Твитови

Блокирао/ла си корисника @BSYBJP

Да ли сигурно желиш да видиш ове твитове? Приказивање твитова неће одблокирати корисника @BSYBJP

  1. пре 6 сати

    ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ನಮ್ಮ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಶ್ರೀ ಈರಣ್ಣ ಕಡಾಡಿ ಮತ್ತು ಶ್ರೀ ಅಶೋಕ್ ಗಸ್ತಿ ಅವರುಗಳು ಇಂದು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ, ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ಶುಭ ಹಾರೈಸಲಾಯಿತು. ಪಕ್ಷದ ರಾಜ್ಯಾಧ್ಯಕ್ಷರು, ಉಪಮುಖ್ಯಮಂತ್ರಿಗಳು, ಸಚಿವರುಗಳು ಉಪಸ್ಥಿತರಿದ್ದರು.

    Опозови
  2. пре 8 сати

    ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ಆಯಾಮ ನೀಡುವುದು ನಮ್ಮ ಸರ್ಕಾರದ ಗುರಿ. ಇಂದು ಕಲ್ಯಾಣ ಕರ್ನಾಟಕ‌ ಮಾನವ ಸಂಪನ್ಮೂಲ‌, ಕೃಷಿ ಮತ್ತು ಸಾಂಸ್ಕೃತಿಕ ಸಂಘ, ಕಲಬುರ್ಗಿ ವಿಭಾಗದ ನೂತನ ಕಚೇರಿ ಉದ್ಘಾಟನೆಯನ್ನು ವಿಡಿಯೋ ಸಂಪರ್ಕದ ಮೂಲಕ ಬೆಂಗಳೂರಿನಿಂದ ಉದ್ಘಾಟಿಸಲಾಯಿತು. ಕಲಬುರ್ಗಿಯಿಂದ ಸಿದ್ದೇಶ್ವರ ಶ್ರೀಗಳು, ಪ್ರಮುಖರು ಉಪಸ್ಥಿತರಿದ್ದರು.

    Опозови
  3. 8. јун

    ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ನಮ್ಮ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಶ್ರೀ ಈರಣ್ಣ ಕಡಾಡಿ ಮತ್ತು ಶ್ರೀ ಅಶೋಕ್ ಗಸ್ತಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

    Опозови
  4. 8. јун

    ಮುಖ್ಯಮಂತ್ರಿಗಳ 'ಕೋವಿಡ್19' ಪರಿಹಾರ ನಿಧಿಗೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ನಿರ್ದೇಶಕ ಡಾII ಸಿ.ಎನ್.ಮಂಜುನಾಥ್ ಅವರಿಂದ 31,33,800 ರೂ. ಗಳ ಚೆಕ್ ಅನ್ನು ಇಂದು ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು, ಗಣ್ಯರು ಉಪಸ್ಥಿತರಿದ್ದರು.

    Опозови
  5. 8. јун

    ತುಮಕೂರಿನ ಸಿದ್ಧಗಂಗಾಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಇಂದು ನನ್ನ ಅಧಿಕೃತ ನಿವಾಸಕ್ಕೆ ಆಗಮಿಸಿ, ಆಶೀರ್ವದಿಸಿದರು. ನಂತರ ಹಲವಾರು ವಿಷಯಗಳ ಬಗ್ಗೆ ಸೌಹಾರ್ದಯುತವಾಗಿ ಮಾತುಕತೆ ನಡೆಸಿದೆವು.

    Опозови
  6. 7. јун

    ಕನ್ನಡದ ಖ್ಯಾತ ಕಲಾವಿದ, ಶ್ರೀ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಕೇವಲ 39 ವರ್ಷದ ವಯಸ್ಸಿನಲ್ಲಿ ಅಕಾಲಿಕವಾಗಿ ವಿಧಿವಶರಾಗಿರುವುದು ದಿಗ್ಭ್ರಮೆ ಮೂಡಿಸಿದೆ. ದೇವರು ಅವರಿಗೆ ಸದ್ಗತಿಯನ್ನು, ಅವರ ಕುಟುಂಬ, ಅಪಾರ ಅಭಿಮಾನಿ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

    Опозови
  7. 7. јун

    ಮಾಜಿ ಮುಖ್ಯಮಂತ್ರಿಗಳು, ಮಾಜಿ ಉಪರಾಷ್ಟ್ರಪತಿಗಳು, ಹಂಗಾಮಿ ರಾಷ್ಟ್ರಪತಿಗಳಾಗಿಯೂ ಸೇವೆ ಸಲ್ಲಿಸಿದ್ದ ದಿವಂಗತ ಶ್ರೀ ಬಿ.ಡಿ.ಜತ್ತಿಯವರ ಪುಣ್ಯತಿಥಿಯಂದು ಅವರನ್ನು ಸ್ಮರಿಸೋಣ. ಇವರು ಸ್ಥಾಪಿಸಿದ ಬಸವ ಸಮಿತಿಯು ಅಣ್ಣಬಸವಣ್ಣವರ ಹಾಗು ಅವರ ಸಮಕಾಲೀನ ಶರಣರ ತತ್ವ ಸಂದೇಶಗಳನ್ನು ಪ್ರಪಂಚದಾದ್ಯಂತ ಸಾರುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

    Опозови
  8. 6. јун

    ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ರಾಜ್ಯದಲ್ಲಿ ಹೋಟೆಲ್ ಗಳು, ರೆಸ್ಟೋರೆಂಟ್ ಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದೆ, ಆದರೆ ನಿಗದಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು, ಇಂದು ಪ್ರವಾಸೋದ್ಯಮ, ಸಾರಿಗೆ ಇಲಾಖೆ, ಹೋಟೆಲ್ ಮಾಲೀಕರ ಸಂಘದ ನಿಯೋಗ, ವಿವಿಧ ಭಾಗೀದಾರರ ಜೊತೆ ಸಭೆ ನಡೆಸಿದ ಬಳಿಕ ಸೂಚನೆ ನೀಡಲಾಯಿತು.

    Опозови
  9. 6. јун

    ಇಂದು ವಾಣಿಜ್ಯ ತೆರಿಗೆ ಅಧಿಕಾರಿಗಳೊಂದಿಗೆ ರಾಜ್ಯದ ತೆರಿಗೆ ಸಂಗ್ರಹ ಸ್ಥಿತಿಗತಿಗಳ ಕುರಿತು ಪರಿಶೀಲನಾ ಸಭೆ ನಡೆಸಲಾಯಿತು.ಇ-ವೇ ಬಿಲ್ ದುರ್ಬಳಕೆ ಸೇರಿದಂತೆ ಅಕ್ರಮಗಳನ್ನು ಪತ್ತೆ ಹಚ್ಚಿ ದಂಡ ವಿಧಿಸುವುದರ ಜೊತೆಗೆ ಅಕ್ರಮ ಎಸಗಿದ ಸರಕು ಸಾಗಾಣಿಕೆ ಮಾಡುವ ಸಾರಿಗೆ ಕಂಪನಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

    Опозови
  10. 6. јун

    ಕರ್ನಾಟಕ ಕಂಡ ಅಪರೂಪದ ಸರಳ, ಸಜ್ಜನ ರಾಜಕಾರಣಿ, ಗ್ರಾಮೀಣ ಜನತೆ ಹಾಗೂ ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಮಾನವತಾವಾದಿ ನಾಯಕ, ಆದರ್ಶ ಸಂಸದೀಯಪಟು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್.ಆರ್.ಬೊಮ್ಮಾಯಿ ಅವರ ಜನ್ಮದಿನದಂದು ಅವರಿಗೆ ನನ್ನ ಅನಂತ ಪ್ರಣಾಮಗಳು.

    Опозови
  11. 6. јун

    ಶ್ರೀನಿವಾಸ ಕಾವ್ಯನಾಮದಿಂದ ಅತ್ಯುತ್ತಮ ಸಾಹಿತ್ಯ ರಚಿಸಿದ ಕನ್ನಡದ ಅಪ್ರತಿಮ ಲೇಖಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರನ್ನು ಕನ್ನಡ ನಾಡು ಕಂಡ ಶ್ರೇಷ್ಠ ಸಾಧಕರು. "ಮಾಸ್ತಿ ಕನ್ನಡದ ಆಸ್ತಿ" ಎನ್ನುವ ಹೆಗ್ಗಳಿಕೆಗೆ ಪಾತ್ರರಾದ ಮಾಸ್ತಿಯವರ ಜನ್ಮದಿನವಾದ ಇಂದು ಅವರನ್ನು ಸ್ಮರಿಸೋಣ.

    Опозови
  12. 6. јун

    ಶೋಷಿತ ವರ್ಗಗಳ ದನಿಯಾಗಿದ್ದ, ಭೂಸುಧಾರಣೆ ಸೇರಿದಂತೆ ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೆ ತಂದ, ಹಿಂದುಳಿದ ವರ್ಗಗಳ ಹರಿಕಾರ, ಕೀರ್ತಿಶೇಷ ಡಿ. ದೇವರಾಜ ಅರಸ್ ಪುಣ್ಯತಿಥಿಯಂದು ನಾಡು ಕಂಡ ಶ್ರೇಷ್ಠ ಮುತ್ಸದ್ಧಿಗೆ ಅನಂತ ಪ್ರಣಾಮಗಳು. ಅರಸು ಅವರ ಬದುಕು ಮತ್ತು ಸಾಧನೆಗಳನ್ನು ನಾಡು ಸದಾ ಸ್ಮರಿಸುತ್ತದೆ.

    Опозови
  13. 5. јун

    ಕಣ್ಣಿಗೆ ಕಾಣದ ಕರೋನಾ ಎಂಬ ವೈರಿ ಮನುಕುಲಕ್ಕೆ ಸವಾಲೊಡ್ದಿದೆ. ಇದಕ್ಕಾಗಿ ಹೆದರುವ ಅಗತ್ಯವಿಲ್ಲ. ನಮ್ಮ ಜೀವನ ಶೈಲಿ ಬದಲಾಯಿಸಿಕೊಂಡು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಈ ಕೊರೋನಾದಿಂದ ಪಾರಾಗಬಹುದು. ಈ ಜಾಗೃತಿ ಮೂಡಿಸುವ,ನಮ್ಮ ವೈದ್ಯಕೀಯ ಶಿಕ್ಷಣ ಇಲಾಖೆಯ ದೃಶ್ಯರೂಪಕವನ್ನು ಇಂದು ಬಿಡುಗಡೆ ಮಾಡಲಾಯಿತು.

    Опозови
  14. 5. јун

    ಪಶುಪಾಲಕರು ಹಾಗೂ ಮೀನುಗಾರರಿಗೆ ಭಾರತ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಲು ಕ್ರಮ ವಹಿಸಬೇಕು, ಮಂಗನ ಕಾಯಿಲೆ ಲಸಿಕೆ ಉತ್ಪಾದನೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಇಂದು ನಡೆಸಿದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

    Опозови
  15. је ретвитовао/ла
    5. јун

    Karnataka Chief Minister Sri BS Yediyurappa's message on the occasion of , endorses Environmental Initiatives of ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಸಂದೇಶ; ಸಮರ್ಥ ಭಾರತದ ಪರಿಸರ ಅಭಿಯಾನಕ್ಕೆ ಶುಭಹಾರೈಸಿದ್ದಾರೆ.

    Опозови
  16. 5. јун

    ಗೃಹಕಚೇರಿ ಕೃಷ್ಣಾದಲ್ಲಿ ಇಂದು ನಗರಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಅಮೃತ್ ಯೋಜನೆಯಡಿ ಬಾಕಿ ಅನುದಾನ ಪಡೆಯಲು ರಾಜ್ಯದ ಪಾಲಿನ 209 ಕೋಟಿ ರೂ ಬಿಡುಗಡೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೈರ್ಮಲ್ಯ ಕಾಪಾಡಬೇಕು, ತೆರವಾಗಿರುವ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಸುವುದೂ ಸೇರಿದಂತೆ ಹಲವು ಸೂಚನೆಗಳನ್ನು ನೀಡಿದ್ದೇನೆ.

    Опозови
  17. 5. јун

    ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ವತಿಯಿಂದ ಇಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಜೀವ ವೈವಿಧ್ಯ ಇದ್ದಾಗ ಮಾತ್ರ ಪರಿಸರ ಸಮತೋಲನ ಸಾಧ್ಯ. ಕೋವಿಡ್19 ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಾಗಿದ್ದರಿಂದ ಪರಿಸರ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿತ್ತು. ಈ ಎಚ್ಚರ ನಮಗೆ ಸದಾ ಇರಬೇಕು.

    Опозови
  18. 5. јун

    Warm Birthday greetings to Chief Minister of Uttar Pradesh Shri Yogi Adityanath ji. May Kashi Vishwanath bless you with good health and long life in the service of people.

    Опозови
  19. 5. јун

    ಎಲ್ಲರಿಗೂ 'ವಿಶ್ವ ಪರಿಸರ ದಿನ'ದ ಹಾರ್ದಿಕ ಶುಭಾಶಯಗಳು. ಪರಿಸರವನ್ನು ನಾವು ರಕ್ಷಿಸಿದಾಗ ಮಾತ್ರ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪರಿಸರದೊಂದಿಗೆ ಸಮತೋಲನ, ಸಾಮರಸ್ಯ ಕಾಯ್ದುಕೊಳ್ಳುವುದು ಅತಿಮುಖ್ಯ. ಇದು ನಮ್ಮ ಕರ್ತವ್ಯ ಮಾತ್ರವಲ್ಲ, ನಮ್ಮ ಮುಂದಿನ ಪೀಳಿಗೆಯವರಿಗೆ ನಾವು ನೀಡಲೇಬೇಕಾದ ಬಳುವಳಿ. ಪರಿಸರವನ್ನು ಉಳಿಸೋಣ, ಹಸಿರನ್ನು ಬೆಳೆಸೋಣ.

    Опозови
  20. 4. јун

    ರಾಜ್ಯ ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವರು, ಜನಪ್ರಿಯ ಶಾಸಕರು, ಆತ್ಮೀಯರೂ ಆಗಿರುವ ಶ್ರೀ ಶಿವರಾಮ್ ಹೆಬ್ಬಾರ್ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಕಾಮನೆಗಳು. ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ.

    Опозови

Учитавање ће потрајати.

Твитер је можда премашио капацитет или је тренутно наишао на проблем. Покушај поново или посети статус Твитера за више информација.

    Можда ће ти се свидети

    ·