯಾಶ್‌ಟ್ಯಾಗ್‌ ಪಕ್ಕದಲ್ಲಿ ಸೂಚಿಸಿದ ಸದ್ದಡಗಿಸುವಿಕೆ ಕಾಲಾವಧಿ ನಿಮಗೆ ಕಾಣಿಸುತ್ತದೆ.

 

mobile.twitter.com ಮೂಲಕ:

  1. ನಿಮ್ಮ ಸೂಚನೆಗಳು ಟ್ಯಾಬ್‌ಗೆ  ಹೋಗಿ
  2. ಗೇರ್ ಐಕಾನ್ ಅನ್ನು  ತಟ್ಟಿ
  3. ಸದ್ದಡಗಿಸಿದ ಖಾತೆಗಳು ಅನ್ನು ತಟ್ಟಿ.
  4. +ಸದ್ದಡಗಿಸಿದ ಅಥವಾ ಪದಗುಚ್ಛ ಸೇರಿಸಿ ತಟ್ಟಿ.
  5. ನೀವು ಸದ್ದಡಗಿಸಲು ಬಯಸುವ ಶಬ್ದ ಅಥವಾ ಹ್ಯಾಶ್‌ಟ್ಯಾಗ್ ಅನ್ನು ಟೈಪ್ ಮಾಡಿ. ನಮೂದುಗಳನ್ನು ಒಂದು ಬಾರಿ ಮಾತ್ರ ಸೇರಿಸಬಹುದು.
  6. ನಿಮ್ಮ ಹೋಮ್ ಟೈಮ್‌ಲೈನ್‌ನಲ್ಲಿ ಆ ಶಬ್ದ ಅಥವಾ ಪದಗುಚ್ಛವನ್ನು ಸದ್ದಡಗಿಸಲು ನೀವು ಬಯಸಿದರೆ, ಬಾಕ್ಸ್‌ ಗುರುತು ಮಾಡಿ.
  7. ನಿಮ್ಮ ಸೂಚನೆಗಳಿಂದ ಆ ಶಬ್ದ ಅಥವಾ ಪದಗುಚ್ಛವನ್ನು ಸದ್ದಡಗಿಸಲು ನೀವು ಬಯಸಿದರೆ, ಬಾಕ್ಸ್‌ ಗುರುತು ಮಾಡಿ.
  8. ಯಾರಿಂದಲಾದರೂ ಅಥವಾ ನಾನು ಹಿಂಬಾಲಿಸುವ ಜನರಿಂದ ಮಾತ್ರ (ಸೂಚನೆಗಳಿಗೆ ಮಾತ್ರ) ಎಂಬುದರಲ್ಲಿ ಒಂದನ್ನು ಆಯ್ಕೆ ಮಾಡಿ.
  9. ಎಷ್ಟು ಸಮಯ? ಎಂಬುದರಲ್ಲಿ ಎಂದಿಗೂ, ಈಗಿನಿಂದ 24 ಗಂಟೆಗಳು, ಈಗಿನಿಂದ 7 ದಿನಗಳು ಅಥವಾ ಈಗಿನಿಂದ 30 ದಿನಗಳು ಪೈಕಿ ಒಂದನ್ನು ಆಯ್ಕೆ ಮಾಡಿ.)
  10. ಉಳಿಸಿ ತಟ್ಟಿ.
  11. ನಮೂದಿಸಿದ ಪ್ರತಿ ಶಬ್ದ ಅಥವಾ ಹ್ಯಾಶ್‌ಟ್ಯಾಗ್‌ ಪಕ್ಕದಲ್ಲಿ ಸದ್ದಡಗಿಸಿದ ಐಕಾನ್  ಮತ್ತು ಸೂಚಿಸಿದ ಸದ್ದಡಗಿಸುವಿಕೆ ಕಾಲಾವಧಿ ನಿಮಗೆ ಕಾಣಿಸುತ್ತದೆ.
ಇದಕ್ಕಾಗಿ ಸೂಚನೆಗಳನ್ನು ವೀಕ್ಷಿಸಿ:

ಶಬ್ದಗಳು ಮತ್ತು ಹ್ಯಾಶ್‌ಟ್ಯಾಗ್‌ಗಳನ್ನು ಎಡಿಟ್ ಮಾಡುವ ಅಥವಾ ಸದ್ದಡಗಿಸದಿರುವ ಬಗೆ

  1. ನಿಮ್ಮ ಸೂಚನೆಗಳು ಟ್ಯಾಬ್‌ಗೆ  ಹೋಗಿ
  2. ಗೇರ್ ಐಕಾನ್ ಅನ್ನು  ತಟ್ಟಿ
  3. ಸದ್ದಡಗಿಸಲಾಗಿದೆ ತಟ್ಟಿ, ನಂತರ ಸದ್ದಡಗಿಸಿದ ಶಬ್ದಗಳು ತಟ್ಟಿ.
  4. ನೀವು ಎಡಿಟ್ ಮಾಡಲು ಅಥವಾ ಸದ್ದಡಗಿಸದಿರಲು ಬಯಸುವ ಶಬ್ದ ಅಥವಾ ಹ್ಯಾಶ್‌ಟ್ಯಾಗ್ ಅನ್ನು ತಟ್ಟಿ.
  5. ಇಂದ ಸದ್ದಡಗಿಸಿ ಅಥವಾ ಸದ್ದಡಗಿಸುವ ಸಮಯ ವಿಸ್ತರಣೆ ಆಯ್ಕೆಗಳನ್ನು ಬದಲಿಸಿ ಮತ್ತು ಉಳಿಸಿ ತಟ್ಟಿ.
  6. ಶಬ್ದವನ್ನು ಸದ್ದಡಗಿಸದಿರಲು, ಅಳಿಸಿ ಎಂಬ ಶಬ್ದ ತಟ್ಟಿ, ನಂತರ ದೃಢೀಕರಿಸಲು ಶಬ್ದ ಅಳಿಸಿ ತಟ್ಟಿ.
  7. ತೊರೆಯಲು ಮುಗಿದಿದೆ ತಟ್ಟಿ.

ಶಬ್ದಗಳು ಮತ್ತು ಹ್ಯಾಶ್‌ಟ್ಯಾಗ್‌ಗಳನ್ನು ಎಡಿಟ್ ಮಾಡುವ ಅಥವಾ ಸದ್ದಡಗಿಸದಿರುವ ಬಗೆ

  1. ನಿಮ್ಮ ಸೂಚನೆಗಳು ಟ್ಯಾಬ್‌ಗೆ  ಹೋಗಿ
  2. ಗೇರ್ ಐಕಾನ್ ಅನ್ನು  ತಟ್ಟಿ
  3. ಸದ್ದಡಗಿಸಿದ ಖಾತೆಗಳು ಅನ್ನು ತಟ್ಟಿ.
  4. ನೀವು ಎಡಿಟ್ ಮಾಡಲು ಅಥವಾ ಸದ್ದಡಗಿಸದಿರಲು ಬಯಸುವ ಶಬ್ದ ಅಥವಾ ಹ್ಯಾಶ್‌ಟ್ಯಾಗ್ ಅನ್ನು ತಟ್ಟಿ.
  5. ಇಂದ ಸದ್ದಡಗಿಸಿ ಅಥವಾ ಸದ್ದಡಗಿಸುವ ಸಮಯ ವಿಸ್ತರಣೆ ಆಯ್ಕೆಗಳನ್ನು ಬದಲಿಸಿ ಮತ್ತು ಉಳಿಸಿ ತಟ್ಟಿ.
  6. ಶಬ್ದ ಅಥವಾ ಹ್ಯಾಶ್‌ಟ್ಯಾಗ್‌ ಅನ್ನು ಸದ್ದಡಗಿಸದಿರಲು, ಶಬ್ದ ಅಳಿಸಿ ತಟ್ಟಿ, ನಂತರ ದೃಢೀಕರಿಸಲು ಹೌದು, ನನಗೆ ಖಚಿತವಿದೆ ಎಂಬುದನ್ನು ತಟ್ಟಿ.

 

ಶಬ್ದಗಳು ಮತ್ತು ಹ್ಯಾಶ್‌ಟ್ಯಾಗ್‌ಗಳನ್ನು ಎಡಿಟ್ ಮಾಡುವ ಅಥವಾ ಸದ್ದಡಗಿಸದಿರುವ ಬಗೆ

  1. ನಿಮ್ಮ ಪ್ರೊಫೈಲ್‌ ಚಿತ್ರ ಡ್ರಾಪ್‌ ಡೌನ್‌ನಿಂದ ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ ಅನ್ನು ಕ್ಲಿಕ್‌ ಮಾಡಿ.
  2. ಸದ್ದಡಗಿಸಿದ ಖಾತೆಗಳು ಅನ್ನು ಕ್ಲಿಕ್ ಮಾಡಿ.
  3. ನೀವು ಎಡಿಟ್ ಅಥವಾ ಸದ್ದಡಗಿಸದಿರಲು ಬಯಸಿದ ಶಬ್ದ ಅಥವಾ ಹ್ಯಾಶ್‌ಟ್ಯಾಗ್‌ ಪಕ್ಕದಲ್ಲಿರುವ ಎಡಿಟ್ ಬಟನ್‌  ಅನ್ನು ಕ್ಲಿಕ್ ಮಾಡಿ.
  4. ಇಂದ ಸದ್ದಡಗಿಸಿ ಅಥವಾ ಸದ್ದಡಗಿಸುವ ಸಮಯ ವಿಸ್ತರಣೆ ಆಯ್ಕೆಗಳನ್ನು ಬದಲಿಸಿ ಮತ್ತು ಉಳಿಸಿ ಕ್ಲಿಕ್ ಮಾಡಿ.
  5. ಶಬ್ದ ಅಥವಾ ಹ್ಯಾಶ್‌ಟ್ಯಾಗ್ ಅನ್ನು ಸದ್ದಡಗಿಸದಿರಲು, ಸದ್ದಡಗಿಸಲಾಗಿದೆ ಬಟನ್  ಕ್ಲಿಕ್ ಮಾಡಿ

 

mobile.twitter.com ಮೂಲಕ:

  1. ನಿಮ್ಮ ಸೂಚನೆಗಳು ಟ್ಯಾಬ್‌ಗೆ  ಹೋಗಿ
  2. ಗೇರ್ ಐಕಾನ್ ಅನ್ನು  ತಟ್ಟಿ
  3. ಸದ್ದಡಗಿಸಿದ ಖಾತೆಗಳು ಅನ್ನು ತಟ್ಟಿ.
  4. ಎಡಿಟ್ ಮಾಡಲು, ಉಳಿಸಿದ ಶಬ್ದ ಅಥವಾ ಹ್ಯಾಶ್‌ಟ್ಯಾಗ್ ತಟ್ಟಿ ಮತ್ತು ಇಂದ ಸದ್ದಡಗಿಸಿ ಅಥವಾ ಸದ್ದಡಗಿಸುವ ಸಮಯ ಬದಲಿಸಿ (ಅಥವಾ ನಿಮ್ಮ ಸೆಟ್ಟಿಂಗ್ಸ್‌ ಆಧರಿಸಿ ಸದ್ದಡಗಿಸುವ ಸಮಯವನ್ನು ವಿಸ್ತರಿಸಿ) ಆಯ್ಕೆಗಳನ್ನು ಬದಲಿಸಿ, ನಂತರ ಉಳಿಸಿ ತಟ್ಟಿ.
  5. ಶಬ್ದ ಅಥವಾ ಹ್ಯಾಶ್‌ಟ್ಯಾಗ್ ಅನ್ನು ಸದ್ದಡಗಿಸದಿರಲು, ಸದ್ದಡಗಿಸಲಾಗಿದೆ ಬಟನ್  ತಟ್ಟಿ. ನಂತರ ಸದ್ದಡಗಿಸದಿರಿ ತಟ್ಟಿ.

 

iOS ಗಾಗಿ Twitter ಇಂದ ಶಬ್ದಗಳು ಮತ್ತು ಹ್ಯಾಶ್‌ಟ್ಯಾಗ್‌ಗಳನ್ನು ಸಮಗ್ರವಾಗಿ ಅಳಿಸುವ ಬಗೆ

  1. ನಿಮ್ಮ ಸೂಚನೆಗಳು ಟ್ಯಾಬ್‌ಗೆ  ಹೋಗಿ
  2. ಗೇರ್ ಐಕಾನ್ ಅನ್ನು  ತಟ್ಟಿ
  3. ಸದ್ದಡಗಿಸಲಾಗಿದೆ ತಟ್ಟಿ, ನಂತರ ಸದ್ದಡಗಿಸಿದ ಶಬ್ದಗಳು ತಟ್ಟಿ.
  4. ಎಡಿಟ್ ತಟ್ಟಿ.
  5. ಸಮಗ್ರವಾಗಿ ನೀವು ಅಳಿಸಲು ಬಯಸುವ ಶಬ್ದಗಳ ಪದಗುಚ್ಛಗಳನ್ನು ಆಯ್ಕೆ ಮಾಡಿ. 
  6. ಅಳಿಸಿ ತಟ್ಟಿ.
  7. ದೃಢೀಕರಿಸಲು ತಟ್ಟಿ.
  8. ತೊರೆಯಲು ಮುಗಿದಿದೆ ತಟ್ಟಿ.

ಗಮನಿಸಿ: Android ಗಾಗಿ Twitter ಆಪ್‌, twitter.com ಅಥವಾ mobile.twitter.com ನಿಂದ ನೀವು ಸಮಗ್ರವಾಗಿ ಅಳಿಸಲಾಗದು.

ಸಂವಾದಕ್ಕೆ ಸದ್ದಡಗಿಸುವ ಸೂಚನೆಗಳು

 

ನಿರ್ದಿಷ್ಟ ಸಂವಾದಕ್ಕೆ ಸೂಚನೆಗಳ ಪಡೆಯುವುದನ್ನು ನೀವು ನಿಲ್ಲಿಸಲು ಬಯಸಿದರೆ, ಇದನ್ನು ಸದ್ದಡಗಿಸಲು ನೀವು ಆಯ್ಕೆ ಮಾಡಿಕೊಳ್ಳಬಹುದು. ಒಂದು ಸಂವಾದವನ್ನು ನೀವು ಸದ್ದಡಗಿಸಿದಾಗ, ಆ ಸಂವಾದದ ಬಗ್ಗೆ ಯಾವುದೇ ಹೊಸ ಸೂಚನೆಗಳು ನಿಮಗೆ ಬರುವುದಿಲ್ಲ. ಆದರೆ, ನಿಮಗೆ ಇನ್ನೂ ನಿಮ್ಮ ಟೈಮ್‌ಲೈನ್‌ನಲ್ಲಿ ಮತ್ತು ಮೂಲ ಟ್ವೀಟ್‌ ಅನ್ನು ಕ್ಲಿಕ್ ಮಾಡಿದಾಗ ಸಂವಾದದ ಟ್ವೀಟ್‌ಗಳು ಕಾಣಿಸುತ್ತವೆ. 

twitter.com ಅಥವಾ iOS ಗಾಗಿನ Twitter ಅಥವಾ ಆಂಡ್ರಾಯ್ಡ್ ಆಪ್‌ ಮೂಲಕ ಸಂವಾದವನ್ನು ಸದ್ದಡಗಿಸಲು:

  1. ಯಾವುದೇ ಟ್ವೀಟ್‌ನ ಟ್ವೀಟ್‌ ವಿವರಗಳಿಗೆ ಅಥವಾ ನೀವು ಸದ್ದಡಗಿಸಲು ಬಯಸುವ ಸಂವಾದದಲ್ಲಿನ ಪ್ರತಿಕ್ರಿಯೆ ಹೋಗಿ.
  2.   ಐಕಾನ್ ಕ್ಲಿಕ್ ಮಾಡಿ ಅಥವಾ ತಟ್ಟಿ. 
  3.  ಈ ಸಂವಾದ ಸದ್ದಡಗಿಸಿ ತಟ್ಟಿ. 

ಬುಕ್‌ಮಾರ್ಕ್ ಮಾಡಿ ಅಥವಾ ಈ ಲೇಖನವನ್ನು ಹಂಚಿಕೊಳ್ಳಿ