ಮುಖ್ಯ ಪುಟ
ವಿಕಿಪೀಡಿಯಕ್ಕೆ ಸ್ವಾಗತ! ಕನ್ನಡ ವಿಕಿಪೀಡಿಯ ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಕನ್ನಡ ಆವೃತ್ತಿಯು ೨೧,೫೮೫ ವಿಷಯಗಳ ಕುರಿತಾದ ಪುಟಗಳನ್ನು ಹೊಂದಿದೆ. |
|
ವಿಶೇಷ ಸೂಚನೆ: ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲಿ ಮಾತ್ರ ಬರೆಯಿರಿ.
|
|
|
ಈ ತಿಂಗಳ ವಿಕಿಪೀಡಿಯ ಸಂಪಾದಕ |
ಈ ತಿಂಗಳ ವಿಕಿಪೀಡಿಯ ಸಂಪಾದಕರು ಶ್ರೀಕಾಂತ ಮಿಶ್ರಿಕೋಟಿ. ಇವರು ವಿಕಿಪೀಡಿಯದಲ್ಲಿ Shreekant.mishrikoti ಎಂದು ಪರಿಚಿತ. ಶ್ರೀಕಾಂತ ಮಿಶ್ರಿಕೋಟಿಯವರು ಮಾರ್ಚ್ ೨೦೦೬ರಿಂದ ವಿಕಿಪೀಡಿಯದಲ್ಲಿ ಸಂಪಾದನೆಯನ್ನು ಆರಂಭಿಸಿದ್ದಾರೆ. ಇವರು ಕನ್ನಡ ವಿಕಿಪೀಡಿಯಕ್ಕಿಂತ ಕನ್ನಡ ವಿಕಿಸೋರ್ಸ್‍ನಲ್ಲಿ ಹೆಚ್ಚು ಕೆಲಸ ಮಾಡಿದಾರೆ. ಪರಿಚಯಶ್ರೀಕಾಂತ ಮಿಶ್ರಿಕೋಟಿ ಅವರು ಮೂಲತಃ ಕರ್ನಾಟಕದ ಧಾರವಾಡದವರು. ಪ್ರಸ್ತುತ ಇವರು ಮುಂಬೈನಲ್ಲಿ ನೆಲೆಸಿದ್ದಾರೆ. ಇವರು ಮುಂಬೈಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಕಚೇರಿಯಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡ, ಕಂಪ್ಯೂಟರ್, ಓದು, ಸಂಗೀತ ಇವರ ಆಸಕ್ತಿಯ ಕ್ಷೇತ್ರ. ತಾವು ಓದಿದ ಒಳ್ಳೆಯ ಸಂಗತಿಗಳನ್ನು sampada.net ತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹರಿದಾಸ ತಾಣಕ್ಕಾಗಿ ಸಾವಿರಕ್ಕೂ ಹೆಚ್ಚು ದಾಸರ ಪದಗಳನ್ನು, ಚಿಲುಮೆ ತಾಣದಲ್ಲಿ ಆರುನೂರಕ್ಕೂ ಹೆಚ್ಚು ಶಿಶುನಾಳ ಶರೀಫರ ತತ್ವಪದಗಳನ್ನು ಕೀ ಇನ್ ಮಾಡಿದ್ದಾರೆ. ಕನ್ನಡ ಭಾಷೆಗೆ ಸ್ಪೆಲ್ ಚೆಕ್ಕರಾಗಿಯೂ ಲಿನೆಕ್ಸ್ ಕನ್ನಡ ಆವೃತ್ತಿಗಾಗಿಯೂ ಶ್ರಮಿಸಿದ್ದಾರೆ. ಕನ್ನಡ ವಿಕಿಪೀಡಿಯಕ್ಕಾಗಿ ಅನೇಕ ಲೇಖನಗಳನ್ನು ಇಂಗ್ಲಿಷ್‌ನಿಂದ ಅನುವಾದಿಸಿದ್ದಾರೆ. ಸದ್ಯಕೆ ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದ ಸುಮಾರು ೭೦೦೦ ಲೇಖನಗಳನ್ನು ಕನ್ನಡ ವಿಕಿಸೋರ್ಸ್‍ಸಿಗೆ ಸೇರಿಸಿದ್ದಾರೆ. ಕನ್ನಡ ವಿಕಿಪೀಡಿಯವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಡಿಜಿಟಲೀಕರಿಸಿ ಕನ್ನಡ ವಿಕಿಸೋರ್ಸ್ ತಾಣಕ್ಕೆ ಅಪ್ಲೋಡ್ ಮಾಡುವ ಗುರಿಯನ್ನು ಇಟ್ಟುಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ. |
ವಿಕಿಪೀಡಿಯ ಬಳಗದ ಇತರ ಯೋಜನೆಗಳು: | |||||||
ಮೆಟಾ-ವಿಕಿ ಪ್ರಾಜೆಕ್ಟ್ ಸಂಯೋಜನೆ |
ವಿಕಿಮೀಡಿಯ ಕಾಮನ್ಸ್ ಮೀಡಿಯಾ ಕಣಜ |
ವಿಕ್ಷನರಿ ಶಬ್ದಕೋಶ |
ವಿಕಿ ಬುಕ್ಸ್ ಪುಸ್ತಕಗಳು |
||||
ವಿಕಿ ಸೋರ್ಸ್ ಮುಕ್ತ ಸಾಹಿತ್ಯ |
ವಿಕಿ ಕೋಟ್ ಉಕ್ತಿಗಳು |
ವಿಕಿ ನ್ಯೂಸ್ ಸುದ್ದಿ |
ವಿಕಿ ಸ್ಪೀಷೀಸ್ ಜೈವಿಕ ಮಾಹಿತಿ |
ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ).