ಆಸೆಗಳು

ಚಪ್ಪಲಿಗಳನ್ನು ಎಲ್ಲಿ ಇಡಬೇಕೋ ಅಲ್ಲೇ ಇಡಬೇಕು ಮೇಲಿಟ್ಟರೆ ಪೂಜೆ ಮಾಡೆನ್ನುತ್ತವೆ ಕೆಳಗಿಟ್ಟರೆ ಕೆಸರಲ್ಲೇ ಹೂತುಕೊಳ್ಳುತ್ತವೆ. *****

ಮೌನರಾಗ

ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ […]

ಬಣ್ಣ

ಪ್ರಿಯಾ ನಿನ್ನ ಮುಖದ ಬಣ್ಣವೇಕೆ ಬದಲಾಗಿದೆ ಪ್ರಿಯೆ ಏನು ಮಾಡಲಿ ನೀ ಕೇಳಿದ ಬಣ್ಣದ ಸೀರೆ ಕೈಗೆಟುಕದಾಗಿದೆ *****

ಸೊರಾದ ಕೋಳಿಗಳು

ಸೊರಾದ ಕೋಳಿಗಳು ಕೊಕ್ಕೊಕ್ಕೋ ಕೂಗುವುದಿಲ್ಲ ಬೆಳಗಾಯಿತೆಂದು ಹೇಳುವುದಿಲ್ಲ ಸೊರಾದ ಕೋಳಿಗಳು ತತ್ತಿಗಳನ್ನು ಇಡುವುದಿಲ್ಲ ಕಾಳುಗಳನ್ನು ಹೆಕ್ಕುವುದಿಲ್ಲ ಸೊರಾದ ಕೋಳಿಗಳು ಎಲ್ಲಿಗೂ ಹೋಗುವುದಿಲ್ಲ ಕತ್ತುಗಳನ್ನೂ ಎತ್ತುವುದಿಲ್ಲ ಸೊರಾದ ಕೋಳಿಗಳಿಗೆ […]

ವಿಧಿ ಬರಹ

ಸದ್ದು ಗದ್ದಲದ ಒಳಗೆಕದ್ದು ಕುಳಿತಂತೆನೆನೆನೆನೆದು ಹೊಸಬಾಳಕನಸ ಹೆಣೆದಳು ಆಕೆ ನೆಚ್ಚು ನೂಪುರದಲ್ಲಿಕೆಚ್ಚು ಕಾಮನೆಯಲ್ಲಿತೊಳೆದ ಮುತ್ತಿನ ಹಾಗೆ ಹೊಳೆದಳಾಕೆ ನಾಳೆ ನಾಳೆಯ ನೆನೆದುಕಲ್ಪನಾ ವಿಲಾಸ ಮೆರೆದುಹುಚ್ಚುಗುದುರೆಯ ಹತ್ತಿ ಹೊರಟಳಾಕೆ […]

ಕುದುರೆ ಮತ್ತು ಮುತ್ತುಗಳು

ಮುತ್ತಿನಂತಹ ಅಕ್ಕಂದಿರಿಬ್ಬರನ್ನು ಕುದುರೆಯೊಂದು ಕೆಡವಿ ಕಂಗೆಡಿಸಿದ ಸುದ್ದಿ ನಿಮಗೂ ತಲುಪಿರಬಹುದು ಅಕ್ಕಂದಿರೇ ಹುಚ್ಚುತನದಿಂದ ಕುದುರೆಯನ್ನು ಕೆಣಕಿ ಕಂಗೆಟ್ಟರೆಂದು ಹಬ್ಬಿಸಿದ ಸುದ್ದಿಯನ್ನು ನೀವು ನಂಬಿರಲೂಬಹುದು. ಬಯಲೊಳಗೆ ಬಯಲಾದರಂತೆ ಅಕ್ಕಂದಿರು […]

ಬದುಕು

ಬದುಕೆಂಬುದೊಂದು ತೆರೆದ ವಿಶ್ವವಿದ್ಯಾಲಯ ದೇವರೇ ಕುಲಾಧಿಪತಿ ಬೇಕಿದ್ದನ್ನು ಆರಿಸಿಕೊಂಡು ನೀನೇ ಓದಿಕೊಳ್ಳಬೇಕು ಸಾವಕಾಶ: ಪಾಸಾಗಬೇಕೆಂದು ಅವಸರಿಸಬೇಡ ಹುಷಾರು ಇಲ್ಲಿ ಪಾಸಾದವರಿಗವಲ್ಲ; ಫೇಲಾದವರಿಗೆ ಮಾತ್ರ ಪ್ರವೇಶಾವಕಾಶ *****

ಜನ ಮೆಚ್ಚುವ ಅಧ್ಯಾಪಕರು

ಶಾಲೆಗೆ ಹೋಗುವ ಚಿಕ್ಕ ಮಕ್ಕಳನ್ನು ಪರಿಚಯವಾದರೆ ನಾನು ಅವರನ್ನು ‘ನಿಮ್ಮ ಮೆಚ್ಚಿನ ಅಧ್ಯಾಪಕರು ಯಾರು?’ ಎಂದು ಕೇಳುವುದಿದೆ. ಅವರು ಕೆಲವು ಸಲ ಹೇಳುತ್ತಾರೆ. ‘ಯಾಕೆ?’ ಎಂದು ಕೇಳುತ್ತೇನೆ. […]