ಆಲ್ಫಾಲ್ಫ ಲೆಗ್ಯೊಮಿನೋಸಿ ಕುಟುಂಬದ ಪಾಪಿಲಿಯೊನೇಸಿ ವಿಭಾಗಕ್ಕೆ ಸೇರಿದ ಗಿಡ. ಲೊಸರ್ನ ಎಂದೂ ಕರೆಯಲಾಗುವ ಈ ಗಿಡಕ್ಕೆ ಕನ್ನಡದಲ್ಲಿ ಕುದುರೆ ಮಸಾಲೆಸೊಪ್ಪು ಎಂದು ಹೆಸರಿದೆ. ಇದನ್ನು ದನಗಳ ಮತ್ತು ಕುದುರೆಗಳ ಮೇವಿಗಾಗಿ ಹುಲ್ಲುಗಾವಲುಗಳಲ್ಲಿ ಬೆಳೆಸುತ್ತಾರೆ. ಮಣ್ಣಿನ ಸಾರವನ್ನು ಹೆಚ್ಚಿಸುವುದಕ್ಕಾಗಿಯೂ ಬೆಳೆಸುವುದಿದೆ.ಸಾಮಾನ್ಯವಾಗಿ 1'-4' ಎತ್ತರಕ್ಕೆ ಬೆಳೆಯುವ ಈ ಗಿಡದಲ್ಲಿ ನೆಲದಲ್ಲೇ ಭಾಗಶಃ ಹುದುಗಿರುವ ಮುಖ್ಯಕಾಂಡವಿದೆ. ಈ ಕಾಂಡದಿಂದ ಸುಮಾರು 20-30 ಸಣ್ಣ ರೆಂಬೆಗಳು ಮೇಲ್ಮುಖವಾಗಿ ಬೆಳೆಯುತ್ತದೆ. ಪ್ರತಿಯೊಂದು ರೆಂಬೆಯಲ್ಲಿಯೂ ಪರ್ಯಾಯ ಜೋಡಣೆ ಹೊಂದಿರುವ ಸಂಯುಕ್ತ ಎಲೆಗಳಿವೆ. ಒಂದೊಂದು ಸಂಯುಕ್ತ ಎಲೆಯಲ್ಲಿಯೂ ಮೂರು ಕಿರುಎಲೆಗಳಿವೆ. ರೆಂಬೆಗಳ ಮೇಲ್ಭಾಗದಲ್ಲಿರುವ ಎಲೆಗಳ ಕಂಕುಳಿನಿಂದ ರೇಸಿಮ್ ಹೂಗೊಂಚಲುಗಳು ಬೆಳೆಯುತ್ತವೆ ಹೂಗಳ ಬಣ್ಣ ಊದಾ. ಕಾಯಿಗಳು ಸುರುಳಿಯಾಗಿ ಸುತ್ತಿಕೊಂಡಿದ್ದು ಪ್ರತಿಯೊಂದರಲ್ಲಿಯೂ 2-8 ಅಥವಾ ಹೆಚ್ಚು ಹುರುಳಿ ಬೀಜದ ಆಕಾರದ ಚಿಕ್ಕ ಬೀಜಗಳಿವೆ. ಮುಖ್ಯಕಾಂಡದ ಕೆಳಭಾಗದಿಂದ ಭೂಮಿಯೊಳಕ್ಕೆ ಆಳವಾಗಿ ಇಳಿದಿರುವ ತಾಯಿಬೇರು ಪ್ರಮುಖವಾಗಿರುವ ಬೇರಿನ ಸಮೂಹ ಬೆಳೆಯುತ್ತದೆ. ಈ ತಾಯಿಬೇರು ಪರಿಸ್ಥಿತಿ ಅನುಕೂಲವಾಗಿದ್ದಾಗ 30'-50' ಆಳದವರೆಗೂ ಬೆಳೆಯಬಲ್ಲದು. (ಹೆಚ್ಚಿನ ಮಾಹಿತಿ...)
ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:
ಅಂತೂರಿಯಮ್ ಏರೇಸೀ ಕುಟುಂಬಕ್ಕೆ ಸೇರಿದ ಒಂದು ಜನಪ್ರಿಯ ಆಲಂಕಾರಿಕ ಸಸ್ಯ.(ಚಿತ್ರಿತ) ಈ ಜಾತಿಯ ಅನೇಕ ಪ್ರಭೇದಗಳು ಸುಂದರವಾದ ಎಲೆ, ಹೂಗೊಂಚಲ ಕವಚ (ಸ್ಪೇತ್) ಇರುವುದರಿಂದ ಇದಕ್ಕೆ ಬೇಡಿಕೆ ಹೆಚ್ಚು.
ಕಲ್ಲುಗೌಜಲು ಹಕ್ಕಿ ಹಕ್ಕಿಕೊಲಂಬಿಫಾರ್ಮಿಸ್ ಉಪಗಣದ ಟೀರೊಕ್ಲಿಡೀ ಕುಟುಂಬಕ್ಕೆ ಸೇರಿದ ವಿವಿಧ ಪ್ರಭೇದಗಳ ಹಕ್ಕಿಗಳಿಗಿರುವ ಸಾಮಾನ್ಯ ಹೆಸರು (ಸ್ಯಾಂಡ್ ಗ್ರೌಸ್).(ಚಿತ್ರಿತ) ಕೆಲವು ಲಕ್ಷಣಗಳಲ್ಲಿ ಇದು ಗೌಜಲು ಹಕ್ಕಿಗಳನ್ನು (ಗ್ರೌಸ್) ಹೋಲುವುದರಿಂದಲೂ ಹೆಚ್ಚಾಗಿ ಮರುಭೂಮಿಗಳಲ್ಲಿ ವಾಸಿಸುವುದರಿಂದಲೂ ಇದಕ್ಕೆ ಈ ಹೆಸರು. ಆದರೆ ವಾಸ್ತವವಾಗಿ ಇದು ಪಾರಿವಾಳದ ಹತ್ತಿರ ಸಂಬಂಧಿ.
