ಕಂಬ-ನೃತ್ಯ(ಪೋಲ್ ಡ್ಯಾನ್ಸ್)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕಂಬ-ನರ್ತಕಿ ರಫೇಲಾ ಮಾಂಟನಾರೊರ ಪ್ರದರ್ಶನ
ಚೈನೀಸ್ ಕಂಬ.

ಕಂಬ-ನೃತ್ಯ(ಪೋಲ್ ಡ್ಯಾನ್ಸ್) ವು ಒಂದು ರೀತಿಯ ಪ್ರದರ್ಶನ ಕಲೆಯಾಗಿದ್ದು, ಇದರಲ್ಲಿ ನೃತ್ಯ ಮತ್ತು ಕಸರತ್ತುಗಳನ್ನು ಒಂದುಗೂಡಿಸಲಾಗುತ್ತದೆ. ಇದು ಲಂಬ ಕಂಬದೊಂದಿಗೆ ಕಾಮಪ್ರಚೋದಕವಾಗಿ ನೃತ್ಯ ಮಾಡುವುದನ್ನು ಒಳಗೊಳ್ಳುತ್ತದೆ ಹಾಗೂ ಇದನ್ನು ಹೆಚ್ಚಾಗಿ ನಗ್ನ ಕ್ಲಬ್‌ಗಳಲ್ಲಿ ಮತ್ತು ಶ್ರೀಮಂತರ ಕ್ಲಬ್‌ಗಳಲ್ಲಿ ನಿರ್ವಹಿಸಲಾಗುತ್ತದೆ. ಇದೇ ರೀತಿಯ ಕಂಬವನ್ನು (ಚೈನೀಸ್ ಕಂಬಗಳು) ಪಾನಗೃಹ/ಸರ್ಕಸ್‌ನಲ್ಲಿ ಮತ್ತು ರಂಗ ಪ್ರದರ್ಶನದಲ್ಲಿ ಕಾಮಪ್ರಚೋದಕವಲ್ಲದ ಪರಿಸರದಲ್ಲಿ ಬಳಸಲಾಗುತ್ತದೆ, ಈ ಸಂದರ್ಭದಲ್ಲಿ ಶೈಲಿ ಮತ್ತು ಚಲನೆಗಳು ತುಂಬಾ ಭಿನ್ನವಾಗಿರುತ್ತವೆ.

ಉನ್ನತ ಮಟ್ಟದ ಕಂಬ-ನೃತ್ಯಕ್ಕೆ ಗಮನಾರ್ಹ ಬಲ, ನಮ್ಯತೆ ಮತ್ತು ಸಹನೆ ಬೇಕಾಗುತ್ತದೆ. ನಗ್ನ ಕ್ಲಬ್‌ಗಳಲ್ಲಿ ಕಂಬ-ನೃತ್ಯವನ್ನು ಹೆಚ್ಚಾಗಿ ಕಡಿಮೆ ಕಸರತ್ತಿನಂತೆ ನಿರ್ವಹಿಸಲಾಗುತ್ತದೆ ಹಾಗೂ ಮಧ್ಯೆಮಧ್ಯೆ ನರ್ತಕರು ನಗ್ನ ಪ್ರದರ್ಶನ, ಗೊ-ಗೊ ಮತ್ತು/ಅಥವಾ ಲ್ಯಾಪ್ ನೃತ್ಯವನ್ನು ಮಾಡುತ್ತಾರೆ. ನರ್ತಕರು ಕಂಬವನ್ನು ಸುಮ್ಮನೆ ಹಿಡಿದುಕೊಳ್ಳಬಹುದು ಅಥವಾ ಅದರ ಮೇಲೆ ಏರುವುದು, ಸುತ್ತುವುದು ಮತ್ತು ದೇಹವನ್ನು ತಲೆ ಕೆಳಗೆ ಮಾಡುವುದು ಮೊದಲಾದ ಹೆಚ್ಚು ಅಂಗಸಾಧನೆಯ ಚಲನೆಗಳನ್ನು ನಿರ್ವಹಿಸಲು ಬಳಸಬಹುದು. ದೇಹದ ಮೇಲ್ಭಾಗ ಮತ್ತು ಶಕ್ತಿಯು ಕುಶಲತೆಗೆ ಮುಖ್ಯವಾಗಿರುತ್ತದೆ, ಕುಶಲತೆಯನ್ನು ಬೆಳೆಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.[೧]

