ಇಡೀ YouTube ಸಮುದಾಯದಲ್ಲಿ ಕೃತಿಸ್ವಾಮ್ಯಕ್ಕೆ ಸಾಕಷ್ಟು ಮಹತ್ವವಿದೆ. ಕೆಳಗಿನ ವಿಭಾಗಗಳಲ್ಲಿ, YouTube ವೇದಿಕೆಯಲ್ಲಿ ನಿಮ್ಮ ಹಕ್ಕುಗಳನ್ನು ನಿರ್ವಹಿಸಲು ಅವಶ್ಯಕವಾದ ಎಲ್ಲಾ ಮಾಹಿತಿ ಮತ್ತು ಪರಿಕರಗಳಿಗೆ ಪ್ರವೇಶವನ್ನು ನೀವು ಪಡೆದುಕೊಳ್ಳುತ್ತೀರಿ. ಇತರ ರಚನೆಕಾರರ ಹಕ್ಕುಗಳನ್ನು ಗೌರವಿಸುವುದರ ಕುರಿತು ಇನ್ನಷ್ಟು ತಿಳಿದುಕೊಳ್ಳುತ್ತೀರಿ.
ಕೃತಿಸ್ವಾಮ್ಯ ಉಲ್ಲಂಘನೆಯ ಆರೋಪಕ್ಕೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಸಲ್ಲಿಸಲು ನೀವು ಬಯಸಿದರೆ, ನಿಮ್ಮ ವೀಡಿಯೊವನ್ನು ತಪ್ಪುಗ್ರಹಿಕೆಯಿಂದ ತೆಗೆದುಹಾಕಲಾಗಿದೆ ಎಂದು ನೀವು ಭಾವಿಸಿದರೆ ಏನು ಮಾಡಬೇಕು ಎಂಬುದರ ಕುರಿತು ಮಾಹಿತಿ ಪಡೆಯಿರಿ. ಅಥವಾ, Content ID ಹೊಂದಾಣಿಕೆ ಕುರಿತು ತಕರಾರು ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿ ಪಡೆಯಿರಿ. ಸುಲಭವಾಗಿ ಬಳಸಬಹುದಾದ ನಿರ್ವಹಣೆ ಪ್ರಕ್ರಿಯೆಗಳ ಹಕ್ಕು ಕುರಿತು ಇನ್ನಷ್ಟು ತಿಳಿದುಕೊಳ್ಳಲು ಕೆಳಗಿನ ಸಂಪನ್ಮೂಲಗಳು ನಿಮಗೆ ಸಹಾಯ ಮಾಡುತ್ತವೆ.
ನಿಮ್ಮ ಸೃಜನಶೀಲ ಕೃತಿಯ ಅನಧಿಕೃತ ಬಳಕೆಯನ್ನು ತೆಗೆದುಹಾಕಲು ವಿನಂತಿಸಿ.
ಕೃತಿಸ್ವಾಮ್ಯದ ಉಲ್ಲಂಘನೆಯ ಕಾರಣಕ್ಕೆ YouTube ತಪ್ಪುಗ್ರಹಿಕೆಯಿಂದ ತೆಗೆದುಹಾಕಲಾದ ವೀಡಿಯೊವನ್ನು ಮರುಸ್ಥಾಪಿಸಲು ವಿನಂತಿ ಸಲ್ಲಿಸಿ.
ನೀವು ಅಥವಾ ನಿಮ್ಮ ಕಂಪನಿ YouTube ಗೆ ಸಲ್ಲಿಸಿರುವ ತೆಗೆದುಹಾಕುವ ವಿನಂತಿಯನ್ನು ರದ್ದುಮಾಡಿ ಅಥವಾ ಹಿಂತೆಗೆದುಕೊಳ್ಳಿ.
ನೀವು ತಪ್ಪೆಂದು ಭಾವಿಸುವ ನಿಮ್ಮ ವೀಡಿಯೊದಲ್ಲಿನ Content ID ಕ್ಲೈಮ್ಗೆ ವಿರೋಧ ವ್ಯಕ್ತಪಡಿಸಿ.
ಕೃತಿಸ್ವಾಮ್ಯದ ಕುರಿತು ಅರಿತುಕೊಳ್ಳಲು ಸಾಕಷ್ಟಿದೆ. ಕೃತಿಸ್ವಾಮ್ಯ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಲು ನೀವು ಬಯಸಿದಲ್ಲಿ, ಅಂಥದ್ದೊಂದು ಕಾರ್ಯದ ಪ್ರಾರಂಭಕ್ಕೆ ಕೆಳಗಿನ ಸಂಪನ್ಮೂಲಗಳು ಅತ್ಯುತ್ತಮ ಸ್ಥಳವಾಗಿವೆ. ನಿಮ್ಮ ಪ್ರಶ್ನೆಗೆ ಇಲ್ಲಿ ಉತ್ತರ ದೊರಕದಿದ್ದರೆ, ದಯವಿಟ್ಟು ನಮ್ಮ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ. ಅಲ್ಲಿ ನಿಮಗೆ ಇನ್ನಷ್ಟು ಮಾಹಿತಿ ದೊರೆಯುತ್ತದೆ.
Content ID ಕ್ಲೈಮ್ ಮತ್ತು ಕೃತಿಸ್ವಾಮ್ಯ ತೆಗೆದುಹಾಕುವಿಕೆಯ ನಡುವಿನ ವ್ಯತ್ಯಾಸ ಕಲ್ಪಿಸಿ.
ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ನೀವು ಸ್ವೀಕರಿಸಿದ್ದರೆ, ಅದಕ್ಕೆ ಕಾರಣ ತಿಳಿದುಕೊಳ್ಳಿ ಹಾಗೂ ಅದರ ಪರಿಹಾರಕ್ಕೆ ಉತ್ತಮ ವಿಧಾನವನ್ನು ತಿಳಿದುಕೊಳ್ಳಿ.
Youtube ನಲ್ಲಿ ಕೃತಿಸ್ವಾಮ್ಯ-ರಕ್ಷಿತ ವಿಷಯವನ್ನು ಪತ್ತೆಹಚ್ಚುವ ವಿಧಾನಗಳೊಂದರ ಕುರಿತು ಮತ್ತು ನೀವು ಕ್ಲೈಮ್ ಪಡೆದರೆ ಏನು ಮಾಡಬಹುದೆಂಬ ಬಗ್ಗೆ ತಿಳಿಯಿರಿ.
ಕೆಲವು YouTube ವೈಶಿಷ್ಟ್ಯಗಳಿಗೆ ಉತ್ತಮ ಕೃತಿಸ್ವಾಮ್ಯ ಸ್ಥಿತಿಯ ಅವಶ್ಯಕತೆಯಿದೆ.
YouTube ಗೆ ಅಪ್ಲೋಡ್ ಮಾಡಲಾದ ವೀಡಿಯೊಗಳಲ್ಲಿರುವ ತಮ್ಮ ವಿಷಯವನ್ನು ಗುರುತಿಸಲು ಮತ್ತು ಕ್ಲೈಮ್ ಮಾಡಲು ವಿಷಯ ಮಾಲೀಕರು ಬಳಸುವ ಪರಿಕರವಾದ Content ID ಕುರಿತು ಇನ್ನಷ್ಟು ತಿಳಿದುಕೊಳ್ಳಿ.
ನಿಮ್ಮ ಖಾತೆ ಉತ್ತಮ ಅಥವಾ ಕೆಟ್ಟ ಕೃತಿಸ್ವಾಮ್ಯ ಸ್ಥಿತಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿ.
ಕೃತಿಸ್ವಾಮ್ಯದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ? ನೀವು ಕೇವಲ ನಿಮ್ಮ ಜ್ಞಾನ ವೃದ್ಧಿ ಮಾಡಿಕೊಳ್ಳುತ್ತಿರಲಿ ಇಲ್ಲವೇ ನ್ಯಾಯಯುತ ಬಳಕೆಯಂತಹ ವಿಷಯಗಳನ್ನು ಇನ್ನಷ್ಟು ಆಳವಾಗಿ ಅರ್ಥ ಮಾಡಿಕೊಳ್ಳುತ್ತಿರಲಿ, ಎಲ್ಲದರ ಪ್ರಾರಂಭಕ್ಕೂ ಈ ಸಂಪನ್ಮೂಲಗಳು ನಾಂದಿ ಹಾಡುತ್ತವೆ.
ಕೃತಿಸ್ವಾಮ್ಯದ ರಕ್ಷಣೆ ಎಂದರೇನು? ಇತರ ಬೌದ್ಧಿಕ ಸ್ವತ್ತು ಸ್ವರೂಪಗಳಿಗಿಂತ ಕೃತಿಸ್ವಾಮ್ಯ ಹೇಗೆ ಭಿನ್ನವಾಗಿದೆ?
ಕೃತಿಸ್ವಾಮ್ಯಗೊಳಿಸಿದ ವಿಷಯದಿಂದ ಆಯ್ದ ಭಾಗಗಳ ಬಳಕೆಯನ್ನು ಕಾನೂನಿನ ಅಡಿಯಲ್ಲಿ ಅನುಮತಿಸುವ ಕೆಲವೊಂದು ಸಂದರ್ಭಗಳಿವೆ.
ನೀವು ನಿಯಮಗಳನ್ನು ಅನುಸರಿಸುತ್ತಿದ್ದರೆ -- ವಿಷಯವನ್ನು ಮರುಬಳಕೆ ಮಾಡಲು ಅನುಮತಿಸುವಂತಹ ವಿಶೇಷ ಪ್ರಕಾರದ ಪರವಾನಗಿಯ ಕುರಿತು ತಿಳಿದುಕೊಳ್ಳಿ.
ನಮಗೆ ಹೆಚ್ಚು ಆಗಾಗ್ಗೆ ಕೇಳಲಾದ ಕೃತಿಸ್ವಾಮ್ಯ ಪ್ರಶ್ನೆಗಳಿಗೆ ಉತ್ತರಗಳು.