ನವದೆಹಲಿ: ಭಾರತದಲ್ಲಿ ‘ಕೋವಿಡ್ 19‘ ಸಕ್ರಿಯ ಪ್ರಕರಣಗಳಿಗಿಂತ, ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ 50 ಪಟ್ಟು ಹೆಚ್ಚಿದ್ದು, ಇದೊಂದು ಬಹೃತ್ ಸಾಧನೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರಸ್ತುತ ಸೋಮವಾರದ ಹೊತ್ತಿಗೆ ದೇಶದಲ್ಲಿ ಕೋವಿಡ್ 19 ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1,02,11,342ರಷ್ಟಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 2,08,012ರಷ್ಟಿದೆ. ಈ ಎರಡು ಪ್ರಕರಣಗಳಲ್ಲಿನ ವ್ಯತ್ಯಾಸ 1,00,03,330. ಈ ಅಂಕಿ ಅಂಶಗಳ ಪ್ರಕಾರ