CM of KarnatakaAkaun disahkan

@CMofKarnataka

Official Page of the Chief Minister's Office, Karnataka

Bengaluru, Karnataka
Menyertai Ogos 2014

Tweet

Anda telah menyekat @CMofKarnataka

Adakah anda pasti anda mahu melihat Tweet ini? Melihat Tweet tidak akan menyekat @CMofKarnataka

  1. 7 jam lalu

    ಮುಖ್ಯಮಂತ್ರಿ ಶ್ರೀ ರವರು ಕೋವಿಡ್-19 ನಿಂದ ಪೂರ್ಣಗುಣಮುಖರಾಗಿ ಇಂದು ಮಣಿಪಾಲ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತಮಗೆ ಚಿಕಿತ್ಸೆ ನೀಡಿದ ವೈದ್ಯರು, ಶುಶ್ರೂಷಕರು, ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳು ಧನ್ಯವಾದ ಸಲ್ಲಿಸಿದ್ದಾರೆ. ತಮ್ಮ ಚೇತರಿಕೆಗಾಗಿ ಹಾರೈಸಿದ ಸಮಸ್ತ ನಾಗರಿಕರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.

    Buat asal
  2. 8 jam lalu

    ಪ್ರಧಾನಮಂತ್ರಿ ಶ್ರೀ ರವರು ದೇಶದಲ್ಲಿ ಪ್ರವಾಹ ಪರಿಸ್ಥಿತಿಯ ಕುರಿತು ಇಂದು ನಡೆಸಿದ ವೀಡಿಯೋ ಸಂವಾದ ಸಭೆಯಲ್ಲಿ, ಮುಖ್ಯಮಂತ್ರಿ ಶ್ರೀ ರವರ ಅನುಪಸ್ಥಿತಿಯಲ್ಲಿ, ರಾಜ್ಯದ ಪರವಾಗಿ ಗೃಹ ಸಚಿವ ಮತ್ತು ಕಂದಾಯ ಸಚಿವ ಭಾಗವಹಿಸಿದ್ದರು. ಸಭೆಯ ಪ್ರಮುಖಾಂಶಗಳು;

    Buat asal
  3. 11 jam lalu

    ರಾಜ್ಯದ ಪ್ರವಾಹ ಸ್ಥಿತಿಯ ಬಗ್ಗೆ ಉಭಯ ಸಚಿವರುಗಳು ಮಾನ್ಯ ಪ್ರಧಾನಮಂತ್ರಿಗಳಿಗೆ ಮಾಹಿತಿ ಒದಗಿಸಿದರು. ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು. (2/2)

    Tunjukkan thread ini
    Buat asal
  4. 11 jam lalu

    ಪ್ರಧಾನಮಂತ್ರಿ ಶ್ರೀ ರವರು ಇಂದು ದೇಶದಲ್ಲಿ ಪ್ರವಾಹ ಪರಿಸ್ಥಿತಿಯ ಕುರಿತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿ, ರಾಜ್ಯದ ಪರವಾಗಿ ಮುಖ್ಯಮಂತ್ರಿ ಶ್ರೀ ರವರ ಅನುಪಸ್ಥಿತಿಯಲ್ಲಿ, ಗೃಹ ಸಚಿವ , ಕಂದಾಯ ಸಚಿವ ಭಾಗವಹಿಸಿದರು. (1/2)

    Tunjukkan thread ini
    Buat asal
  5. 14 jam lalu

    ಭಾರತದ ಮಾಜಿ ರಾಷ್ಟ್ರಪತಿಗಳು, ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ಅಪಾರ ಸೇವೆ ಸಲ್ಲಿಸಿರುವ ಭಾರತರತ್ನ ಶ್ರೀ ವಿ.ವಿ.ಗಿರಿ ರವರ ಜನ್ಮದಿನದಂದು ಅವರನ್ನು ಸ್ಮರಿಸೋಣ. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಅವರ ಸೇವೆ ಮತ್ತು ಸಾಧನೆಗಳನ್ನು ದೇಶ ಮರೆಯುವುದಿಲ್ಲ.

    Buat asal
  6. 9 Ogo

    ರಾಜ್ಯದ ರೈತರ ಪರವಾಗಿ ಪ್ರಧಾನಿ ಶ್ರೀ ಯವರಿಗೆ ಪಿ.ಎಂ.ಕಿಸಾನ್ ಯೋಜನೆಗಾಗಿ ನನ್ನ ಧನ್ಯವಾದ ಸಲ್ಲಿಸುತ್ತೇನೆ. ರಾಜ್ಯದ 52.50 ಲಕ್ಷ ರೈತರ ಖಾತೆಗಳಿಗೆ 1049 ಕೋಟಿ ರೂ.ಗಳನ್ನು ಮೊದಲ ಕಂತಿನಲ್ಲಿ ಇಂದು ಜಮಾ ಮಾಡಲಾಗುತ್ತಿದೆ. ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಯೋಜನೆ ಪರಿಣಾಮಕಾರಿಯಾಗಿದೆ.

    Buat asal
  7. 9 Ogo

    On behalf of the farmers of Karnataka, I thank Hon'ble Prime Minister Shri Narendra Modi ji for Scheme which has benefited our 52.50 lakh farmers. In the first installment, Rs.1049 crore will be credited to farmers accounts.

    Buat asal
  8. 9 Ogo

    ಕನ್ನಡ ಸಾಹಿತ್ಯಲೋಕದ ದಿಗ್ಗಜರಲ್ಲಿ ಒಬ್ಬರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಡಾ ವಿ.ಕೃ.ಗೋಕಾಕ್‌ ಅವರ ಜನ್ಮದಿನದಂದು ಅವರನ್ನು ಸ್ಮರಿಸೋಣ. ಕವಿ, ನಾಟಕಕಾರ, ಕಾದಂಬರಿಕಾರ, ವಿಮರ್ಶಕ, ಕಥೆಗಾರ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ವಿ.ಕೃ.ಗೋಕಾಕ್ ನಾಡಿನ ಹೆಮ್ಮೆಯಾಗಿದ್ದಾರೆ.

    Buat asal
  9. 9 Ogo

    ಬ್ರಿಟೀಶರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ನಿರ್ಣಾಯಕ ಹೋರಾಟವಾದ "ಭಾರತ ಬಿಟ್ಟು ತೊಲಗಿ" ಚಳುವಳಿ ಪ್ರಾರಂಭವಾಗಿ 78 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಸೇರಿದಂತೆ ಎಲ್ಲ ಸ್ವಾತಂತ್ರ್ಯ ವೀರರನ್ನು ಗೌರವಾದರಗಳಿಂದ ಸ್ಮರಿಸೋಣ, ಅವರ ದೇಶಭಕ್ತಿ, ತ್ಯಾಗ, ಬಲಿದಾನಗಳಿಂದ ಪ್ರೇರಣೆ ಪಡೆಯೋಣ.

    Buat asal
  10. 8 Ogo

    CM announced Rs 25 lakh ex-gratia from Chief Minister's Relief Fund, a government job for a family member & instructed the last rites of Shri Gangadharaiah to be performed with full state honours. (2/2)

    Tunjukkan thread ini
    Buat asal
  11. 8 Ogo

    Chief Minister Shri expressed his heartfelt condolences over the death of Shri H.Gangadharaiah, KAS, who was on Covid-19 duty as Nodal Officer at the Bangalore International Exhibition Center (BIEC). (1/2)

    Tunjukkan thread ini
    Buat asal
  12. 8 Ogo

    ದಕ್ಷ ಅಧಿಕಾರಿಯಾಗಿದ್ದ ಗಂಗಾಧರಯ್ಯ ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. (3/3)

    Tunjukkan thread ini
    Buat asal
  13. 8 Ogo

    ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರೂ.ಗಳ ಪರಿಹಾರ, ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ಸೇರಿದಂತೆ ಪೋಲೀಸ್ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. (2/3)

    Tunjukkan thread ini
    Buat asal
  14. 8 Ogo

    ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನೋಡೆಲ್ ಅಧಿಕಾರಿಯಾಗಿ ಕೋವಿಡ್-19 ಕರ್ತವ್ಯದಲ್ಲಿದ್ದ ಶ್ರೀ ಹೆಚ್.ಗಂಗಾಧರಯ್ಯ ಅವರು ಹೃದಯಾಘಾತದಿಂದ ಮರಣ ಹೊಂದಿದ್ದು, ಮುಖ್ಯಮಂತ್ರಿ ಶ್ರೀ ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. (1/3)

    Tunjukkan thread ini
    Buat asal
  15. 8 Ogo

    ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳವಳಿಯಲ್ಲಿಯೂ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್.ನಿಜಲಿಂಗಪ್ಪನವರ ಪುಣ್ಯತಿಥಿಯಂದು ಅವರಿಗೆ ಶತಶತ ಪ್ರಣಾಮಗಳು. ಕೃಷಿ, ನೀರಾವರಿ, ಕೈಗಾರಿಕೆ, ಸಾರಿಗೆ ಕ್ಷೇತ್ರಗಳೂ ಸೇರಿದಂತೆ ಆಧುನಿಕ ಕರ್ನಾಟಕ ನಿರ್ಮಾಣದಲ್ಲಿ ನಿಜಲಿಂಗಪ್ಪನವರ ಸಾಧನೆಗಳನ್ನು ದೇಶ ಎಂದೂ ಮರೆಯುವುದಿಲ್ಲ.

    Buat asal
  16. 7 Ogo

    ಮಣಿಪಾಲ್ ಆಸ್ಪತ್ರೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಶ್ರೀ ರವರ ಇಂದಿನ ಮೆಡಿಕಲ್ ಬುಲೆಟಿನ್: ಮುಖ್ಯಮಂತ್ರಿಗಳ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ತಮ್ಮ ಕೊಠಡಿಯಿಂದಲೇ ದೈನಂದಿನ ಕಾರ್ಯಚಟುವಟಿಕೆಗಳನ್ನು ಸಹಜವಾಗಿ ನಿರ್ವಹಿಸುತ್ತಿದ್ದಾರೆ. ತಜ್ಞ ವೈದ್ಯರ ತಂಡ ನಿರಂತರ ನಿಗಾ ವಹಿಸಿದೆ.

    Buat asal
  17. 7 Ogo

    ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಅವರಿಗೆ ಕರೆ ಮಾಡಿದ ಮುಖ್ಯಮಂತ್ರಿಗಳು ಅತಿವೃಷ್ಠಿ ಆಗುತ್ತಿರುವ ಕೊಡಗಿನ‌ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಹಾಗೆಯೇ, ಅಲ್ಲಿ ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವ ಅರ್ಚಕರ ಕುಟುಂಬದ ಬಗ್ಗೆಯೂ ಮಾಹಿತಿ‌ ಪಡೆದುಕೊಂಡರು. (2/2)

    Tunjukkan thread ini
    Buat asal
  18. 7 Ogo

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾನ್ಯ ಮುಖ್ಯಮಂತ್ರಿ ಶ್ರೀ ರವರು ಇಂದು ಮುಖ್ಯಕಾರ್ಯದರ್ಶಿಗಳಿಗೆ ಕರೆ ಮಾಡಿ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಅಗತ್ಯ ತುರ್ತುಕ್ರಮಗಳಿಗೆ ತಮ್ಮ ಒಪ್ಪಿಗೆಗೆ ಕಾಯದೆ ಮುಂದುವರಿಯಲು ಸೂಚನೆ ನೀಡಿದರು. (1/2)

    Tunjukkan thread ini
    Buat asal
  19. 7 Ogo

    ಶ್ರೇಷ್ಠ ಕವಿ, ದಾರ್ಶನಿಕ ಗುರುದೇವ ಶ್ರೀ ರವೀಂದ್ರನಾಥ ಟ್ಯಾಗೋರ್ ಅವರ ಪುಣ್ಯತಿಥಿಯಂದು ಅವರಿಗೆ ನಮ್ಮ ನಮನಗಳನ್ನು ಸಲ್ಲಿಸೋಣ. ಸಾಹಿತ್ಯದ ಜೊತೆಗೆ ಸಾಮಾಜಿಕ ಶಾಂತಿ, ಸಾಮರಸ್ಯ ಮತ್ತು ಭ್ರಾತೃತ್ವ ನಿರ್ಮಾಣಕ್ಕೆ ಅವರ ಕೊಡುಗೆ ಅನನ್ಯ.

    Buat asal
  20. 6 Ogo

    Medical Bulletin from Manipal Hospital today: Chief Minister Shri B.S.Yediyurappa is cheerful, responding well to the treatment and continues to attend to his work from his room.

    Tunjukkan thread ini
    Buat asal

Pemuatan nampaknya mengambil sedikit masa.

Twitter mungkin melebihi kapasiti atau mengalami gangguan seketika. Cuba sekali lagi atau lawati Status Twitter untuk mendapatkan maklumat lanjut.

    Anda juga mungkin menyukai

    ·