ಅಂಕಿಅಂಶಗಳು

ವೀಕ್ಷಕರು

  • ಪ್ರತಿ ತಿಂಗಳು 1 ಬಿಲಿಯನ್‌ಗಿಂತಲೂ ಹೆಚ್ಚಿನ ಅನನ್ಯ ಬಳಕೆದಾರರು YouTube ಗೆ ಭೇಟಿ ನೀಡುತ್ತಾರೆ
  • ಪ್ರತಿ ತಿಂಗಳು YouTube ನಲ್ಲಿ 6 ಬಿಲಿಯನ್ ಗಂಟೆಗಳಿಗೂ ಹೆಚ್ಚು ಅವಧಿಯ ವೀಡಿಯೊವನ್ನು ವೀಕ್ಷಿಸಲಾಗುತ್ತದೆ—ಅಂದರೆ ಭೂಮಿಯಲ್ಲಿನ ಪ್ರತಿ ವ್ಯಕ್ತಿಯೊಬ್ಬರಿಗೆ ಸುಮಾರು ಒಂದು ಗಂಟೆಯಷ್ಟು
  • YouTube ನಲ್ಲಿ ನಿಮಿಷವೊಂದಕ್ಕೆ 100 ಗಂಟೆಗಳಷ್ಟು ವೀಡಿಯೊವನ್ನು ಅಪ್‌ಲೋಡ್ ಮಾಡಲಾಗುತ್ತದೆ
  • 80% ರಷ್ಟು YouTube ಟ್ರಾಫಿಕ್‌‌ US ನ ಹೊರಗಿನಿಂದ ಬರುತ್ತವೆ
  • YouTube ಅನ್ನು 61 ದೇಶಗಳಲ್ಲಿ ಮತ್ತು 61 ಭಾಷೆಗಳಲ್ಲಿ ಸ್ಥಳೀಕರಿಸಲಾಗಿದೆ
  • ನೀಲ್ಸನ್ ಪ್ರಕಾರ, ಯಾವುದೇ ಕೇಬಲ್ ನೆಟ್‌ವರ್ಕ್‌ಗಿಂತಲೂ 18-34 ರ ವಯಸ್ಸುಳ್ಳ ಹೆಚ್ಚಿನ US ವಯಸ್ಕರನ್ನು YouTube ತಲುಪುತ್ತದೆ
  • ಪ್ರತಿದಿನವೂ ಲಕ್ಷಾಂತರ ಚಂದಾದಾರಿಕೆಗಳು ನಡೆಯುತ್ತದೆ. ಪ್ರತಿದಿನವೂ ಚಂದಾದಾರರಾಗುತ್ತಿರುವ ಜನರ ಸಂಖ್ಯೆಯು ಕಳೆದ ವರ್ಷದಿಂದ 3x ರಷ್ಟು ಹೆಚ್ಚಾಗಿದೆ ಮತ್ತು ಪ್ರತಿದಿನದ ಚಂದಾದಾರಿಕೆಗಳ ಸಂಖ್ಯೆಯು ಕಳೆದ ವರ್ಷದಿಂದ 4x ರಷ್ಟು ಹೆಚ್ಚಾಗಿದೆ

YouTube ಪಾಲುದಾರ ಪ್ರೋಗ್ರಾಮ್

  • 2007 ನಲ್ಲಿ ಸ್ಥಾಪಿಸಲಾಯಿತು, ಪ್ರಪಂಚದಾದ್ಯಂತ YouTube ವೀಡಿಯೊಗಳಿಂದ ಹಣಗಳಿಸುತ್ತಿರುವ ಸುಮಾರು 30 ದೇಶಗಳಲ್ಲಿ ಮಿಲಿಯನ್‌ಗೂ ಹೆಚ್ಚಿನ ರಚನೆಕಾರರನ್ನು ನಾವು ಇದೀಗ ಹೊಂದಿದ್ದೇವೆ.
  • ಸಾವಿರಾರು ಚಾನಲ್‌ಗಳು ಒಂದು ವರ್ಷದಲ್ಲಿ ಸಂಪಾದಿಸುತ್ತಿರುವ ಹಣದ ಮೊತ್ತ ಅರು ಅಂಕಿಗಳನ್ನು ದಾಟಿದೆ.

ಹಣಗಳಿಸುವಿಕೆ

  • ಸಾವಿರಾರು ಜಾಹೀರಾತುದಾರರು TrueView ಇನ್-ಸ್ಟ್ರೀಮ್ ಅನ್ನು ಬಳಸುತ್ತಿದ್ದಾರೆ ಮತ್ತು 75% ರಷ್ಟು ನಮ್ಮ ಇನ್-ಸ್ಟ್ರೀಮ್ ಜಾಹೀರಾತುಗಳನ್ನು ಈಗ ಬಿಡಬಹುದಾಗಿದೆ
  • Google ಜಾಹೀರಾತು ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಸುವಂತಹ ಮಿಲಿಯನ್‌ಗಿಂತಲೂ ಹೆಚ್ಚಿನ ಜಾಹೀರಾತುದಾರರನ್ನು ನಾವು ಹೊಂದಿದ್ದೇವೆ, ಇದರಲ್ಲಿ ಸಣ್ಣ ವ್ಯವಹಾರಗಳು ಅಧಿಕ ಸಂಖ್ಯೆಯಲ್ಲಿವೆ

ಮೊಬೈಲ್ ಮತ್ತು ಸಾಧನಗಳು

  • YouTube ನ ಜಾಗತಿಕ ವೀಕ್ಷಣೆ ಸಮಯದ 40% ರಷ್ಟು ಮೊಬೈಲ್‌ನಿಂದಲೇ ಆಗುತ್ತದೆ
  • YouTube ನೂರು ಮಿಲಿಯನ್‌‌ಗಳಷ್ಟು ಸಾಧನಗಳಲ್ಲಿ ಲಭ್ಯವಿದೆ

Content ID

  • ಪ್ರತಿದಿನವೂ 400ಕ್ಕಿಂತಲೂ ಹೆಚ್ಚು ವರ್ಷಗಳ ವೀಡಿಯೊವನ್ನು Content ID ಪರಿಶೀಲಿಸುತ್ತದೆ
  • ಪ್ರಮುಖ US ನೆಟ್‌ವರ್ಕ್ ಪ್ರಸಾರಕರು, ಮೂವಿ ಸ್ಟುಡಿಯೊಗಳು ಮತ್ತು ರೆಕಾರ್ಡ್ ಲೇಬಲ್‌ಗಳು ಒಳಗೊಂಡಂತೆ 5,000 ಕ್ಕಿಂತಲೂ ಹೆಚ್ಚಿನ ಪಾಲುದಾರರು Content ID ಯನ್ನು ಬಳಸುತ್ತಾರೆ
  • ನಮ್ಮ Content ID ಡೇಟಾಬೇಸ್‌ನಲ್ಲಿ 25 ಮಿಲಿಯನ್‌ಗಿಂತಲೂ ಹೆಚ್ಚಿನ ಉಲ್ಲೇಖ ಫೈಲ್‌ಗಳನ್ನು ನಾವು ಹೊಂದಿದ್ದೇವೆ; ಇದು ಪ್ರಪಂಚದಲ್ಲೇ ಅತ್ಯಂತ ಹೆಚ್ಚು ವ್ಯಾಪಕವಾಗಿದೆ
  • Content ID ಪಾಲುದಾರರಿಗಾಗಿ ಲಕ್ಷಾಂತರ ಡಾಲರ್‌ಗಳ ಲಾಭ ಒದಗಿಸಿದೆ