ಹಣಕಾಸು ಮೋಸದ ನೀತಿ

ಮುನ್ನೋಟ

ಸೆಪ್ಟೆಂಬರ್ 2019

Twitter ನಲ್ಲಿ ಜನರ ಅಭಿವ್ಯಕ್ತಿಯನ್ನು ದುರ್ಬಳಕೆ ಮಾಡುವ ಅಥವಾ ವ್ಯತ್ಯಯಗೊಳಿಸುವ ವರ್ತನೆಯಲ್ಲಿ ನೀವು ತೊಡಗಿಸಿಕೊಳ್ಳುವುದು ಅಥವಾ ಮಾಹಿತಿಯನ್ನು ಹತ್ತಿಕ್ಕುವುದು ಅಥವಾ ಕೃತಕವಾಗಿ ವರ್ಧಿಸುವ ಉದ್ದೇಶದಿಂದ Twitter ಸೇವೆಗಳನ್ನು ನೀವು ಬಳಸಬಾರದು.

ಜನರು ಮಾನವ ಸಂಪರ್ಕವನ್ನು ಸಾಧಿಸುವ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರು ಕಂಡುಕೊಳ್ಳುವ ಸ್ಥಳವನ್ನಾಗಿ Twitter ಅನ್ನು ನಾವು ಮಾಡಲು ಬಯಸುತ್ತೇವೆ. ಇದೇ ಕಾರಣಕ್ಕೆ, ಮೋಸದ ತಂತ್ರಗಳು, ಫಿಶಿಂಗ್‌ ಅಥವಾ ಇತರ ಮೋಸದ ಮತ್ತು ದುರುದ್ದೇಶದ ವಿಧಾನಗಳ ಮೂಲಕ ನಿಮಗೆ ಹಣವನ್ನು ಅಥವಾ ವೈಯಕ್ತಿಕ ಹಣಕಾಸು ಮಾಹಿತಿಯನ್ನು ಇತರರು ಕಳುಹಿಸುವಂತೆ ಮೋಸಗೊಳಿಸಲು ನೀವು Twitter ಸೇವೆಗಳನ್ನು ಬಳಸುವಂತಿಲ್ಲ.

ಯಾವ ಸನ್ನಿವೇಶವು ಈ ನೀತಿಯ ಉಲ್ಲಂಘನೆಯಾಗುತ್ತದೆ?

ಈ ನೀತಿಯ ಪ್ರಕಾರ, ಹಣವನ್ನು ಪಡೆಯಲು ಅಥವಾ ಖಾಸಗಿ ಹಣಕಾಸು ಮಾಹಿತಿಯನ್ನು ಪಡೆಯಲು Twitter ನಲ್ಲಿ ಮೋಸದ ತಂತ್ರಗಳನ್ನು ಬಳಸುವುದು ನಿಷೇಧವಾಗಿದೆ. ಇಂತಹ ಮೋಸದ ಸ್ಕೀಮ್‌ಗಳಲ್ಲಿ ತೊಡಗುವಂತೆ ಆಮಿಷ ಒಡ್ಡುವ ಟ್ವೀಟ್‌ಗಳನ್ನು ಪೋಸ್ಟ್‌ ಮಾಡುವುದು ಅಥವಾ ನೇರ ಸಂದೇಶಗಳನ್ನು ಕಳುಹಿಸುವುದು ಅಥವಾ ಖಾತೆಗಳನ್ನು ರಚಿಸಲು ನಿಮಗೆ ಅನುಮತಿಸಲಾಗಿಲ್ಲ. ನಿಷೇಧಿತ, ವಂಚನೆಯ ತಂತ್ರಗಳ ಉದಾಹರಣೆಗಳು ಇವುಗಳನ್ನೂ ಒಳಗೊಂಡಿವೆ:

  • ಸಂಬಂಧ/ವಿಶ್ವಾಸ ಮೂಡಿಸುವ ಮೋಸಗಳು. ನಕಲಿ ಖಾತೆಯನ್ನು ನಿರ್ವಹಿಸುವ ಮೂಲಕ ಅಥವಾ ಸಾರ್ವಜನಿಕ ವ್ಯಕ್ತಿ ಅಥವಾ ಸಂಘಟನೆ ಎಂದು ಪರಿಭಾವಿಸಿ ನಿಮಗೆ ಹಣ ಕಳುಹಿಸುವಂತೆ ಅಥವಾ ವೈಯಕ್ತಿಕ ಹಣಕಾಸು ಮಾಹಿತಿ ನೀಡುವಂತೆ ಇತರರನ್ನು ವಂಚಿಸಬಾರದು.
  • ಹಣ ಬದಲಿಸುವ ಸ್ಕೀಮ್‌ಗಳು. ನೀವು "ಹಣ ಬದಲಿಸುವ" ಸ್ಕೀಮ್‌ಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ (ಉದಾಹರಣೆಗೆ, ಆರಂಭಿಕ ಸಣ್ಣ ಮೊತ್ತದ ಪಾವತಿಗೆ ಪ್ರತಿಯಾಗಿ ವೈರ್ ಟ್ರಾನ್ಸ್‌ಫರ್ ಅಥವಾ ಪ್ರೀಪೇಯ್ಡ್‌ ಡೆಬಿಟ್‌ ಕಾರ್ಡ್‌ ಮೂಲಕ ದೊಡ್ಡ ಮೊತ್ತದ ಹಣವನ್ನು ಕಳುಹಿಸುವ ಭರವಸೆಯನ್ನು ನೀಡುವುದು).
  • ಮೋಸದ ರಿಯಾಯಿತಿಗಳು. ಕಳವು ಮಾಡಿದ ಕ್ರೆಡಿಟ್‌ ಕಾರ್ಡ್‌ಗಳು ಮತ್ತು/ಅಥವಾ ಕದ್ದ ಹಣಕಾಸು ವಿವರಗಳನ್ನು ಬಳಸಿ ಕೊಡುಗೆಗಳಿಗೆ ಪಾವತಿ ಮಾಡುವಂಹತ ರಿಯಾಯಿತಿಗಳನ್ನು ಇತರರಿಗೆ ನೀಡುವ ಸ್ಕೀಮ್‌ಗಳನ್ನು ನೀವು ನಿರ್ವಹಿಸುವಂತಿಲ್ಲ.
  • ಫಿಶಿಂಗ್ ಮೋಸಗಳು. ಇತರರ ವೈಯಕ್ತಿಕ ಹಣಕಾಸು ಮಾಹಿತಿಯನ್ನು ಪಡೆಯಲು ಬ್ಯಾಂಕ್ಗಳು ಅಥವಾ ಇತರ ಹಣಕಾಸು ಸಂಸ್ಥೆಗಳೊಂದಿಗೆ ಸಂಬಂಧವನ್ನು ಹೊಂದಿರುವ ರೀತಿಯಲ್ಲಿ ವ್ಯಕ್ತಪಡಿಸಲು ಅಥವಾ ಸೋಗು ಹಾಕುವಂತಿಲ್ಲ. ಇಂತಹ ಮಾಹಿತಿಯನ್ನು ಪಡೆಯಲು ಫಿಶಿಂಗ್‌ ಮಾಡುವ ಇತರ ರೂಪವೂ ಕೂಡ ನಮ್ಮ ಪ್ಲಾಟ್‌ಫಾರಂ ದುರ್ಬಳಕೆ ಮತ್ತು ಸ್ಪ್ಯಾಮ್ ನೀತಿಯ ಉಲ್ಲಂಘನೆಯಾಗಿರುತ್ತದೆ ಎಂಬುದನ್ನು ಗಮನದಲ್ಲಿಡಿ.

ಯಾವುದು ಈ ನೀತಿಯ ಉಲ್ಲಂಘನೆಯಾಗುವುದಿಲ್ಲ?

ಈ ಮೇಲೆ ವಿವರಿಸಿದಂತೆ, ವಂಚನೆಯ ಮೋಸ, ಫಿಶಿಂಗ್ ಅಥವಾ ಇತರ ಮೋಸದ ತಂತ್ರಗಳಲ್ಲಿ ತೊಡಗಿರುವ ಖಾತೆಗಳ ವಿರುದ್ಧ Twitter ಕ್ರಮ ತೆಗೆದುಕೊಳ್ಳುತ್ತದೆ Twitter ಅನ್ನು ಬಳಸುವ ಇಬ್ಬರು ವ್ಯಕ್ತಿಗಳ ಹಣಕಾಸು ವಿವಾದಗಳಲ್ಲಿ Twitter ಮಧ್ಯಪ್ರವೇಶಿಸುವುದಿಲ್ಲ, ಅವುಗಳೆಂದರೆ: 

  • Twitter ನಲ್ಲಿ ಸರಕುಗಳಿಗೆ ಮಾರಾಟಕ್ಕೆ ಸಂಬಂಧಿಸಿದ ಕ್ಲೇಮ್‌ಗಳು.
  • ವ್ಯಕ್ತಿಗಳು ಅಥವಾ ಬ್ರಾಂಡ್‌ಗಳಿಂದ ವಿವಾದಿತ ರಿಫಂಡ್‌ಗಳು.
  • ಸ್ವೀಕರಿಸಿದ ಕಳಪೆ ಗುಣಮಟ್ಟದ ಸರಕುಗಳ ಬಗ್ಗೆ ದೂರುಗಳು.

ಈ ನೀತಿಯ ಉಲ್ಲಂಘನೆಗಳನ್ನು ಯಾರು ವರದಿ ಮಾಡಬಹುದು?

ನಿಗದಿತ ವರದಿ ಮಾಡುವಿಕೆ ಹರಿವಿನ ಮೂಲಕ ಖಾತೆಗಳು ಅಥವಾ ಟ್ವೀಟ್‌ಗಳನ್ನು ಯಾರಾದರೂ ವರದಿ ಮಾಡಬಹುದು. ನಮ್ಮ ಜಾರಿ ವ್ಯವಸ್ಥೆಯ ಸಂಸ್ಕರಣೆಗೆ ನೆರವಾಗಲು ಮತ್ತು ಹೊಸ ಹಾಗೂ ಎದುರಾಗುತ್ತಿರುವ ವರ್ತನೆಗಳ ಟ್ರೆಂಡ್‌ಗಳು ಮತ್ತು ವಿಧಾನಗಳನ್ನು ಗುರುತಿಸಲು ಈ ವರದಿಗಳನ್ನು ಬಳಸಲಾಗುತ್ತದೆ ಮತ್ತು ನಿಮ್ಮ ವರದಿಗೆ ವೈಯಕ್ತಿಕ ಪ್ರತಿಕ್ರಿಯೆಯನ್ನು ನೀವು ಸ್ವೀಕರಿಸದೇ ಇರಬಹುದು.

ಈ ನೀತಿಯ ಉಲ್ಲಂಘನೆಗಳನ್ನು ನಾನು ಹೇಗೆ ವರದಿ ಮಾಡಬಹುದು?

ಆಪ್​ನಲ್ಲಿ

ಈ ಮುಂದಿನಂತೆ ಆಪ್​ನಲ್ಲಿ ಈ ವಿಷಯದ ಮರುಪರಿಶೀಲನೆಗಾಗಿ ವರದಿ ಮಾಡಬಹುದು:

  1. ಟ್ವೀಟ್ ವರದಿ ಮಾಡಿ ಅನ್ನು  ಐಕಾನ್​ನಿಂದ ಆಯ್ಕೆಮಾಡಿ.
  2. ಇದು ಅನುಮಾನಾಸ್ಪದ ಅಥವಾ ಸ್ಪ್ಯಾಮ್ ಎಂದು ಆಯ್ಕೆ ಮಾಡಿ.
  3. ಟ್ವೀಟ್‌ ಹೇಗೆ ಅನುಮಾನಾಸ್ಪದ ಅಥವಾ ಸ್ಪ್ಯಾಮ್‌ ಅನ್ನು ಹರಡುತ್ತಿದೆ ಎಂಬುದಾಗಿ ಉತ್ತಮವಾಗಿ ವಿವರಿಸುವ ಆಯ್ಕೆಯನ್ನು ಆರಿಸಿ.
  4. ನಿಮ್ಮ ವರದಿಯನ್ನು ಸಲ್ಲಿಸಿ.

ಡೆಸ್ಕ್​ಟಾಪ್

ಈ ಮುಂದಿನಂತೆ ಡೆಸ್ಕ್​ಟಾಪ್​ನಲ್ಲಿ ಈ ಕಂಟೆಂಟ್‌ಅನ್ನು ವರದಿ ಮಾಡಬಹುದು:

  1.  ಟ್ವೀಟ್ ವರದಿ ಮಾಡಿ ಅನ್ನು  ಐಕಾನ್​ನಿಂದ ಆಯ್ಕೆಮಾಡಿ.
  2.  ಇದು ಅನುಮಾನಾಸ್ಪದ ಅಥವಾ ಸ್ಪ್ಯಾಮ್ ಎಂದು ಆಯ್ಕೆ ಮಾಡಿ.
  3. ಟ್ವೀಟ್‌ ಹೇಗೆ ಅನುಮಾನಾಸ್ಪದ ಅಥವಾ ಸ್ಪ್ಯಾಮ್‌ ಅನ್ನು ಹರಡುತ್ತಿದೆ ಎಂಬುದಾಗಿ ಉತ್ತಮವಾಗಿ ವಿವರಿಸುವ ಆಯ್ಕೆಯನ್ನು ಆರಿಸಿ.
  4. ನಿಮ್ಮ ವರದಿಯನ್ನು ಸಲ್ಲಿಸಿ.

ಈ ನೀತಿಯನ್ನು ನೀವು ಉಲ್ಲಂಘಿಸಿದರೆ ಏನಾಗುತ್ತದೆ?

ಉಲ್ಲಂಘನೆಯ ವಿಧ ಮತ್ತು ತೀವ್ರತೆ ಹಾಗೂ ಉಲ್ಲಂಘನೆಗಳ ಹಿಂದಿನ ಇತಿಹಾಸದ ಮೇಲೆ ಈ ನೀತಿಯ ಉಲ್ಲಂಘನೆಯ ಪರಿಣಾಮಗಳು ಅವಲಂಬಿಸಿರುತ್ತವೆ. ನಾವು ತೆಗೆದುಕೊಳ್ಳುವ ಕ್ರಮಗಳು ಈ ಮುಂದಿನವುಗಳನ್ನು ಒಳಗೊಂಡಿರಬಹುದು:

ಸ್ಪ್ಯಾಮ್‌ ವಿರೋಧಿ ಸವಾಲುಗಳು
ಚಟುವಟಿಕೆಯ ಅನುಮಾನಾಸ್ಪದ ಹಂತವನ್ನು ನಾವು ಗುರುತಿಸಿದಾಗ, ಖಾತೆಗಳನ್ನು ನಿರ್ಬಂಧಿಸಬಹುದು ಮತ್ತು ಹೆಚ್ಚುವರಿ ಮಾಹಿತಿಯನ್ನು ಒದಗಿಸಲು (ಉದಾ., ಫೋನ್‌ ಸಂಖ್ಯೆ) ಅಥವಾ ರಿಕ್ಯಾಪ್ಚಾ ಪರಿಹರಿಸಲು ಸೂಚಿಸಬಹುದು. 

ಯುಆರ್‌ಎಲ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು
ಅಸುರಕ್ಷಿತ ಎಂದು ನಾವು ಭಾವಿಸುವ ಯುಆರ್‌ಎಲ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸುತ್ತೇವೆ ಅಥವಾ ಎಚ್ಚರಿಕೆಗಳನ್ನು ನೀಡುತ್ತೇವೆ. ನಿಮ್ಮ ಯುಆರ್‌ಎಲ್‌ ಅನ್ನು ನಾವು ತಪ್ಪಾಗಿ ಅಸುರಕ್ಷಿತ ಎಂದು ಗುರುತಿಸಿದ್ದರೆ, ಮೇಲ್ಮನವಿ ಸಲ್ಲಿಸುವುದು ಹೇಗೆ ಎಂಬುದೂ ಸೇರಿದಂತೆ ಅಸುರಕ್ಷಿತ ಲಿಂಕ್​ಗಳ ಬಗ್ಗೆ ಇನ್ನಷ್ಟು ಓದಿ.

ಟ್ವೀಟ್‌ ಅಳಿಸುವುದು ಮತ್ತು ತಾತ್ಕಾಲಿಕ ಖಾತೆ ನಿರ್ಬಂಧಗಳು
ಉಲ್ಲಂಘನೆಯು ಏಕೈಕ ಘಟನೆಯಾಗಿದ್ದರೆ ಅಥವಾ ಮೊದಲ ಅಪರಾಧವಾಗಿದ್ದರೆ, ಒಂದು ಅಥವಾ ಹೆಚ್ಚು ಟ್ವೀಟ್‌ಗಳನ್ನು ಅಳಿಸುವ ಅಗತ್ಯದಿಂದ ತಾತ್ಕಾಲಿಕವಾಗಿ ಖಾತೆ(ಗಳನ್ನು) ನಿರ್ಬಂಧಿಸುವವರೆಗೆ ಹಲವು ಕ್ರಮಗಳನ್ನು ನಾವು ತೆಗೆದುಕೊಳ್ಳಬಹುದು. ಮೋಸ, ಫಿಶಿಂಗ್‌ ಅಥವಾ ಇತರ ಮೋಸದ ತಂತ್ರಗಳಲ್ಲಿ ಮತ್ತೆ ತೊಡಗಿಸಿಕೊಂಡರೆ ಶಾಶ್ವತ ಅಮಾನತಿಗೆ ಕಾರಣವಾಗುತ್ತದೆ.

ಶಾಶ್ವತ ಅಮಾನತು
ತೀವ್ರ ಉಲ್ಲಂಘನೆಗಳಿಗೆ, ಮೊದಲ ಬಾರಿ ಗುರುತಿಸಿದಾಗಲೇ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗುತ್ತದೆ. ತೀವ್ರ ಉಲ್ಲಂಘನೆಗಳ ಉದಾಹರಣೆಗಳು ಇವುಗಳನ್ನು ಒಳಗೊಂಡಿವೆ:

  • ಈ ಮೇಲೆ ವಿವರಿಸಿದ ನೀತಿಗಳಿಗೆ ಬಹುತೇಕ ವರ್ತನೆಗಳು ಉಲ್ಲಂಘಿಸುವಂತಿರುವ ಖಾತೆಗಳನ್ನು ನಿರ್ವಹಿಸುವುದು;
  • ಅಮಾನತುಗೊಂಡ ಖಾತೆಯ ಬದಲಿಗೆ ಅಥವಾ ಅನುಕರಿಸುವ ಖಾತೆಗಳನ್ನು ರಚಿಸುವುದು.

ಹೆಚ್ಚುವರಿ ಸಂಪನ್ಮೂಲಗಳು

ನಮ್ಮ ಪ್ಲಾಟ್ಫಾರಂ ದುರ್ಬಳಕೆ ಮತ್ತು ಸ್ಪ್ಯಾಮ್ ನೀತಿಯ ಬಗ್ಗೆ ಇನ್ನಷ್ಟು ಓದಿ.

Bookmark or share this article