ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ
‘ಸಂಚಯ’ ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.
ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.
ಸಾಹಿತ್ಯ
ಕನ್ನಡ, ದ್ರಾವಿಡ ಭಾಷಾ ಬಳಗದ ಎರಡನೆ ಅತಿ ಹಳೆಯ ಭಾಷೆಯಾಗಿದ್ದು, ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನ ಕವಿರಾಜಮಾರ್ಗದಿಂದ ಪ್ರಾರಂಭವಾಗಿ ಇದುವರೆಗಿನ ಸಾಹಿತ್ಯ ಪ್ರಕಾರಗಳಲ್ಲಿರುವ ರಸದೌತಣವನ್ನು ಕನ್ನಡಿಗರಿಗೆ ಅಂತರ್ಜಾಲದ ಮೂಲಕ ಒದಗಿಸುವುದು ನಮ್ಮ ಉದ್ದೇಶ.
ಸಂಶೋಧನೆ
ಕನ್ನಡದ ಭಾಷಾ ಸಂಶೋಧನೆಗೆ ಅತಿ ಮುಖ್ಯವಾದ ವೇದಿಕೆಯ ಸೃಷ್ಟಿ ‘ಕನ್ನಡ ಸಂಚಯ’ದ ಮುಖ್ಯ ಗುರಿ. ಸಾಮಾನ್ಯನಿಂದ ಹಿಡಿದು, ವಿದ್ಯಾರ್ಥಿಗಳು, ಭಾಷಾ ಸಂಶೋಧಕರು, ವಿಜ್ಞಾನಿಗಳು ಇದರ ಉಪಯೋಗ ಪಡೆಯಲೆಂದು ಆಶಿಸುತ್ತೇವೆ. ಸಂಶೋಧನೆಯ ಅವಕಾಶವನ್ನು ಎಲ್ಲರಿಗೂ ಮುಕ್ತವಾಗಿ ಲಭ್ಯವಿದೆ.
ಡಿಜಿಟಲೀಕರಣ
ಅಧ್ಯಯನ
ಸಾಹಿತ್ಯ ಆಸಕ್ತರಿಗೆ ಯಾವುದೇ ಅಡೆತಡೆಗಳಿಲ್ಲದೆ, ಅಧ್ಯಯನಕ್ಕೆ ಕನ್ನಡ ಸಾಹಿತ್ಯ ಲೋಕದಿಂದ ಸಾಧ್ಯವಾದದ್ದನ್ನೇಲ್ಲಾ ಕನ್ನಡಿಗರಿಗಾಗಿ ತೆರೆದಿಡುವ ಸಾಧ್ಯತೆಯನ್ನು ಹುಡುಕುವ ಪ್ರಯತ್ನದಲ್ಲಿದ್ದೇವೆ. ನಿಮಗೆ ಇದು ತಲುಪುತ್ತಿದ್ದಲ್ಲಿ ನಮ್ಮ ಕಾರ್ಯ ಸಾರ್ಥಕ. ಇಲ್ಲವಾದಲ್ಲಿ ನಿಮ್ಮ ನೆನಪು ನಮಗೆ ಅಗತ್ಯ.
ಸಮುದಾಯ
ಸಮಾನ ಮನಸ್ಕರ, ಸಾಹಿತ್ಯಾಸಕ್ತರ, ವಿದ್ಯಾರ್ಥಿ, ತಾಂತ್ರಿಕ ಬಳಗ ಎಲ್ಲರ ಒಗ್ಗಟ್ಟಿನ ಕೆಲಸ ಮಾತ್ರ ನಾಳಿನ ಕನ್ನಡ ಭಾಷಾ ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸಬಲ್ಲದು. ನಮ್ಮ ಯೋಜನೆಗಳ ಸುತ್ತ ಇಂತಹ ಸಮುದಾಯಗಳು ರೂಪುಗೊಳ್ಳಲು ಬೇಕಾದ ವೇದಿಕೆಗಳನ್ನು ಸೃಷ್ಟಿಸುವ ಮೂಲಕ ಸಂವಹನೆಗೆ ದಾರಿ ಮಾಡಿಕೊಡಲಾಗುತ್ತಿದೆ.
ಕರ್ನಾಟ ಎಫ಼್. ಕಿಟ್ಟೆಲ್ ಅಕ್ಷರ ವಿನ್ಯಾಸ ಲೋಕಾರ್ಪಣೆ ಕಾರ್ಯಕ್ರಮ ವರದಿ
https://www.youtube.com/watch?v=r2qrfQcH92g ಎನ್. ಏ. ಎಂ ಇಸ್ಮಾಯಿಲ್ ಅವರು ಸಭೆಯನ್ನು ಪ್ರಾರಂಭಿಸಿ, ಸಮುದಾಯದ ಮೂಲಕ ಕನ್ನಡದ ತಾಂತ್ರಿಕ ಬೆಳವಣಿಗೆಗೆ ಜನಸಾಮಾನ್ಯರೇ ಕಂಡುಕೊಂಡ ಉತ್ತರಗಳು ಹಾಗೂ ಅವುಗಳ ಕೊಡುಗೆಯನ್ನು ನೆನೆದು, ಪ್ರಶಾಂತ ಪಂಡಿತ್ ಅವರು ತಂತ್ರಜ್ಞರಾಗಿ ನಂತರ ಹೊರಬಂದು ಸಿನೆಮಾ ರಂಗದಲ್ಲಿದ್ದರೂ ತಮ್ಮ...
ಹೊಂಗನಸು – ಬಿ.ಎಂ.ಶ್ರೀ. ಪ್ರತಿಷ್ಠಾನದ ವಾರ್ತಾಪತ್ರದ ಸಮಗ್ರ ಸಂಚಿಕೆ ಗಳು
ಹೊಂಗನಸು - ಬಿ.ಎಂ.ಶ್ರೀ. ಪ್ರತಿಷ್ಠಾನದ ವಾರ್ತಾಪತ್ರದ ಸಮಗ್ರ ಸಂಚಿಕೆ ಗಳನ್ನು ಒಂದೆಡೆ ಸೇರಿಸಲಾಗಿದೆ. #bmshri #kannada #digitization...
ಕಿಟ್ಟೆಲ್ ಅಕ್ಷರ ವಿನ್ಯಾಸ ಲೋಕಾರ್ಪಣೆ ಕಾರ್ಯಕ್ರಮ – ನೀವೂ ಭಾಗವಹಿಸಿ
ಸಂಚಯದಲ್ಲಿಂದು ತಾಳೆಗರಿ ಸಂರಕ್ಷಣೆ ಕಾರ್ಯಾಗಾರ
ಪಿ. ವಿ. ನಾರಾಯಣ ಅವರ ಕನ್ನಡ ಸಾಹಿತ್ಯ ಸಂಚಯ
ಪಿ. ವಿ. ನಾರಾಯಣ ಅವರ ಕನ್ನಡ ಸಾಹಿತ್ಯ ಸಂಚಯ - https://pvn.sanchaya.net/ ಪಿ. ವಿ. ನಾರಾಯಣ ಅವರು ಕನ್ನಡಿಗರಿಗೆ ಲಭ್ಯವಾಗಿಸಿರುವ ಕೆಲವು ಕೃತಿಗಳನ್ನು ಇಲ್ಲಿ ಕ್ರೂಡೀಕರಿಸಲಾಗಿದೆ....
ಹೊಸ ಮನುಷ್ಯ ಪತ್ರಿಕೆಯ ಸಂಚಯ
ಡಿ. ಎಸ್. ನಾಗಭೂಷಣ ಅವರ ಸಂಪಾದಕೀಯದ ಹೊಸ ಮನುಷ್ಯ ಪತ್ರಿಕೆಯ ಡಿಜಿಟಲೀಕರಣ ಮುಗಿದಿದ್ದು, ಎಲ್ಲರಿಗೆ ಈ ಕೆಳಗಿನ ಕೊಂಡಿಗಳ ಮೂಲಕ ಲಭ್ಯವಿವೆ. ಈ ಯೋಜನೆಗೆ ಎಲ್ಲ ಸಂಚಿಕೆಗಳನ್ನು ಒದಗಿಸಿ, ಇದನ್ನು ಸಾಧ್ಯವಾಗಿಸಿದ ಸವಿತಾ ನಾಗಭೂಷಣ ಅವರಿಗೂ, ಕಾರಣೀಕರ್ತರಾದ ಪ್ರೊ. ಓ.ಎಲ್. ಎನ್ ಸರ್ ಅವರಿಗೂ ಧನ್ಯವಾದಗಳು. Quick Access Link:...
ಗಾಂಧೀ ಸಂಚಯ
ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧೀ ಭವನ, ಬೆಂಗಳೂರು ಪ್ರಕಟಣೆಯ ಪುಸ್ತಕಗಳು ಈಗ ಎಲ್ಲರಿಗೆ ಮುಕ್ತವಾಗಿ ಡಿಜಿಟಲ್ ರೂಪದಲ್ಲಿ ಲಭ್ಯ. https://gandhi.sanchaya.net Gandhi's literature published by Karnataka Gandhi Smaraka Nidhi, Gandhi Bhavana Bengaluru has been digitized under...
ಭಾವನಾ ಸಂಚಯ
ಜಯಂತ್ ಕಾಯ್ಕಿಣಿ ಸಂಪಾದಕತ್ವದ ಭಾವನಾ ಕನ್ನಡ ಮಾಸಿಕದ ಸಂಚಿಕೆಗಳು ಈಗ Internet Archive ನ #servantsofknowledge ಸಂಗ್ರಹದಲ್ಲಿ ಲಭ್ಯ. ಇವುಗಳನ್ನು ಒಟ್ಟಾರೆಯಾಗಿ ಇಲ್ಲಿ ಕಾಣಬಹುದು - https://bhavana.sanchaya.net/ ಸಂಚಿಕೆಗಳನ್ನು ಲಭ್ಯವಾಗಿಸಿದ Devu Pattar Sushrutha Dodderi ಅವರಿಗೆ ಧನ್ಯವಾದಗಳು. ಇವುಗಳನ್ನು...
ಕಿಟ್ಟಲ್ ಕೋಶದಲ್ಲಿ ಇಣುಕಿ/ಹುಡುಕಿ ನೋಡಿ
ಡಿಜಿಟಲೀಕರಣದ ಕೆಲಸಗಳಿಂದ ಏನು ಪ್ರಯೋಜನ? ಯಾರಿಗೆ? ಏಕೆ? ಹೇಗೆ? ಕನ್ನಡ ಸಂಚಯ Sanchi Foundation ಕೆಲಸಗಳನ್ನು ಸ್ವಂತಕ್ಕೆ ಬಳಸಿ ನೋಡಿ, ಬೇರೆಯವರಿಗೆ ಮೂಲ ಕೊಂಡಿಯೊಂದಿಗೆ ಹಂಚಿ ಖುಷಿಪಡಿ. ಬೆಂಬಲಿಸಿ #KittleKosha #SearchInKittleKosha #ServantsOfKnowledge #ಕಿಟ್ಟಲ್ಕೋಶ #kannada #digitization...