推文

你已封鎖 @BSYBJP

你確定要查看這些推文嗎?查看推文並不會將 @BSYBJP 解除封鎖

  1. 7 小時前

    ಬೆಂಗಳೂರಿನಲ್ಲಿ ಕೋವಿಡ್19 ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ‌ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದ ತುರ್ತುಕ್ರಮಗಳ ಕುರಿತು ಇಂದು ಹಿರಿಯ ವೈದ್ಯರು, ಪರಿಣತರು ಹಾಗು ನುರಿತ ತಜ್ಞರೊಂದಿಗೆ‌ ಚರ್ಚೆ ನಡೆಸಿ ಸಲಹೆಗಳನ್ನು ಪಡೆಯಲಾಯಿತು. ಸಭೆಯಲ್ಲಿ ಹಿರಿಯ ಸಚಿವರುಗಳು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು.

    還原
  2. 15 小時前

    ಜನಪ್ರಿಯ ನಾಯಕ, ಕಂದಾಯ ಸಚಿವರು ಹಾಗು ನನ್ನ ಆತ್ಮೀಯರೂ ಆಗಿರುವ ಶ್ರೀ ಆರ್.ಅಶೋಕ ಅವರಿಗೆ ಜನ್ಮದಿನದ ಹಾರ್ದಿಕ ಶುಭಕಾಮನೆಗಳು. ದೇವರ ಅನುಗ್ರಹ ಸದಾ ನಿಮ್ಮ ಜೊತೆಯಿರಲಿ ಎಂದು ಹಾರೈಸುತ್ತೇನೆ.

    還原
  3. 15 小時前

    ಹಿರಿಯ ಮುತ್ಸದ್ಧಿಗಳು, ಘನತೆವೆತ್ತ ಭಾರತದ ಉಪರಾಷ್ಟ್ರಪತಿಗಳೂ ಆಗಿರುವ ಆದರಣೀಯ ಶ್ರೀ ವೆಂಕಯ್ಯನಾಯ್ಡು ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ. Warm birthday greetings to Hon'ble Vice President of India Shri .

    還原
  4. 16 小時前

    ಎಲ್ಲ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನದ ಹಾರ್ದಿಕ ಶುಭಕಾಮನೆಗಳು. ಅನಾರೋಗ್ಯ ಉಂಟಾದಾಗ ಚಿಕಿತ್ಸೆ ನೀಡುವ ವೈದ್ಯರನ್ನು ದೇವರಂತೆ ಕಾಣುತ್ತೇವೆ. ವೈದ್ಯರ ಕರ್ತವ್ಯನಿಷ್ಠೆ, ಪರಿಶ್ರಮ ಮತ್ತು ಸೇವೆಗಳನ್ನು ಸಮಾಜ ಸದಾ ಆದರಿಸುತ್ತದೆ. ಈ ಕೋವಿಡ್ ವಿರುದ್ಧ ದಣಿವರಿಯದೆ ಹೋರಾಡುತ್ತಿರುವ ಎಲ್ಲ ವೈದ್ಯರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸೋಣ.

    還原
  5. 6月30日

    Government is doing everything to keep people safe. I urge people not to be negligent, follow all precautions. We can’t drop our guard against Covid19. My article in

    還原
  6. 6月30日

    ರೈತರು ಮತ್ತು ತೆರಿಗೆದಾರರ ಪರಿಶ್ರಮದಿಂದಲೇ ರಾಷ್ಟ್ರ ಇಷ್ಟು ದೊಡ್ಡ ಸಾಂಕ್ರಾಮಿಕ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸುತ್ತಿದೆ. ಸುಮಾರು 80ಕೋಟಿ ಭಾರತೀಯರಿಗೆ, ಮುಂದಿನ 5ತಿಂಗಳು, ತಿಂಗಳಿಗೊಮ್ಮೆ 5ಕೆಜಿ ಅಕ್ಕಿ/ಗೋಧಿ, 1ಕೆಜಿ ಬೇಳೆ ನೀಡುವ, ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್ ಯೋಜನೆ ಜಾರಿಗೆ ತರುವ ಪ್ರಧಾನಮಂತ್ರಿಗಳ ಘೋಷಣೆ ಐತಿಹಾಸಿಕ. 3/3

    顯示此對話串
    還原
  7. 6月30日

    ಜೊತೆಗೆ ಪ್ರಧಾನಮಂತ್ರಿಗಳು ತಮ್ಮ ಸಂದೇಶದಲ್ಲಿ ಹೇಳಿದಂತೆ ಸಾಂಕ್ರಾಮಿಕ ತಡೆಯಲು ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯಲ್ಲಿ ಕಿಂಚಿತ್ತೂ ನಿರ್ಲಕ್ಷ್ಯ ಸಲ್ಲದು. ಸಮಸ್ತ ಭಾರತೀಯರ ಈ ಜೀವ ರಕ್ಷಣೆಯ ಅಭಿಯಾನದಲ್ಲಿ ನಾವೆಲ್ಲರೂ ನಮ್ಮ ಕರ್ತವ್ಯ ನಿರ್ವಹಿಸೋಣ. ಸಾಮಾಜಿಕ ಅಂತರ, ನೈರ್ಮಲ್ಯ, ಮಾಸ್ಕ್ ಧಾರಣೆ ಕಡ್ಡಾಯ.ಈ ವಿಷಯದಲ್ಲಿ ಯಾರೂ ನಿಯಮಾತೀತರಲ್ಲ. 2/3

    顯示此對話串
    還原
  8. 6月30日

    ರಾಷ್ಟ್ರವನ್ನುದ್ದೇಶಿಸಿ ಶ್ರೀ ಯವರ ಸಂದೇಶವನ್ನು ನಾನು ಹೆಮ್ಮೆಯಿಂದ ಸ್ವಾಗತಿಸುತ್ತೇನೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಈ ವರ್ಷದ ನವೆಂಬರ್ ಅಂತ್ಯದವರೆಗೆ ಸುಮಾರು 90ಸಾವಿರ ಕೋಟಿ ರೂ. ವೆಚ್ಚದಲ್ಲಿ ವಿಸ್ತರಿಸುವ ಘೋಷಣೆ ಕೊರೋನಾ ಸಂಕಷ್ಟದ ಸಮಯದಲ್ಲಿ ಬಡಕುಟುಂಬಗಳ ಪಾಲಿಗೆ ಸಂಜೀವಿನಿಯಾಗಿದೆ.1/3

    顯示此對話串
    還原
  9. 6月30日

    ಬೆಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಇಂದು ಸಭೆ ನಡೆಸಲಾಯಿತು. ಬೆಂಗಳೂರಿನಲ್ಲಿ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 6500 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಒದಗಿಸುವ ಸರ್ಕಾರದ ಪ್ರಯತ್ನಗಳಿಗೆ ಸಹಕರಿಸುವಂತೆ ಕೋರಲಾಗಿದೆ.ಉಪಮುಖ್ಯಮಂತ್ರಿಗಳು, ಸಚಿವರು,ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

    還原
  10. 6月30日

    ಅಪ್ರತಿಮ ಸಾಧಕರು, ರಾಷ್ಟ್ರದ ಹೆಮ್ಮೆಯ ಹಿರಿಯ ವಿಜ್ಞಾನಿ, ಭಾರತರತ್ನ ಪ್ರೊ ಸಿ.ಎನ್.ಆರ್. ರಾವ್ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಯುವಜನತೆಗೆ ಸ್ಫೂರ್ತಿಯಾಗಿ ತಮ್ಮ ದೇಶಸೇವೆ ಹೀಗೆಯೇ ಮುಂದುವರಿಯಲಿ, ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ.

    還原
  11. 6月29日

    ಇಂದು ನಡೆದ ಡಾ.ಅಂಬರೀಶ್ ಸ್ಮಾರಕ ಪ್ರತಿಷ್ಠಾನದ ಪ್ರಥಮ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈಗಾಗಲೇ ಕಂಠೀರವ ಸ್ಟುಡಿಯೋದಲ್ಲಿ ಗುರುತಿಸಿರುವ 1ಎಕರೆ 34 ಗುಂಟೆ ಜಾಗದಲ್ಲಿ ಸ್ಮಾರಕ ನಿರ್ಮಾಣ ಕಾರ್ಯವನ್ನು ಕೂಡಲೇ ಪ್ರಾರಂಭಿಸಬೇಕೆಂದು ಸೂಚಿಸಲಾಯಿತು. ಸಂಸದೆ ಶ್ರೀಮತಿ ಸುಮಲತಾ ಅಂಬರೀಶ್ ಹಾಗು ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು.

    還原
  12. 6月29日

    ಇಂದು ಮೈಸೂರಿನ ಜೆ.ಎಸ್.ಎಸ್ ಮೆಡಿಕಲ್ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಕೋವಿಡ್-19 ಪರೀಕ್ಷಾ ಪ್ರಯೋಗಾಲಯದ ಉದ್ಘಾಟನೆಯನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಆನ್ ಲೈನ್ ಮೂಲಕ ನೆರವೇರಿಸಲಾಯಿತು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗು ಇತರೆ ಗಣ್ಯರು ಉಪಸ್ಥಿತರಿದ್ದರು.

    還原
  13. 6月28日

    ಮಾಜಿ ಕೇಂದ್ರ ಸಚಿವರು, ಹಾಲಿ ಸಂಸದರು, ಆತ್ಮೀಯರೂ ಆಗಿರುವ ಶ್ರೀ ರಮೇಶ್ ಜಿಗಜಿಣಗಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ.

    還原
  14. 6月28日

    ಮುತ್ಸದ್ಧಿ ರಾಜಕಾರಣಿ, ಆರ್ಥಿಕ ಸುಧಾರಣೆಗಳ ರೂವಾರಿ, ಮಾಜಿ ಪ್ರಧಾನಮಂತ್ರಿ ಶ್ರೀ ನರಸಿಂಹರಾವ್ ರವರ ಜನ್ಮಶತಮಾನೋತ್ಸವ ವರ್ಷದ ಪ್ರಾರಂಭದಂದು ಅವರನ್ನು ಸ್ಮರಿಸೋಣ. ಸ್ವಾತಂತ್ರ್ಯ ಚಳವಳಿಯಲ್ಲಿ ಕೂಡ ಸಕ್ರಿಯರಾಗಿದ್ದ ನರಸಿಂಹ ರಾವ್ ಅವರು, ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಮರೆಯಲಾಗದು.

    還原
  15. 6月27日

    ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಚರ್ಚಿಸಲು ಇಂದು ಕಾವೇರಿ ನಿವಾಸದಲ್ಲಿ ಉನ್ನತ ಮಟ್ಟದ ತುರ್ತು ಸಭೆ ನಡೆಸಲಾಯಿತು. ಸಭೆಯಲ್ಲಿ ಗೃಹ ಸಚಿವರು, ಕಂದಾಯ ಸಚಿವರು, ಮುಖ್ಯ ಕಾರ್ಯದರ್ಶಿಗಳು, ಅಪರ ಮುಖ್ಯಕಾರ್ಯದರ್ಶಿಗಳು, ಬಿಬಿಎಂಪಿ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

    和其他 2 人
    還原
  16. 6月27日

    ನಾಡಪ್ರಭು‌ ಕೆಂಪೇಗೌಡ ಜಯಂತಿ ಪ್ರಯುಕ್ತ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ, ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯ ಶಿಲಾನ್ಯಾಸ‌ ಹಾಗು ಸೆಂಟ್ರಲ್ ಪಾರ್ಕ್ ಕಾಮಗಾರಿಯ ಭೂಮಿ‌ಪೂಜೆಯನ್ನು‌ ಇಂದು ನೆರವೇರಿಸಲಾಯಿತು. ಅನೇಕ ಪೂಜ್ಯ ಸಂತರು, ಮಾಜಿ ಪ್ರಧಾನಿ ದೇವೇಗೌಡರು, ಸಚಿವರು, ಪ್ರತಿಪಕ್ಷ ನಾಯಕರು ಉಪಸ್ಥಿತರಿದ್ದರು.

    還原
  17. 6月27日

    ಜನಪ್ರಿಯ ಶಾಸಕರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ ಸುಧಾಕರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.

    還原
  18. 6月27日

    ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು. ತಮ್ಮ ಮಹಾಪ್ರಯತ್ನ ಮತ್ತು ದೂರದೃಷ್ಠಿಗಳಿಂದ ಸುಂದರ, ಸುರಕ್ಷಿತ ಹಾಗು ಶ್ರೇಷ್ಠ ವಾತಾವರಣದ ಸುಸಜ್ಜಿತ ಬೆಂಗಳೂರು ನಗರಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟ ಆದರ್ಶ ಅರಸ ಕೆಂಪೇಗೌಡರನ್ನು ನಾಡು ಎಂದೂ ಮರೆಯುವುದಿಲ್ಲ. ಪ್ರಜಾಪಾಲನೆ ಮತ್ತು ಜನಸೇವೆಯ ಅವರ ಸಾಧನೆಗಳು ಚಿರಂತನವಾಗಿವೆ.

    還原
  19. 6月26日

    ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಮುಂದಿನ ಕಾರ್ಯತಂತ್ರಗಳ ಕುರಿತು ಇಂದು ಸಂಜೆ ತಜ್ಞರೊಂದಿಗೆ ಸಮಾಲೋಚನೆ ಸಭೆ ನಡೆಸಿ, ಸಲಹೆಗಳನ್ನು ಪಡೆಯಲಾಯಿತು. ತಜ್ಞ ವೈದ್ಯರುಗಳಾದ ಡಾ.ದೇವಿಶೆಟ್ಟಿ, ಡಾ.ಮಂಜುನಾಥ್, ಡಾ.ಗಿರೀಶ್, ಡಾ.ಸುದರ್ಶನ್, ಮುಖ್ಯಕಾರ್ಯದರ್ಶಿ ಶ್ರೀ ವಿಜಯಭಾಸ್ಕರ್ ಸಭೆಯಲ್ಲಿ ಭಾಗವಹಿಸಿದ್ದರು.

    還原
  20. 6月26日

    ಹಿರಿಯ ನಾಯಕರು ಮತ್ತು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ. Warm birthday wishes to Union Petroleum Minister Sh Ji.

    還原

看來要一段時間讀取資料。

Twitter 可能已超出負載,或發生暫時性的小問題。請再試一次,或造訪 Twitter 狀態以取得更多資訊。

    你也可能也會喜歡

    ·