ಕನ್ನಡ ಭಾಷಾ ತಂತ್ರಜ್ಞಾನ ಸಂ‍ಶೋಧನೆ ಹಾಗೂ ಅಧ್ಯಯನ ವೇದಿಕೆ‍‍‍

'ಸಂಚಯ' ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.‍

ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.

ಸಾಹಿತ್ಯ

ಕನ್ನಡ, ದ್ರಾವಿಡ ಭಾಷಾ ಬಳಗದ ಎರಡನೆ ಅತಿ ಹಳೆಯ ಭಾಷೆಯಾಗಿದ್ದು, ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಕವಿರಾಜಮಾರ್ಗದಿಂದ ಪ್ರಾರಂಭವಾಗಿ ಇದುವರೆಗಿನ ಸಾಹಿತ್ಯ ಪ್ರಕಾರಗಳಲ್ಲಿರುವ ರಸದೌತಣವನ್ನು ಕನ್ನಡಿಗರಿಗೆ ಅಂತರ್ಜಾಲದ ಮೂಲಕ ಒದಗಿಸುವುದು ನಮ್ಮ ಉದ್ದೇಶ.

ಸಂಶೋಧನೆ

ಕನ್ನಡದ ಭಾಷಾ ಸಂಶೋಧನೆಗೆ ಅತಿ ಮುಖ್ಯವಾದ ವೇದಿಕೆಯ ಸೃಷ್ಟಿ ‘ಕನ್ನಡ ಸಂಚಯ’ದ ಮುಖ್ಯ ಗುರಿ. ಸಾಮಾನ್ಯನಿಂದ ಹಿಡಿದು, ವಿದ್ಯಾರ್ಥಿಗಳು, ಭಾಷಾ ಸಂಶೋಧಕರು, ವಿಜ್ಞಾನಿಗಳು ಇದರ ಉಪಯೋಗ ಪಡೆಯಲೆಂದು ಆಶಿಸುತ್ತೇವೆ. ಸಂಶೋಧನೆಯ ಅವಕಾಶವನ್ನು ಎಲ್ಲರಿಗೂ ಮುಕ್ತವಾಗಿ ಲಭ್ಯವಿದೆ.

ಅಧ್ಯಯನ

ಸಾಹಿತ್ಯ ಆಸಕ್ತರಿಗೆ ಯಾವುದೇ ಅಡೆತಡೆಗಳಿಲ್ಲದೆ, ಅಧ್ಯಯನಕ್ಕೆ ಕನ್ನಡ ಸಾಹಿತ್ಯ ಲೋಕದಿಂದ ಸಾಧ್ಯವಾದದ್ದನ್ನೇಲ್ಲಾ ಕನ್ನಡಿಗರಿಗಾಗಿ ತೆರೆದಿಡುವ ಸಾಧ್ಯತೆಯನ್ನು ಹುಡುಕುವ ಪ್ರಯತ್ನದಲ್ಲಿದ್ದೇವೆ. ನಿಮಗೆ ಇದು ತಲುಪುತ್ತಿದ್ದಲ್ಲಿ ನಮ್ಮ ಕಾರ್ಯ ಸಾರ್ಥಕ. ಇಲ್ಲವಾದಲ್ಲಿ ನಿಮ್ಮ ನೆನಪು ನಮಗೆ ಅಗತ್ಯ.

ಸಮುದಾಯ

ಸಮಾನ ಮನಸ್ಕರ, ಸಾಹಿತ್ಯಾಸಕ್ತರ, ವಿದ್ಯಾರ್ಥಿ, ತಾಂತ್ರಿಕ ಬಳಗ ಎಲ್ಲರ ಒಗ್ಗಟ್ಟಿನ ಕೆಲಸ ಮಾತ್ರ ನಾಳಿನ ಕನ್ನಡ ಭಾಷಾ ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸಬಲ್ಲದು. ನಮ್ಮ ಯೋಜನೆಗಳ ಸುತ್ತ ಇಂತಹ ಸಮುದಾಯಗಳು ರೂಪುಗೊಳ್ಳಲು ಬೇಕಾದ ವೇದಿಕೆಗಳನ್ನು ಸೃಷ್ಟಿಸುವ ಮೂಲಕ ಸಂವಹನೆಗೆ ದಾರಿ ಮಾಡಿಕೊಡಲಾಗುತ್ತಿದೆ.

ಪದ ಸಂಚಯ – ಕನ್ನಡ ಪದದ ಸುತ್ತ

‍‍‍ಕನ್ನಡ ನಿಘಂಟುಗಳನ್ನು ಕಂಪ್ಯೂಟರ್‌ನಲ್ಲಿ ನಮ್ಮ ಅವಶ್ಯತೆಗೆ ತಕ್ಕಂತೆ ಬಳಸಿಕೊಳ್ಳುವ ಅವಶ್ಯಕತೆ ಬಹಳಷ್ಟಿದೆ. ಆದರೆ, ಇದುವರೆಗೂ ಕನ್ನಡದಲ್ಲಿ ಲಭ್ಯವಿರುವ ನಿಘಂಟುಗಳು ಮುಕ್ತವಾಗಿ ಲಭ್ಯವಿಲ್ಲ. ಜೊತೆಗೆ ಪದ, ಪದದ ಅರ್ಥ, ವಿವರಣೆ, ನಾಮಪದ, ಕ್ರಿಯಾಪದ ಹಾಗೂ ಮತ್ತಷ್ಟು ಮಾಹಿತಿ ಹೊರತುಪಡಿಸಿ ಹೆಚ್ಚಿನದನ್ನೇನೂ ಪಡೆದುಕೊಳ್ಳಲು...

read more

ಬ್ರಿಟಿಷ್ ಲೈಬ್ರರಿ ಅಳಿವಿನಂಚಿನಲ್ಲಿನ ದಾಖಲೆಗಳ ಯೋಜನೆಯ ಕನ್ನಡ ಪುಸ್ತಕಗಳು/ದಾಖಲೆಗಳು

‍‍‍‍‍‍‍‍‍‍‍ಬ್ರಿಟಿಷ್ ಲೈಬ್ರರಿ ಅಳಿವಿನಂಚಿನಲ್ಲಿನ ದಾಖಲೆಗಳ ಯೋಜನೆ (https://eap.bl.uk/search/site/kannada)‍‍ ‍ಕನ್ನಡಕ್ಕೆ ಸಂಬಂಧಿಸಿದ ೧೯೬೧ ಪುಸ್ತಕಗಳು/ದಾಖಲೆಗಳು ಲಭ್ಯವಿವೆ. ‍ಕನ್ನಡ ಸಾಹಿತ್ಯ ಪರಿಷತ್ತು, ಕುವೆಂಪು ಭಾಷಾ ಭಾರತಿ, ಕನ್ಯಾವಿತಂತು, ‍ಉತ್ಪಲಕುಮಾರಿ, ಮುದ್ರಾಮಂಜೂಷ,  ಮಿತ್ರವಿಂದ ಗೋವಿಂದ, ರೇಖಾಗಣಿತ...

read more

Ancient Kannada lives online‍

By Swathi Nair  |  Express News Service  |   Published: 27th April 2017 05:15 AM  |  Online Link (L-R) Pavithra Hanchagaiah, Omshivaprakash HI, O L Naghabhushana Swamy, Vasudendra and Devaraj at a meetup in the city BENGALURU:The Vachana and Sharana movement of the...

read more

Techies to help make digitised Kannada books accessible‍

‍BAGESHREE S. February 1, 2015 18:55 IST - The Hindu They will also create 5,000 Kannada Wiki pages based on these books Hyderabad-based Osmania University Digital Library has 2,133 digitised Kannada books, but they are not easy to access because their titles are not...

read more

ಅಂತರ್ಜಾಲದಲ್ಲಿ ನೀವೂ ಕನ್ನಡಕ್ಕಾಗಿ ಕೈಯೆತ್ತಬಹುದು

‍ಜನವರಿ ೨೬, ೨೦೧೪ ರಂದು ವಿಜಯಕರ್ನಾಟಕದಲ್ಲಿ : ಮಾಹಿತಿ ಎಟ್ ತಂತ್ರಜ್ಞಾನ: ಅವಿನಾಶ್ ಬಿ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಕನ್ನಡದ ಬೆಳವಣಿಗೆಯ ಗತಿಯು ಅಂತರ್ಜಾಲದಲ್ಲಿ ಆರಂಭದಿಂದಲೂ ಕುಂಠಿತವಾಗಿತ್ತು. ಕನ್ನಡಿಗರಲ್ಲಿ ಈ ಬಗ್ಗೆ ಇತ್ತೀಚೆಗೆ ಅರಿವು ಮೂಡತೊಡಗಿದೆ ಮತ್ತು ಇಂಟರ್ನೆಟ್‌ನಲ್ಲಿ ಕನ್ನಡ ಕಟ್ಟುವ ಕೈಂಕರ್ಯವೂ...

read more

ವಚನ ಸಂಚಯವನ್ನು ಜನರಿಗೆ ಪರಿಚಯಿಸಿದ ಮೊದಲ ಪ್ರಕಟಣೆ – ಪ್ರಜಾವಾಣಿ‍

‍ಇ–ಮೇಲ್‌ ಮೂಲಕ ಪುಸ್ತಕ ರೂಪುಗೊಂಡ ಬಗೆ ಮನೋಜಕುಮಾರ್‌ ಗುದ್ದಿ/ಪ್ರಜಾವಾಣಿ ವಾರ್ತೆ Mon, 01/20/2014 - 01:00 (ಧಾರವಾಡ ಸಾಹಿತ್ಯ ಸಂಭ್ರಮ - ಗೋಷ್ಠಿ 13: ವಿದ್ಯುನ್ಮಾನ ಮಾಧ್ಯಮ ಮತ್ತು ಸಾಹಿತ್ಯ) ಧಾರವಾಡ: ಪುಸ್ತಕದ ತಿರುಳು ಚೀನಾದ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು, ಮುಖಪುಟಕ್ಕೆ ಬಳಸಿ­ಕೊಂಡ ಚಿತ್ರವನ್ನು ತೆಗೆದವರು...

read more

Now read ‘Vachanas’ online‍

‍ By Jayadevan PK, Economic Times, ET Bureau | 23 Dec, 2014, 07.09AM IST BENGALURU: A handful of Kannada literature stalwarts during a heated debate last year wanted to find out how 'caste' figured in public discourse in the 10-12th century Karnataka. One obvious...

read more

Conserving Linguistic Heritage the FOSS way‍

‍Presentation on our work around http://vachana.sanchaya.net to digitize and build linguistic research tool for Kannada. Presented by Omshivaprakash H.L at Swatantra 2014 - Fifth International Free Software Conference, Kerala on 19th December 2014. Event Page:...

read more