ಸಂಪೂರ್ಣ YouTube ಸಮುದಾಯಕ್ಕಾಗಿ ಹಕ್ಕುಸ್ವಾಮ್ಯವೆನ್ನುವುದು ಮುಖ್ಯವಾದ ವಿಷಯವಾಗಿದೆ. ಕೆಳಗಿನ ವಿಭಾಗಗಳಲ್ಲಿ, YouTube ವೇದಿಕೆಯಲ್ಲಿ ನಿಮ್ಮ ಹಕ್ಕುಗಳನ್ನು ನಿರ್ವಹಿಸಲು ಅವಶ್ಯಕವಾದ ಎಲ್ಲಾ ಮಾಹಿತಿ ಮತ್ತು ಪರಿಕರಗಳಿಗೆ ಪ್ರವೇಶವನ್ನು ನೀವು ಪಡೆದುಕೊಳ್ಳುತ್ತೀರಿ ಮತ್ತು ಇತರ ರಚನೆಕಾರರ ಹಕ್ಕುಗಳನ್ನು ಗೌರವಿಸುವುದರ ಕುರಿತು ಇನ್ನಷ್ಟು ತಿಳಿದುಕೊಳ್ಳುತ್ತೀರಿ.
ದಾಖಲಿಸಿದ ಹಕ್ಕುಸ್ವಾಮ್ಯ ಉಲ್ಲಂಘನೆ ಅಧಿಸೂಚನೆಯನ್ನು ಸಲ್ಲಿಸಲು ನೀವು ಬಯಸಿದರೆ, ದೋಷದಲ್ಲಿ ನಿಮ್ಮ ವೀಡಿಯೊವನ್ನು ತೆಗೆದುಹಾಕಲಾಗಿದೆ ಎಂದು ನೀವು ಭಾವಿಸಿದರೆ ಏನು ಮಾಡಬೇಕು ಎಂಬುದರ ಕುರಿತು ಮಾಹಿತಿ ಪಡೆಯಿರಿ ಅಥವಾ ವಿಷಯ ID ಹೊಂದಿಕೆಯ ಕುರಿತು ತಕರಾರು ಎತ್ತುವುದು ಹೇಗೆ ಎಂಬುದರ ಕುರಿತು ಮಾಹಿತಿ ಪಡೆಯಿರಿ, ಬಳಸಲು ಸುಲಭವಾಗಿರುವ ನಿರ್ವಹಣೆ ಪ್ರಕ್ರಿಯೆಗಳ ಹಕ್ಕು ಕುರಿತು ಕೆಳಗಿನ ಸಂಪನ್ಮೂಲಗಳು ನಿಮಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತವೆ.
ನಿಮ್ಮ ಕ್ರಿಯಾತ್ಮಕ ಕಾರ್ಯದ ಅನಧಿಕೃತ ಬಳಕೆಯನ್ನು ತೆಗೆದುಹಾಕಲು ವಿನಂತಿಸಿ.
ಹಕ್ಕುಸ್ವಾಮ್ಯದ ಉಲ್ಲಂಘನೆಗಾಗಿ YouTube ನಿಂದ ತಪ್ಪಾಗಿ ತೆಗೆದುಹಾಕಲಾದ ವೀಡಿಯೊವನ್ನು ಮರುಸ್ಥಾಪಿಸಲು ವಿನಂತಿಸಿ.
ನೀವು ಅಥವಾ ನಿಮ್ಮ ಕಂಪನಿ YouTube ಗೆ ಸಲ್ಲಿಸಿರುವ ತೆಗೆದುಹಾಕುವ ವಿನಂತಿಯನ್ನು ರದ್ದುಮಾಡಿ, ಅಥವಾ ಹಿಂತೆಗೆದುಕೊಳ್ಳಿ.
ನೀವು ತಪ್ಪೆಂದು ಭಾವಿಸುವ ನಿಮ್ಮ ವೀಡಿಯೊದ ವಿಷಯ ID ಹೊಂದಿಕೆಯನ್ನು ವಿರೋಧಿಸಿ.
ಹಕ್ಕುಸ್ವಾಮ್ಯ ಜಗತ್ತನ್ನು ಕುರಿತು ತಿಳಿದುಕೊಳ್ಳಲು ಬಹಳಷ್ಟಿದೆ. ಹಕ್ಕುಸ್ವಾಮ್ಯ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಲು ನೀವು ಬಯಸಿದಲ್ಲಿ, ಅಂಥದ್ದೊಂದು ಕಾರ್ಯದ ಪ್ರಾರಂಭಕ್ಕೆ ಕೆಳಗಿನ ಸಂಪನ್ಮೂಲಗಳು ಅತ್ಯುತ್ತಮ ಸ್ಥಳವಾಗಿವೆ. ನಿಮ್ಮ ಪ್ರಶ್ನೆಗೆ ಇಲ್ಲಿ ಉತ್ತರ ದೊರಕದಿದ್ದರೆ ದಯವಿಟ್ಟು ನಮ್ಮ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ. ಅಲ್ಲಿ ನಿಮಗೆ ಇನ್ನಷ್ಟು ಮಾಹಿತಿ ದೊರೆಯುತ್ತದೆ.
ವಿಷಯ ID ಹಕ್ಕು ಮತ್ತು ಹಕ್ಕುಸ್ವಾಮ್ಯ ತೆಗೆದುಹಾಕುವಿಕೆಯ ನಡುವಿನ ವ್ಯತ್ಯಾಸ ಕಲ್ಪಿಸಿ.
ಹಕ್ಕುಸ್ವಾಮ್ಯ ಸ್ಟ್ರೈಕ್ ಅನ್ನು ನೀವು ಸ್ವೀಕರಿಸಿದ್ದರೆ, ಏಕೆ ಮತ್ತು ಅದನ್ನು ಪರಿಹರಿಸಲು ಉತ್ತಮ ವಿಧಾನವನ್ನು ತಿಳಿದುಕೊಳ್ಳಿ.
ವಿಷಯ ID, YouTube ಗೆ ಅಪ್ಲೋಡ್ ಮಾಡಲಾದ ವೀಡಿಯೊಗಳಲ್ಲಿರುವ ಅವರ ವಿಷಯವನ್ನು ಗುರುತಿಸಲು ಮತ್ತು ಹಕ್ಕು ಪಡೆಯಲು ವಿಷಯ ಮಾಲೀಕರು ಬಳಸಿದ ಪರಿಕರದ ಕುರಿತು ಇನ್ನಷ್ಟು ತಿಳಿದುಕೊಳ್ಳಿ.
ಕೆಲವು YouTube ವೈಶಿಷ್ಟ್ಯಗಳಿಗೆ ಉತ್ತಮ ನೆಲೆಯ ಹಕ್ಕುಸ್ವಾಮ್ಯದ ಅವಶ್ಯಕತೆಯಿದೆ.
ನಿಮ್ಮ ಖಾತೆ ಉತ್ತಮ ಅಥವಾ ಕೆಟ್ಟ ನೆಲೆಯ ಹಕ್ಕುಸ್ವಾಮ್ಯದಲ್ಲಿದೆಯೇ ಎಂಬುದನ್ನು ಪರಿಶೀಲಿಸಿ.
ಹಕ್ಕುಸ್ವಾಮ್ಯದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಕಾಯುತ್ತಿರುವಿರಾ? ನೀವು ಸಾಮಾನ್ಯ ಜ್ಞಾನವನ್ನು ಪಡೆಯುತ್ತಿರಲಿ ಇಲ್ಲವೇ ನ್ಯಾಯಯುತ ಬಳಕೆಯಂತಹ ವಿಷಯಗಳನ್ನು ಇನ್ನಷ್ಟು ಆಳವಾಗಿ ಅರ್ಥೈಸಿಕೊಳ್ಳುತ್ತಿರಲಿ ಈ ಸಂಪನ್ಮೂಲಗಳು ನಿಮ್ಮ ಪ್ರಾರಂಭಕ್ಕೆ ನಾಂದಿ ಹಾಡುತ್ತವೆ.
ಹಕ್ಕುಸ್ವಾಮ್ಯದಿಂದ ರಕ್ಷಿತ ಎಂದರೇನು? ಇತರ ಬೌದ್ಧಿಕ ಸ್ವತ್ತು ಸ್ವರೂಪಗಳಿಗಿಂತ ಹಕ್ಕುಸ್ವಾಮ್ಯ ಹೇಗೆ ಭಿನ್ನವಾಗಿದೆ?
ಹಕ್ಕುಸ್ವಾಮ್ಯಗೊಳಿಸಿದ ವಿಷಯದಿಂದ ಉದ್ದೃತ ಭಾಗಗಳ ಬಳಕೆಯನ್ನು ಕಾನೂನಿನ ಅಡಿಯಲ್ಲಿ ಅನುಮತಿಸುವ ಕೆಲವೊಂದು ಸಂದರ್ಭಗಳಿವೆ.
ನೀವು ನಿಯಮಗಳನ್ನು ಅನುಸರಿಸುತ್ತಿದ್ದರೆ -- ಮರುಬಳಕೆ ಮಾಡಲು ಅನುಮತಿಸುವಂತಹ ವಿಶೇಷ ಪ್ರಕಾರದ ಪರವಾನಗಿಯ ಕುರಿತು ತಿಳಿದುಕೊಳ್ಳಿ.
ನಾವು ಪದೇ ಪದೇ ಕೇಳಲಾಗುವ ಹಕ್ಕುಸ್ವಾಮ್ಯ ಪ್ರಶ್ನೆಗಳಿಗೆ ಉತ್ತರಗಳು.