ಕಂಬ-ನೃತ್ಯವನ್ನು ಈಗ ಅಂಗಸಾಧನೆಯ[೨] ಒಂದು ಅಂಗೀಕೃತ ರೂಪವೆಂದು ಪರಿಗಣಿಸಲಾಗುತ್ತದೆ ಹಾಗೂ ಇದನ್ನು ಏರೋಬಿಕ್ ಮತ್ತು ಆನ್ಏರೋಬಿಕ್ ಎರಡೂ ಅಭ್ಯಾಸವಾಗಿ ಬಳಸಬಹುದು.[೩] ಕಂಬ-ನೃತ್ಯದ ಜನಪ್ರಿಯತೆಯು ಹೆಚ್ಚುತ್ತಿರುವುದರಿಂದ, ಅದರ ಒಟ್ಟು ಲೈಂಗಿಕ ಆಕರ್ಷಣೆಯನ್ನು ಕಡಿಮೆ ಮಾಡುವುದರೊಂದಿಗೆ ಅಂಗೀಕೃತ ಶಾಲೆಗಳನ್ನು ಮತ್ತು ಅರ್ಹತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.[೪]

ಇತಿಹಾಸ[ಬದಲಾಯಿಸಿ]

ಏಷ್ಯನ್ ಕಂಬ-ನರ್ತಕಿ
ರಂಗ-ಕಂಬದ ಮನೆಯ ರೂಪಾಂತರ
ರಸ್ತೆ ಕಂಬವನ್ನು ಬಳಸುತ್ತಿರುವ ಕಂಬ-ನರ್ತಕಿ

ಬಹುಶಃ ಕಂಬ-ನೃತ್ಯವು 1920ರಲ್ಲಿ ಅಮೇರಿಕಾದಲ್ಲಿ ಆರಂಭಗೊಂಡಿರಬಹುದು, ಆ ಸಂದರ್ಭದಲ್ಲಿ ಪ್ರವಾಸಿ ಪ್ರದರ್ಶನ-ನರ್ತಕರು ತಮ್ಮ ನೃತ್ಯಗಳಲ್ಲಿ ಟೆಂಟ್‌ನ ಕಂಬವನ್ನು ಆಧಾರವಾಗಿ ಬಳಸುತ್ತಿದ್ದರು.[ಸೂಕ್ತ ಉಲ್ಲೇಖನ ಬೇಕು] ಚೈನೀಸ್ ಕಂಬಗಳೊಂದಿಗಿನ ಇದರ ಸಂಬಂಧವು ಅಸ್ಪಷ್ಟವಾಗಿದೆ. ಚೈನೀಸ್ ತಂಡಗಳು 1914ರಿಂದ ಬಾರ್ನಮ್ ಆಂಡ್ ಬೈಲಿಸ್ ಸರ್ಕಸ್‌ನಲ್ಲಿ ಪ್ರದರ್ಶನಗಳನ್ನು ನೀಡುತ್ತಿದ್ದವು, ಆದರೆ ಅವರು ಕಂಬಗಳಲ್ಲಿ ಪ್ರದರ್ಶನಗಳನ್ನು ನಿರ್ವಹಿಸುತ್ತಿರಲಿಲ್ಲ.[೫]

1950ರ ದಶಕದಲ್ಲಿ ಬರ್ಲೆಸ್ಕ್(ಉಡಿಗೆ-ತೊಡಿಗೆಗಳನ್ನು ಕಳಚಿ ಪ್ರೇಕ್ಷಕರನ್ನು ಕೆರಳಿಸಿ ಕುಚೇಷ್ಟೆ ಮಾಡುವ ವಿನೋದಾವಳಿ) ಹೆಚ್ಚು ಪ್ರಿಯವಾಗಲು ಪ್ರಾರಂಭವಾದುದರಿಂದ ಕಂಬ-ನೃತ್ಯವು ಕ್ರಮೇಣ ಟೆಂಟ್‌ಗಳಿಂದ ಬಾರ್‌ಗಳವರೆಗೆ ವಿಸ್ತರಿಸಲು ಆರಂಭವಾಯಿತು.[ಸೂಕ್ತ ಉಲ್ಲೇಖನ ಬೇಕು]

ಕಂಬ[ಬದಲಾಯಿಸಿ]

ಪ್ರಮಾಣಕ ಕಂಬ[ಬದಲಾಯಿಸಿ]

ಪ್ರಮಾಣಕ ನೃತ್ಯದ ಕಂಬ ವು ವಿಶಿಷ್ಟವಾಗಿ ಟೊಳ್ಳಾದ ಉಕ್ಕು ಅಥವಾ ಹಿತ್ತಾಳೆ ಕಂಬವನ್ನು ಒಳಗೊಳ್ಳುತ್ತದೆ, ಇದು ವೃತ್ತಾಕಾರದ ಅಡ್ಡ ಕೊಯ್ತವನ್ನು ಹೊಂದಿದ್ದು ನೆಲದಿಂದ ಚಾವಣಿಯವರೆಗೆ ಉದ್ದವಿರುತ್ತದೆ. ಇದನ್ನು ಚಾವಣಿಯಲ್ಲಿ ಭದ್ರಪಡಿಸಿದ್ದರೆ ಹೆಚ್ಚು ಸ್ಥಿರತೆ ಇರುತ್ತದೆ, ಆದರೆ ಇದನ್ನು ಯಾವಾಗಲೂ ಮಾಡುವುದಿಲ್ಲ, ವಿಶೇಷವಾಗಿ ಹೆಚ್ಚು ಎತ್ತರದ ಚಾವಣಿಯನ್ನು ಹೊಂದಿರುವ ರಾತ್ರಿ ಕ್ಲಬ್‌ಗಳಲ್ಲಿ ಅಥವಾ ಸಾಗಿಸಬಹುದಾದ ಸಾಧನಗಳಲ್ಲಿ. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಕಂಬದ ವ್ಯಾಸವು ಸಾಮಾನ್ಯವಾಗಿ 5 ಸೆಂಟಿಮೀಟರ್‌ನಷ್ಟಿರುತ್ತದೆ (2 ಇಂಚುಗಳು), ಇದು ಕಂಬವನ್ನು ಒಂದು ಕೈಯಿಂದ ಅನುಕೂಲಕರವಾಗಿ ಹಿಡಿಯಲು ಅನುವು ಮಾಡಿಕೊಡುತ್ತದೆ. ಏಷ್ಯಾದಲ್ಲಿ, ಕಂಬದ ವ್ಯಾಸವು ಸಾಮಾನ್ಯವಾಗಿ ಸ್ವಲ್ಪ ಸಣ್ಣದಾಗಿ 4.5 ಸೆಂ.ಮೀ. ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ.

ಮತ್ತೊಂದು ಸಾಮಾನ್ಯ ಕಂಬವೆಂದರೆ ಸುತ್ತುವ ಕಂಬ; ಇದರ ಹೆಸರೇ ಸೂಚಿಸುವಂತೆ, ಇದು ಒಂದು ಪ್ರಮಾಣಕ ನೃತ್ಯ-ಕಂಬವಾಗಿದ್ದು ಚೆಂಡು ಬೇರಿಂಗ್‌ಅನ್ನು ಬಳಸಿಕೊಂಡು ಸುತ್ತುತ್ತದೆ. ಈ ಕಂಬದ ಮುಖ್ಯ ಉದ್ದೇಶವೆಂದರೆ ಹೆಚ್ಚಿನ ಆಕರ್ಷಕ ಪರಿಣಾಮವನ್ನು ಬೀರಲು ಉತ್ತಮ ಆವೇಗ ಮತ್ತು ಹೆಚ್ಚಿನ ಚಲನೆಯ ಗತಿಯನ್ನು ಉಂಟುಮಾಡುವುದು.

ಇದರ ಮನೆಯ ರೂಪಾಂತರಗಳೂ ಲಭ್ಯಯಿವೆ, ಇವನ್ನು ಅಭ್ಯಾಸ ಮಾಡಲು ಅಥವಾ ಏರೋಬಿಕ್ ಅಂಗಸಾಧನೆಗೆ ಬಳಸಬಹುದು. ಕಂಬಗಳನ್ನು ತಯಾರಿಸುವ ವಸ್ತುಗಳೆಂದರೆ ತುಕ್ಕುಹಿಡಿಯದ, ಕ್ರೋಮಿಯಂ ಸೇರಿಸಿದ ಉಕ್ಕು, ಕ್ರೋಮ್ಡ್ ಉಕ್ಕು, ಹಿತ್ತಾಳೆ, ಹುಡಿ ಹೊದಿಕೆ ಮತ್ತು ಟೈಟಾನಿಯಮ್ ಹೊದಿಕೆ. ಕಂಬಗಳನ್ನು ಅಕ್ರಿಲಿಕ್ ಗಾಜಿನಿಂದಲೂ ತಯಾರಿಸಬಹುದು, ಇದು LED ಬೆಳಕಿನ ಪ್ರಭಾವಗಳೊಂದಿಗೆ 'ಪ್ರಜ್ವಲಿಸುವ ಕಂಬ'ಗಳ ಬಳಕೆಗೆ ಅನುವು ಮಾಡಿಕೊಡುತ್ತದೆ. ಪ್ರತಿಯೊಂದು ವಸ್ತುವಿನ ಮೇಲ್ಮೈಯು ಬೇರೆ ಬೇರೆ ಹಿಡಿಯುವ ಲಕ್ಷಣಗಳನ್ನು ಹೊಂದಿರುತ್ತದೆ. ನಯಗೊಳಿಸಿದ ಉಕ್ಕು ಹೆಚ್ಚು ಜಾರುವ ವಸ್ತುವಾಗಿದೆ, ಇದು ವೇಗವಾದ, ಹೆಚ್ಚು ಸರಾಗವಾದ ನೃತ್ಯಕ್ಕೆ ಅವಕಾಶ ಮಾಡಿಕೊಡುತ್ತದೆ; ಹಿತ್ತಾಳೆ ಕಂಬಗಳು ಹೆಚ್ಚು ಘರ್ಷಣೆಯನ್ನು ಉಂಟುಮಾಡುತ್ತವೆ, ಆ ಮೂಲಕ ಅವುಗಳನ್ನು ಕೈಗಳಿಂದ ಅಥವಾ ತೊಡೆಗಳಿಂದ ಸುಲುಭವಾಗಿ ಹಿಡಿದುಕೊಳ್ಳಲು ಅನುವು ಮಾಡಿಕೊಟ್ಟು, ನಿಧಾನವಾದ, ಸಂವೇದನಾಶೀಲ ನೃತ್ಯ ಶೈಲಿಯನ್ನು ಸೃಷ್ಟಿಸುತ್ತವೆ.