ಸರೋಜಿನಿ ನಾಯ್ಡು “ಭಾರತದ ಕೋಗಿಲೆ” ಎನ್ನುವ ಹೆಸರಿನಿಂದಲೇ ಪ್ರಸಿದ್ಧಿಯಾಗಿದ್ದಾರೆ. ಚಿಕ್ಕಂದಿನಲೇ ಪ್ರಸಿದ್ಧಿ ಹೊಂದಿದ್ದ ಇವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು, ಕವಿಗಳು.
ಕಲ್ಕತ್ತ ವಿಶ್ವವಿದ್ಯಾಲಯ ಆಧುನಿಕ ಭಾರತದ ಅತ್ಯಂತ ಹಳೆಯ ವಿಶ್ವವಿದ್ಯಾಲಯ. ೧೮೫೭ರಲ್ಲಿ ಕಲ್ಕತ್ತದಲ್ಲಿ ಸ್ಥಾಪಿತವಾಯಿತು.
ಆಲಾಪನೆ ಭಾರತೀಯ ಸಂಗೀತದ ವೈಶಿಷ್ಟ್ಯಗಳಲ್ಲಿ ಮುಖ್ಯವಾದುದು. ಗಾಯಕರ, ವಾದಕರ, ಕಲಾಸೃಷ್ಟಿ ವೈಭವದ ಪರಾಕಾಷ್ಠೆಯೂ ಆಗಿರುವ ಇದು ಕಡೆಯಪಕ್ಷ ಎರಡು ಸಾವಿರ ವರ್ಷಗಳಷ್ಟು ಪ್ರಾಚೀನವಾದುದು
ಅಲಾವುದ್ದೀನ್ ಖಿಲ್ಜಿ (1296-1316). ಜಲಾಲುದ್ದೀನ್ ಖಿಲ್ಜಿಯ ಅಳಿಯ, ಉತ್ತರಾಧಿಕಾರಿ. ಈತ ದೆಹಲಿ ಸುಲ್ತಾನರಲ್ಲೆಲ್ಲ ಅತಿ ಕ್ರೂರಿ ಮತ್ತು ಬಲಿಷ್ಠ. ಭಾರತದಲ್ಲಿ ವಿಶಾಲ ಮಹಮ್ಮದೀಯ ಸಾಮ್ರಾಜ್ಯವನ್ನು ಸ್ಥಾಪಿಸಲೆತ್ನಿಸಿದವರಲ್ಲಿ ಮೊದಲಿಗ.
ಅವಲೋಕಿತೇಶ್ವರ ಅಮಿತಾಭನೆಂಬ ಧ್ಯಾನಿಬುದ್ಧನ ಸತ್ತ್ವದಿಂದ ಹುಟ್ಟಿ ಬಂದ ಬೋಧಿಸತ್ತ್ವನಿಗೆ ಈ ಹೆಸರಿದೆ. ಮಹಾಯಾನ ಬೌದ್ಧರ ನಂಬಿಕೆಯಂತೆ ಧ್ಯಾನಿಬುದ್ಧರು ತಮ್ಮ ಸತ್ತ್ವಗಳಿಂದ ಇಂಥ ಜಿನಪುತ್ರರನ್ನು ಅಥವಾ ಬೋಧಿಸತ್ತ್ವರನ್ನು ಉತ್ಪಾದಿಸುತ್ತಾರೆ. ಜಗತ್ತನ್ನು ಕರುಣೆಯಿಂದ ಕಾಣುವವನು ಎಂಬುದು ಅವಲೋಕಿತೇಶ್ವರ ಎಂಬ ಪದದ ಅರ್ಥ
ಅಕ್ರಿಡಿನ್ ಸಾರಜನಕದ ಪರಮಾಣುವೊಂದನ್ನುಳ್ಳ ಮಿಶ್ರಚಕ್ರೀಯ (ಹೆಟೆರೋಸೈಕ್ಲಿಕ್) ಸಂಯುಕ್ತ ಇದನ್ನು ಮುಂದೆ ತೋರಿಸಿರುವ ಅಣುಸೂತ್ರದಿಂದ ನಿರೂಪಿಸಬಹುದು
ಜನವರಿ ೨೬: ಸುಪ್ರಸಿದ್ಧ ವ್ಯಂಗ್ಯಚಿತ್ರಕಾರ, ಲೇಖಕ, ಆರ್.ಕೆ.ಲಕ್ಷ್ಮಣ್ ಪುಣೆಯಲ್ಲಿ ಕೊನೆಯುಸಿರೆಳೆದರು.
ಜನವರಿ ೭: ಪ್ಯಾರಿಸ್ ನಲ್ಲಿ ಉಗ್ರರ ಅಟ್ಟಹಾಸ, ಫ್ರೆ೦ಚ್ ಸಾಪ್ತಾಹಿತ ವಿಡಂಬನಾ ಪತ್ರಿಕೆ "ಛಾರ್ಲಿ ಹೆಬ್ಡೊ" ಕಚೇರಿಯ ಮೇಲೆ ಹಲ್ಲೆ, ವಿಖ್ಯಾತ ವ್ಯಂಗ್ಯಚಿತ್ರಕಾರರು ಸೇರಿ ೧೩ ಜನರ ಹತ್ಯೆ.
ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ).