ಜಿ. ಪಿ. ರಾಜರತ್ನಂ – ನಾಯಿಮರಿ ನಾಯಿಮರಿ..

ನಾಯಿಮರಿ ನಾಯಿಮರಿ ತಿಂಡಿ ಬೇಕೆ

ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು

ನಾಯಿಮರಿ ನಿನಗೆ ತಿಂಡಿ ಏಕೆ ಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು

ನಾಯಿಮರಿ ಕಳ್ಳ ಬಂದರೇನು ಮಾಡುವೆ
ಕ್ವೊಂ ಕ್ವೊಂ ಬೌ ಎಂದು ಕೂಗಿ ಪಾಡುವೆ

ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು

            —ಜಿ. ಪಿ. ರಾಜರತ್ನಂ

ಕಲೆ ಹಾಕಿದವರು: ಪವಿತ್ರ

Read More

ಬಣ್ಣದ ತಗಡಿನ ತುತ್ತೂರಿ… ಜಿ.ಪಿ. ರಾಜರತ್ನಂ

ಜಿ. ಪಿ. ರಾಜರತ್ನಂ

ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿಗಮಪದನಿಸ ಊದಿದನು
ಸನಿದಪಮಗರಿಸ ಊದಿದನು

ತನಗೆ ತುತ್ತೂರಿ ಇದೆಯೆಂದು ಬೆರಾರಿಗು ಅದು ಇಲ್ಲೆಂದ
ತುತ್ತುರಿ ಊದಿದ ಕೊಳದ ಬಳಿ ಕಸ್ತುರಿ ನಡದನು ಬೀದೆಯಲಿ
ಜಂಬದ ಕೋಳಿಯ ರೀತಿಯಲಿ

ಜಾರಿತು ನೀರಿಗೆ ತುತ್ತೂರಿ ಗಂಟಲು ಕಟ್ಟಿತು ನೀರೂರಿ
ಸರಿಗಮ ಊದಲು ನೋಡಿದನು ಗಗಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು ಜಂಬದಕೋಳಿಗೆ ಗೋಳಾಯ್ತು

– ಜಿ.ಪಿ. ರಾಜರತ್ನಂ

Read More

ಜಿ. ಪಿ. ರಾಜರತ್ನಂ – ಕನಡ ನಾಡಿನ ಕಂದನಿಗೆ

ಕನ್ನಡ ನಾಡಿನ ಕಂದ!
ನಿನ ಕೊರಲಿಗಿದು ಚಂದ!

ನಮ್ಮ ನಾಡಿನಲಿ ನಿಂದ
ಕವಿಗಳ ಬೊಕ್ಕಸದಿಂದ
ನಿನಗೆಂದಾರಿಸಿ ತಂದ
ಕಾವ್ಯಮಾಲೆಯಿದು ಕಂದ!

ಕನ್ನಡ ನಾಡಿನ ಕಂದ!
ನಿನ್ನ ಕೊರಲಿಗಿದು ಚಂದ!

ಬರೆದವರು: ಜಿ. ಪಿ. ರಾಜರತ್ನಂ
ಪುಸ್ತಕ: ಕಂದನ ಕಾವ್ಯಮಾಲೆ
ಪ್ರಕಟಿತ ವರ್ಷ: ೧೯೩೩
ಪ್ರಕಟಿಸಿದವರು: ರಾಮಮೋಹನ ಕಂಪೆನಿ

Read More

ಅರಳಿದ ಹೂವುಗಳು ಮೂಡಿದ ರೇಖೆಗಳು

ಚಿಣ್ಣರಿಗೆ ಚಿತ್ರ ಸಹಿತ ಕನ್ನಡ ಪದಗುಚ್ಛಗಳನ್ನು ‘ತನುಶ್ರೀ ಎಸ್ ಎನ್’ ತಮ್ಮ ತಾಣದಲ್ಲಿ ಹೊರತಂದಿದ್ದಾರೆ.

tanushree

ಈ ಚಿತ್ರಗಳು ಮತ್ತು ಕೆಲವೊಂದು ಸಾಹಿತ್ಯ ಕ್ರಿಯೇಟೀವ್‌ಕಾಮನ್ಸ್‌ ಪರವಾನಗಿ ಅಡಿ ಲಭ್ಯವಿದ್ದು, ಇತರರೊಡನೆ ಹಂಚಿಕೊಳ್ಳಲೂ ಬಹುದು.

Read More

ಪಿಂಕ್ ಫ್ಲೆಮಿಂಗೋ

ಪುಟಾಣಿಗಳೇ ನಿಮಗೆ ಫ್ಲೆಮಿಂಗೋ ಪಕ್ಷಿಯ ಬಗ್ಗೆ ಗೊತ್ತಾ?

Flemingo Painting

ಮಾರುದ್ದ ಕತ್ತು, ಕಾಲು ಮತ್ತು ದೇಹ ಪೂರ್ತಿ ಬೇಬಿ ಪಿಂಕ್ ಬಣ್ಣದ ಫ್ಲೆಮಿಂಗೋ ಪಕ್ಷಿ ನೋಡೋಕೆ ಬಲು ಚೆಂದ. ಇವು ಕೆರೇಬಿಯನ್, ಅಮೇರಿಕಾ ಮತ್ತು ಯೂರೋಪ್ನಲ್ಲಿವೆ. ಎರಡೂವರೆಯಿಂದ ಐದು ಅಡಿ ಎತ್ತರವಿರುವ ಇವು ಗಂಟೆಗೆ 56 ಕಿಲೋಮೀಟರ್ ವೇಗದಲ್ಲಿ ಹಾರತ್ತೆ.

ಫ್ಲೆಮಿಂಗೋ ವರ್ಷಕ್ಕೊಂದೇ ಮೊಟ್ಟೆ ಇಡೋದು, ಅದ್ರ ಮೊಟ್ಟೆ ನಮ್ಮ ಕೋಳಿಮರಿ ಮೊಟ್ಟೆಗಿಂತ ಸ್ವಲ್ಪ ದೊಡ್ಡದಾಗಿರತ್ತೆ, ಒಂದು ತಿಂಗಳು ಮುಗಿಯೋದ್ರೊಳಗೆ ಮರಿ ಫ್ಲೆಮಿಂಗೋ ಹೊರ ಬರತ್ತೆ. ಹುಟ್ಟಿದಾಗ ಮರಿ ಫ್ಲೆಮಿಂಗೋ ಬಿಳಿ ಬಣ್ಣದಲ್ಲಿರತ್ತೆ, ಮೂರರಿಂದ ಐದು ವರ್ಷ ತುಂಬೋದ್ರೊಳಗೆ ಅದಕ್ಕೆ ಗುಲಾಬಿ ಬಣ್ಣ ಬರತ್ತೆ.

ಈ ಗುಲಾಬಿ ಬಣ್ಣ ಎಲ್ಲಿಂದ ಬರತ್ತೆ ಗೊತ್ತಾ? ಅವು ತಿನ್ನೋ ಆಹಾರದಿಂದ! ಇವು ತಿನ್ನೋದು ಸಸ್ಯ, ಲಾರ್ವ, ಹುಳು ಹುಪ್ಪಟಿಗಳನ್ನ. ಆಹಾರದಲ್ಲಿರೋ ಬೀಟಾ ಕ್ಯಾರೋಟೀನ್ ಅಂಶದ ಆಧಾರದ ಮೇಲೆ ಫ್ಲೆಮಿಂಗೋ ಪಕ್ಷಿಯ ಬಣ್ಣ ಕೆಂಪು, ಕೇಸರಿ, ಗುಲಾಬಿ ಅಥವಾ ಬಿಳಿ ಬಣ್ಣದಲ್ಲಿರತ್ತೆ.

ಈ ಕ್ಯಾರೋಟೀನ್ ಅಂಶ ಪಾಲಕ್ ಸೊಪ್ಪು, ಟೊಮ್ಯಾಟೋ, ಮಾವಿನಹಣ್ಣು, ಕುಂಬಳಕಾಯಿ, ಸಿಹಿಗೆಣಸು, ಕ್ಯಾರೆಟ್ ಮತ್ತು ಹಲವಾರು ಸಸ್ಯಳಲ್ಲಿವೆ. ಕ್ಯಾರೋಟೀನನ್ನು ಕ್ಯಾನ್ಡ್ ಜ್ಯೂಸ್ಗಳಲ್ಲಿ, ಕೇಕ್ ಪೇಸ್ಟರಿಗಳಲ್ಲಿ ಬಣ್ಣ ಬರಲು ಉಪಯೋಗಿಸ್ತಾರೆ ಗೊತ್ತಾ!

ಸ್ಪ್ಯಾನಿಷ್ನಲ್ಲಿ ಫ್ಹ್ಲೆಮೆಂಕೋ ಅನ್ನೋ ಡಾನ್ಸ್ ಈ ಫ್ಲೆಮಿಂಗೋ ಪಕ್ಷಿಯ ನೃತ್ಯ ಶೈಲಿಯಿಂದ ಬಂದಿದೆ ಅನ್ನೋ ಪ್ರತೀತಿ. ಇಲ್ನೋಡಿ ಫ್ಲೆಮಿಂಗೋ ಪಕ್ಷಿಯ ಟ್ಯಾಪ್ ಡಾನ್ಸ್!

Pinky the Flamingo dancing the "Flamingo Flamenco" | Busch Gardens® Tampa

ಸಂಘಜೀವಿಗಳಾದ ಇವು ಗುಂಪಿನಲ್ಲಿ ನರ್ತಿಸೋದನ್ನ ನೋಡೋಕೆ ಇನ್ನೂ ಚೆನ್ನಾಗಿರತ್ತೆ. ನೀವೂ ನೋಡಿ ಆನಂದಿಸಿ.

(Hilarious) Andean flamingo mating dance | NATURE | "Andes: The Dragon's Back"

ಚಿತ್ರ ಕೃಪೆ: ಸ್ವಂತದ್ದು

ವೀಡಿಯೋ ಕೃಪೆ: ಯೂಟ್ಯೂಬಿನದ್ದು

ಧನ್ಯವಾದಗಳು

ಸವಿತ ಎಸ್.ಆರ್.

Read More