ಉಬುಂಟು ನ್ಯಾಟಿ ನಾರ್ವಾಲ್ ೧೧.೦೪

ಜನಪ್ರಿಯ ಗ್ನು/ಲಿನಕ್ಸ್ ಡೆಸ್ಕ್ಟಾಪ್ ವಿತರಣೆ ಉಬುಂಟು ೧೧.೦೪ ಆವೃತ್ತಿಯ ಬಿಡುಗಡೆ ಕಂಡಿದೆ. ಇದನ್ನು ಉಬುಂಟು ಅಂತರ್ಜಾಲ ತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.

ಉಬುಂಟುವಿನ ಈ ಹೊಸ ಆವೃತ್ತಿಯ ಹೆಸರು ನ್ಯಾಟಿ ನಾರ್ವಾಲ್ (Natty Narwhal). ನ್ಯಾಟಿ ನಾರ್ವಾಲ್ ಉಬುಂಟುವಿನ ಬಳಕೆದಾರನಿಗೆ ಹೊಸ ಡೆಸ್ಕ್ಟಾಪ್ ಪರಿಸರದ ಅನುಭವವನ್ನು ಯುನಿಟಿ (Unity) ಯೂಸರ್ ಇಂಟರ್ಫೇಸ್ ಮೂಲಕ ಕೊಡಲು ಇಚ್ಚಿಸಿದೆ. ಇದುವರೆಗೆ ನೀವು ಉಬುಂಟುವಿನಲ್ಲಿ ಕಾಣುತ್ತಿದ್ದ GNOME shell ಅನ್ನು ಯುನಿಟಿ ಸ್ಥಳಾಂತರಿಸಿದೆ.  ಆದಾಗ್ಯೂ GNOME ಗೆ ಒಗ್ಗಿ ಕೊಂಡಿರುವವರು Ubuntu Classic ಆಯ್ಕೆಯನ್ನು ಲಾಗಿನ್ ಸಮಯದಲ್ಲಿ ಆಯ್ದುಕೊಂಡು ತಮ್ಮ ನೆಚ್ಚಿನ ಗ್ನೋಮ್ ಡೆಸ್ಕ್ಟಾಪ್ ಪರಿಸರವನ್ನು ತೆರೆಯ ಮೇಲೆ ಕಾಣಬಹುದು.

ಮತ್ತೊಂದು ಸೂಚನೆ: ಉಬುಂಟು ೧೧.೦೪ ನಲ್ಲಿ ಯುನಿಟಿ ಬಳಸಲು ನಿಮ್ಮಲ್ಲಿ ಗ್ರಾಫಿಕ್ಸ್ ಕಾರ್ಡ್ ಇರುವುದು ಮುಖ್ಯವಾಗುತ್ತದೆ. ಕೆಲವೊಂದು ಗ್ರಾಫಿಕ್ ಕಾರ್ಡ್ಗಳು ಯುನಿಟಿಯೊಂದಿಗೆ ಕೆಲಸ ಮಾಡದೆಯೂ ಇರಬಹುದು. ಇಂತಹ ಸಮಯದಲ್ಲಿ ಉಬುಂಟು ಕ್ಲಾಸಿಕ್ ಡೆಸ್ಕಾಟ್ ತಂತಾನೆ ಲೋಡ್ ಆಗುತ್ತದೆ. ಇಲ್ಲವಾದಲ್ಲಿ ಲಾಗಿನ ಆಗುವ ಸಮಯದಲ್ಲಿ “Ubuntu Classic” ಡೆಸ್ಕ್ಟಾಪ್‌ಗೆ ನಿಮ್ಮ ಆಯ್ಕೆಯನ್ನು ಬದಲಿಸಿಕೊಂಡು ಕೆಲಸ ಮುಂದುವರೆಸಿ.

ಹೊಸ ಉಬುಂಟು ಆವೃತ್ತಿಯಲ್ಲಿ ಕಾಣಬಹುದಾದ  ಇತರೆ ಹೊಸ ತಂತ್ರಾಂಶಗಳ ಪಟ್ಟಿ ಇಂತಿದೆ.

Banshee music player, Mozilla Firefox 4, LibreOffice, Linux kernel v2.6.38.2, gcc 4.5, Python 2.7, dpkg 1.16.0, Upstart 0.9, X.org 1.10.1, Mesa 7.10.2, Shotwell 0.9.2, and Evolution 2.32.2.

ಉಬುಂಟು ಹೊಸ ಆವೃತ್ತಿಯ ಬಗ್ಗೆ ನಿಮಗೆ ಪ್ರಶ್ನೆಗಳಿದ್ದರೆ  ನಮ್ಮನ್ನು ಸಂಪರ್ಕಿಸಿ.

3 Responses to “ಉಬುಂಟು ನ್ಯಾಟಿ ನಾರ್ವಾಲ್ ೧೧.೦೪”

  1. knsridhar says:

    sir
    although ubuntu is very good for all type linux lovers but booting is very slow , why not to ask your readers to try puppy linux which boots with in 40 seconds and is as good as ms windows enough for normal users

    • admin says:

      ನಮಸ್ತೆ, ಪಪ್ಪಿ ಲಿನಕ್ಸ್ ಬಗ್ಗೆ ಈ ಹಿಂದೆ ಬರೆದಿದ್ದೆ. ಲಿನಕ್ಸಾಯಣಕ್ಕೆ ನೀವೇ ಒಂದು ಲೇಖನ ಬರೆಯಬಹುದೇ 🙂

    • admin says:

      ನಮಸ್ತೆ, ಪಪ್ಪಿ ಲಿನಕ್ಸ್ ಬಗ್ಗೆ ಈ ಹಿಂದೆ ಬರೆದಿದ್ದೆ. ಲಿನಕ್ಸಾಯಣಕ್ಕೆ ನೀವೇ ಒಂದು ಲೇಖನ ಬರೆಯಬಹುದೇ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This