ಕಂಬಗಳನ್ನು ಹಗ್ಗದಿಂದ ಚಾವಣಿಯ ಜಂತೆಗೆ ಭದ್ರವಾಗಿ ಬಿಗಿದುಕೊಂಡು ಅವುಗಳನ್ನು ಸೂಕ್ತ ಸ್ಥಾನದಲ್ಲಿ ನಿರ್ವಹಿಸಬಹುದು. ನಿರ್ಮಾಣವು ಅಗತ್ಯವಾಗಿರದ ಮತ್ತು ಬಿಗಿತವನ್ನು ಬಳಸಿಕೊಂಡು ನಿಲ್ಲಿಸುವ ಕಂಬಗಳೂ ಇವೆ. ಸ್ಥಿರವಾಗಿರುವ, ತಿರುಗುವ ಮತ್ತು ಬದಲಾಗುವ ಕಂಬಗಳೂ ಲಭ್ಯಯಿವೆ.

ಪ್ರದರ್ಶನ ಕಂಬ[ಬದಲಾಯಿಸಿ]

ಈಗ ಕ್ಲಬ್‌ಗಳಲ್ಲಿ ದೃಗ್-ಪ್ರಭಾವವನ್ನು ಒದಗಿಸುವ ಕಂಬಗಳೂ ಲಭ್ಯಯಿವೆ. ಈ ಕಂಬಗಳನ್ನು ಪಾರದರ್ಶಕ ಪ್ಲ್ಯಾಸ್ಟಿಕ್‌ಗಳಿಂದ ತಯಾರಿಸಲಾಗುತ್ತದೆ ಹಾಗೂ ಅವು ನೀರು, ಗ್ಲಿಟರ್ ಮತ್ತು ಭ್ರಮಣದರ್ಶಕ ಬೆಳಕಿನೊಂದಿಗೆ ಮಾತ್ರವಲ್ಲದೆ ಚಾವಣಿಯ ಜಂತೆಗಳಲ್ಲಿ ಅಡಗಿರುವ ಬೆಳಕಿನೊಂದಿಗೆ ಸೇರಿದಾಗ ಎದ್ದುಕಾಣುವ ವಿಶೇಷ ಪ್ರತಿಬಿಂಬಿಸುವ ವಸ್ತುಗಳನ್ನು ಹೊಂದಿರುತ್ತವೆ. ಆದರೆ ಈ ಕಂಬಗಳು ಅವುಗಳಿಂದ ಉತ್ತಮ ಕುಶಲಚಲನೆಗಳನ್ನು ನಿರ್ವಹಿಸಲು ಬಯಸುವ ನರ್ತಕರಿಗೆ ಅನುಕೂಲಕರವಾಗಿರುವುದಿಲ್ಲ ಏಕೆಂದರೆ ಅವು ಸ್ವಲ್ಪ ಬಾಗುತ್ತವೆ ಮತ್ತು ವೇಗವಾಗಿ ಜಾರಿದರೆ ಘರ್ಷಣೆಯಿಂದ ಬಿಸಿಯಾಗುವ ಸಾಧ್ಯತೆಯಿರುತ್ತದೆ.

ಅಂಗಸಾಧನೆಯಾಗಿ ಕಂಬ-ನೃತ್ಯ[ಬದಲಾಯಿಸಿ]

ಒಯ್ಯಬಹುದಾದ ಕಂಬದಲ್ಲಿ ಮಂಡಿಯನ್ನು ಮಡಿಚಿರುವುದು.

ಕಂಬ-ನೃತ್ಯದಿಂದ ಸಾಮಾನ್ಯ ಶಕ್ತಿ ಮತ್ತು ಯುಕ್ತತೆಯನ್ನು ಪಡೆಯಬಹುದೆಂಬ ಅರಿವು ಹೆಚ್ಚುವುದರೊಂದಿಗೆ ಇದು ಅಂಗಸಾಧನೆಯ ಒಂದು ರೂಪವಾಗಿ ಜನಪ್ರಿಯತೆಯನ್ನು ಗಳಿಸಿದೆ.[೬] ಈ ರೀತಿಯ ಅಂಗಸಾಧನೆಯು ದೇಹಕ್ಕೆ ಸಮಗ್ರವಾಗಿ ಹುರುಪು ಕೊಡುವಾಗ ದೇಹವನ್ನೇ ಪ್ರತಿರೋಧವಾಗಿ ಬಳಸಿಕೊಂಡು ಅಂತರಂಗ ಮತ್ತು ಸಾಮಾನ್ಯ ದೈಹಿಕ ಬಲವನ್ನು ಹೆಚ್ಚಿಸುತ್ತದೆ. ಮಹಿಳೆಯರಿಗಾಗಿ ಮತ್ತು ಆತ್ಮವಿಶ್ವಾಸವನ್ನು ಬೆಳೆಸಲು ಕಂಬ-ನೃತ್ಯ ಶಾಲೆಗಳಿಗೆ ಅಧಿಕಾರ ಕೊಡಲಾಗುತ್ತಿದೆಯೆಂದು ವರದಿ ಮಾಡಲಾಗಿದೆ.[೭]

ಅಂಗಸಾಧನೆಯಾಗಿ ಕಂಬ-ನೃತ್ಯವು ಕಾಮಪ್ರಚೋದಕ ಅಂಶವನ್ನು ಹೊಂದಿರದ ಭಾರತೀಯ ಪುರುಷರ ಒಂದು ಕ್ರೀಡೆಯಾದ ಮಲ್ಲಖಂಬ್‌ಅನ್ನು ಹೆಚ್ಚು ಹೋಲುತ್ತದೆ, ಆದರೆ ಇದರ ಬಗ್ಗೆ ಯಾವುದೇ ಆಧಾರವಿಲ್ಲ.

ಹೆಚ್ಚಿನ ಸಂಖ್ಯೆಯ ಪುರುಷರು ಕಂಬ-ನೃತ್ಯವನ್ನು ಅವರ ದೇಹದಾರ್ಢ್ಯ ಅಭ್ಯಾಸಗಳಿಗೆ ಸೇರಿಸಿಕೊಳ್ಳುತ್ತಿದ್ದಾರೆ.[೮][೯] ಆಸ್ಟ್ರೇಲಿಯಾ, UK ಮತ್ತು US ನಲ್ಲಿ, ನೃತ್ಯ ಸ್ಟುಡಿಯೊಗಳು ಪುರುಷರಿಗೆ ಮಾತ್ರ ತರಬೇತಿ ಕ್ಲಾಸ್‌ಗಳನ್ನು ಒದಗಿಸಲು ಆರಂಭಿಸಿವೆ. ಚೀನಾದಲ್ಲಿ, 2007ರ ರಾಷ್ಟ್ರೀಯ ಕಂಬ-ನೃತ್ಯ ಸ್ಪರ್ಧೆಯನ್ನು ಪುರುಷನೊಬ್ಬನು ಗೆದ್ದುಕೊಂಡನು. 23 ವರ್ಷದ ನೃತ್ಯ ಶಿಕ್ಷಕ ಜಾಂಗ್ ಪೆಂಗ್ ಪ್ರಮುಖ ಬಹುಮಾನದ ಸ್ಪರ್ಧೆಯಲ್ಲಿ ಮಹಿಳಾ ನೃತ್ಯಗಾರ್ತಿಯರ ಗುಂಪನ್ನು ಸೋಲಿಸಿದರು.[೧೦]

ಕಂಬ-ನೃತ್ಯ ಸ್ಪರ್ಧೆಗಳು[ಬದಲಾಯಿಸಿ]

ಹೆಚ್ಚು ಸಾಮಾನ್ಯ ಕಂಬ-ನೃತ್ಯ ಸ್ಪರ್ಧೆಗಳು ಈಗಲೂ ನಗ್ನ ಕ್ಲಬ್‌ಗಳಲ್ಲಿ ವಿಲಾಸಿ ರಾತ್ರಿ-ಪ್ರದರ್ಶನಗಳಾಗಿ ನಡೆಯುತ್ತಿದ್ದರೂ, ಕಂಬ-ನೃತ್ಯವನ್ನು ಒಂದು ಕ್ರೀಡೆ ಮತ್ತು ಕಲೆಯಾಗಿ ಗಂಭೀರವಾಗಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ಸಮುದಾಯವೊಂದು ಬೆಳೆಯುತ್ತಿದೆ. ಆಸ್ಟ್ರೇಲಿಯಾ, ಫ್ರಾನ್ಸ್, ಕೆನಡಾ, ಜಪಾನ್, ನೆದರ್ಲೆಂಡ್ಸ್ ಮತ್ತು UK ಮೊದಲಾದ ಸ್ಥಳಗಳಲ್ಲಿ ನಡೆಸುವ ಸ್ಥಳೀಯ ವೈಭವದ ಪ್ರದರ್ಶನಗಳೂ ಇವೆ. ಇತ್ತೀಚೆಗೆ, ಹವ್ಯಾಸಿ ಕಂಬ-ನೃತ್ಯ ಸ್ಪರ್ಧೆಗಳನ್ನು ನಡೆಸಲಾಯಿತು. ಇವು ಕಟ್ಟುನಿಟ್ಟಾಗಿ ನಗ್ನಗೊಳ್ಳದ ಮತ್ತು ಬಟ್ಟೆಕಳಚದ ಸ್ಪರ್ಧೆಗಳಾಗಿರುತ್ತವೆ ಹಾಗೂ ಇವು ನೃತ್ಯ ಮತ್ತು ಅಂಗಸಾಧನೆಯ ಒಂದು ವ್ಯಾಯಾಮದ ಮತ್ತು ಕಲಾತ್ಮಕ ರೂಪವಾಗಿ ಕಂಬ-ನೃತ್ಯದ ಮೇಲೆ ಕೇಂದ್ರೀಕರಿಸುತ್ತವೆ. ಮೊದಲ "ಮಿಸ್ ಪೋಲ್ ಡ್ಯಾನ್ಸ್ ವರ್ಲ್ಡ್" ಸ್ಪರ್ಧೆಯನ್ನು [೧] 2005ರ ನವೆಂಬರ್‌ನಲ್ಲಿ ನಡೆಸಲಾಯಿತು ಹಾಗೂ ಜಪಾನಿನ ರೈಕೊ [೨] ಸ್ಯುಮುನೆ ಈ ಚಾಂಪಿಯನ್‌ಶಿಪ್ಅನ್ನು ಗೆದ್ದುಕೊಂಡರು.

ಕಂಬ-ನೃತ್ಯ ಸ್ಪರ್ಧೆಗಳು ನಗ್ನ ಕ್ಲಬ್‌ಗಳ ಹವ್ಯಾಸಿ ರಾತ್ರಿ-ಪ್ರದರ್ಶನಗಳಿಂದ ದೂರಕ್ಕೆ ಸರಿಯಲು ಪ್ರಯತ್ನಿಸಿವೆ. ಇವು ಕಟ್ಟುನಿಟ್ಟಾಗಿ ನಗ್ನವಲ್ಲದ ಮತ್ತು ಬಟ್ಟೆ ಕಳಚದ ಸ್ಪರ್ಧೆಗಳಾಗಿವೆ ಹಾಗೂ ಇವು ಲೈಂಗಿಕ ಆಕರ್ಷಣೆಯ ಬದಲಿಗೆ ನಿರ್ವಾಹಕನ ಅಂಗಸಾಧನೆ ಮತ್ತು ಕಲಾತ್ಮಕತೆಯನ್ನು ಹೆಚ್ಚು ಕೇಂದ್ರೀಕರಿಸುತ್ತವೆ.

ಸಮರ್ಥಕರ ಗುಂಪೊಂದು ಕಂಬ-ನೃತ್ಯವನ್ನು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಒಂದು ಪರೀಕ್ಷಾ ಘಟನೆಯಾಗಿ ತೋರಿಸಲು ಪ್ರಯತ್ನಿಸುತ್ತಿದ್ದಾರೆ.[೧೧][೧೨] ಆದರೆ ಇದು ಹೆಚ್ಚುಕಡಿಮೆ ಹೊಸ ಶೈಲಿಯಾಗಿರುವುದರಿಂದ, ಸ್ಪರ್ಧೆಗಳಿಗೆ ಅಂಕಗಳನ್ನು ನೀಡುವುದುನ್ನು ಪ್ರಮಾಣೀರಿಸಲಾಗಿಲ್ಲ. ಅಲ್ಲದೆ ಪ್ರಯೋಗ ವಿಧಾನಗಳ ಹೆಸರು ವಿವಿಧ ಪ್ರದೇಶಗಳ ವಿವಿಧ ಕ್ಲಬ್‌ಗಳಲ್ಲಿ ವ್ಯತ್ಯಾಸಗೊಳ್ಲುತ್ತದೆ.[೧೩]

ಆಸ್ಟ್ರೇಲಿಯಾದಲ್ಲಿ, "ಮಿಸ್ ಪೋಲ್ ಡ್ಯಾನ್ಸ್ ಆಸ್ಟ್ರೇಲಿಯಾ" 2005ರಲ್ಲಿ ಆರಂಭಗೊಂಡಿತು. ಫೆಲಿಕ್ಸ್ ಕ್ಯಾನೆ ಇತ್ತೀಚಿನ 2010ರ (ಬರುವ ವರ್ಷಕ್ಕೆ ಮಿಸ್ ಪೋಲ್ ಡ್ಯಾನ್ಸ್ 2011 ಎಂದು ಹೆಸರಿಸಲಾಗಿದೆ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದರು.[೧೪] ಮೊದಲ US ಕಂಬ-ನೃತ್ಯ ಫೆಡರೇಶನ್ (USPDF) ಚಾಂಪಿಯನ್‌ಶಿಪ್ ಅನ್ನು 2009ರ ಮಾರ್ಚ್ 19ರಂದು ನಡೆಸಲಾಯಿತು, ಇದರಲ್ಲಿ ಮೊದಲನೇ ಸ್ಥಾನವನ್ನು ಜೆನಿನ್ ಬಟರ್‌ಫ್ಲೈ ಗೆದ್ದುಕೊಂಡರು.[೧೫] ಕ್ರಿಸ್ಟಲ್ ಲೈ 2010ರ "ಮಿಸ್ ಪೋಲ್ ಡ್ಯಾನ್ಸ್ ಕೆನಡಾ"ವನ್ನು ಗೆದ್ದುಕೊಂಡರು, ಈಕೆ ವರ್ಲ್ಡ್ಸ್‌ನಲ್ಲಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿಯನ್ನೂ ಪಡೆದುಕೊಂಡರು.[೧೬] ಮಿಸ್ ಪೋಲ್ ಡ್ಯಾನ್ಸ್ ವರ್ಲ್ಡ್ 2009 ಅನ್ನು ಜಮೈಕಾದಲ್ಲಿ ನಡೆಸಲಾಯಿತು ಮತ್ತು ಇದನ್ನು ಎಲ್ಲಾ ರಾಷ್ಟ್ರದವರಿಗೆ ತೆರವುಗೊಳಿಸಲಾಗಿತ್ತು, ಇದರಲ್ಲಿ ಆಸ್ಟ್ರೇಲಿಯಾದ ಫೆಲಿಕ್ಸ್ ಕ್ಯಾನೆ ಮೊದಲನೇ ಸ್ಥಾನ ಪಡೆದರು.[೧೭] ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ಮತ್ತು ಎಲ್ಲಾ ರಾಷ್ಟ್ರದವರಿಗೆ ತೆರವುಗೊಂಡ 2010ರ ಮಿಸ್ ಪೋಲ್ ಡ್ಯಾನ್ಸ್ ವರ್ಲ್ಡ್ಅನ್ನು ಆಸ್ಟ್ರೇಲಿಯಾದ ಫೆಲಿಕ್ಸ್ ಕ್ಯಾನೆ ಗೆದ್ದುಕೊಂಡರು.[೧೮]

ಮಾಧ್ಯಮದಲ್ಲಿ ಕಂಬ-ನೃತ್ಯ[ಬದಲಾಯಿಸಿ]

ಇತರ ಶೈಲಿಗಳಂತೆ, ಕಂಬ-ನೃತ್ಯವನ್ನೂ ಸಹ ಅನೇಕ ಹೆಸರಾಂತ ವ್ಯಕ್ತಿಗಳು ಅನುಸರಿಸಿದ್ದಾರೆ. ನಟಿ ಶೈಲಾ ಕೆಲ್ಲಿ ಈ ಕ್ರೀಡೆಯಿಂದ ತುಂಬಾ ಪ್ರಭಾವಿತರಾಗಿದ್ದರು, ಇದನ್ನು ಆಕೆ ಸ್ವಂತ ಕಂಬ-ಆಧಾರಿತ ಅಂಗಸಾಧನೆ ಕಾರ್ಯಕ್ರಮವಾಗಿ ಬಿಡುಗಡೆಗೊಳಿಸಿದ ಡ್ಯಾನ್ಸಿಂಗ್ ಅಟ್ ದಿ ಬ್ಲೂ ಇಗ್ವಾನ ದಲ್ಲಿನ ತನ್ನ ಪಾತ್ರಕ್ಕೆ ತಯಾರಿ ನಡೆಸುವಾಗ ಕಲಿತುಕೊಂಡರು.[೧೯]

ಮೂರು ವರ್ಷಗಳ ಹಿಂದೆಯೇ ಕಂಬ-ನೃತ್ಯದ ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾರೆಂಬ ನಿಜಸಂಗತಿಯೊಂದಿಗೆ, ಮಿಸ್ USA 2010ರಲ್ಲಿ ರಿಮಾ ಫಾಕಿಹ್‌ರ ಗೆಲವು ಮಾಧ್ಯಮದ ಗಮನವನ್ನು ಸೆಳೆಯಿತು. [೨೦]

ಇವನ್ನೂ ಗಮನಿಸಿ‌[ಬದಲಾಯಿಸಿ]

  • ಗೊ-ಗೊ ನೃತ್ಯ
  • ಮಲ್ಲಖಂಬ್

ಉಲ್ಲೇಖಗಳು‌‌[ಬದಲಾಯಿಸಿ]

  1. ಕಂಬ-ನೃತ್ಯವು ಪ್ರದರ್ಶನ ಕಲೆಯನ್ನು ಯುಕ್ತವನ್ನಾಗಿ ಮಾಡುತ್ತಿದೆ, http://www.wbur.org/2010/04/02/pole-dance
  2. ಕಂಬ-ನೃತ್ಯ: ನಗ್ನ ಪ್ರದರ್ಶನ ನರ್ತಕರಿಗೆ ಮಾತ್ರವಲ್ಲ, http://abcnews.go.com/Travel/pole-dancing-strippers-anymore/story?id=10168196
  3. ಅಂಗಸಾಧನೆಗೆ ಕಂಬ-ನೃತ್ಯ, http://www.kpsplocal2.com/Content/Special-Feature/story/Pole-Dancing-for-Exercise/iao4iYWMV0qNfw1OP6b3Sw.cspx
  4. ಕೇಂಬ್ರಿಡ್ಜ್ ಯೂನಿವರ್ಸಿಟಿ ಸೊಸೈಟಿಯು ಕಂಬ-ನೃತ್ಯ ತರಬೇತಿಯನ್ನು ನೀಡುತ್ತದೆ, http://web.archive.org/web/20100417022251/http://www.google.com/hostednews/afp/article/ALeqM5jNVin7NeCHRArbeJRkTPdttX8QzQ
  5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  6. ಸ್ಟ್ರಿಪ್ಪಿಂಗ್ ಆಫ್ ದಿ ವೈಟ್, CBS ನ್ಯೂಸ್ ವೆಬ್‌ಸೈಟ್, 8/20/2007 ರಂದು ಮರುಸಂಪಾದಿಸಲಾಗಿದೆ.
  7. "Cambridge University society offers pole dancing tuition". AFP. 2010-04-13. 
  8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  9. ಪುರುಷರ ಕಂಬ-ನೃತ್ಯವು ಸುಮ್ಮನೆ ಸಮಯ ಕಳೆಯಲು ಸೂಕ್ತವಾಗಿರುತ್ತದೆ, http://sydney-central.whereilive.com.au/news/story/mens-pole-dancing-better-than-just-hanging-around/
  10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  11. ಕಂಬ-ನೃತ್ಯವನ್ನು ಒಂದು ಕ್ರೀಡೆಯಾಗಿ ಅಂಗೀಕರಿಸಲಾಗಿಲ್ಲ ಮತ್ತು ಒಲಿಂಪಿಕ್ಸ್‌ಗೆ ಹೆಸರು ಸೇರಿಸಲಾಗಿಲ್ಲ, http://www.nydailynews.com/lifestyle/2010/02/23/2010-02-23_pole_dancing_could_be_recognized_as_a_sport_and_headed_to_the_olympics_.html
  12. ಕಂಬ-ನೃತ್ಯವನ್ನು ಹೊಸ ಒಲಿಂಪಿಕ್ ಕ್ರೀಡೆಯಾಗಿ ಗುರುತಿಸಿ, http://www.bhsjacket.com/node/420
  13. ಕ್ರೀಡಾ ಅಭಿಮಾನಿಗಳೇ ಸಿದ್ಧರಾಗಿ, ಕಂಬ-ನರ್ತಕರು ಒಲಿಂಪಿಕ್ಸ್‌ಗೆ ಪ್ರವೇಶಿಸುತ್ತಿದ್ದಾರೆ, http://sports.yahoo.com/olympics/news?slug=ap-goldenpoles
  14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  15. http://www.youtube.com/v/8_NJiwIVu6k?fs=1&hl=en_US
  16. "Miss Pole Dance Canada". 
  17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  19. ಕಂಬ-ನೃತ್ಯ: ಇದು ಏನು ಮಾಡುತ್ತದೆಂದು ನಿಮಗೆ ತಿಳಿದಿದೆಯೇ?, http://www.ellecanada.com/living/health/pole-dancing-do-you-have-what-it-takes/a/24943
  20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]